ಅರೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ನಲ್ಲಿ ಲಕ್ಷಾಂತರ ರು. ಅವ್ಯವಹಾರ ನಡೆದಿದ್ದು ಸರ್ಕಾರವು ಕೂಡಲೇ ತನಿಖೆ ನಡೆಸಬೇಕು ಎಂದು ಜಿಪಂ ಮಾಜಿ ಸದಸ್ಯ ಅಮಿತ್ ಶೆಟ್ಟಿ ಒತ್ತಾಯಿಸಿದರು .
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅರೇಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ನ ವ್ಯವಾಸ್ಥಾಪಕ ಚನ್ನಕೇಶವ ಎಂಬುವವರು ರೈತರ ಹೆಸರಿನಲ್ಲಿ ಭಾರಿ ಗೋಲ್ಮಾಲ್ ಆದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದು ಈ ಬಗ್ಗೆ ಸೂಕ್ತ ಉನ್ನತ ಮಟ್ಟದ ತನಿಖೆ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಹಕಾರಿ ಸಚಿವರಿಗೆ ದೂರನ್ನು ನೀಡಲಾಗಿದೆ . ಸಮ್ಮಿಶ್ರ ಸರ್ಕಾರದ ಕಾಲಾವಧಿಯ ಅಗಿದ್ದ ಸಾಲಮನ್ನಾ ದಲ್ಲೂ ಭಾರೀ ಅವ್ಯವಹಾರವನ್ನು ಮಾಡಿದ್ದು ರೈತರ ಬಳಿ ಮೂರು ನಾಲ್ಕು ಸಲ ಖಾಲಿ ಚೆಕ್ ಹಾಗೂ ಓಚರ್ ಗಳಿಗೆ ಸಹಿ ಮಾಡಿಸಿಕೊಂಡು ನೇರವಾಗಿ ರೈತರ ಖಾತೆಗೆ ಹಣ ಹಾಕಿಸಿ ಅವರೇ ಡ್ರಾ ಮಾಡಿಕೊಂಡು ಮೋಸ ಮಾಡಿದ್ದಾರೆ. ಆರ್ಟಿಜಿಎಸ್ ಮುಖಾಂತರ ಹೆಚ್ಚುವರಿ ಲಕ್ಷಾಂತರ ಹಣವನ್ನು ನಮ್ಮಗಳ ಖಾತೆಗೆ ಹಣ ಹಾಕಿಸಿ ಡ್ರಾ ಮಾಡಿಸಿಕೊಂಡಿರುತ್ತಾರೆ ಎಂದು ದೂರಿದರು .
ಜಂಟಿ ಖಾತೆಯಲ್ಲಿ ಇದ್ದಂತ ಸಾಲದ ಖಾತೆಗಳನ್ನು ರೈತರಿಗೆ ಗೊತ್ತಾಗದ ಹಾಗೆ ಪ್ರತ್ಯೇಕ ಗೊಳಿಸಿ ಕಡಿಮೆ ಸಾಲ ಹೆಚ್ಚು ಮಾಡಿ ಸೆಲ್ಫ್ ಚೆಕ್ ಮುಖಾಂತರ ಹಣ ಡ್ರಾ ಮಾಡಿ ಹೆಚ್ಚಿನ ಸಾಲ ತೋರಿಸುತ್ತಾರೆ. ಆರ್ ಟಿ ಜಿ ಎಸ್ ಮುಖಾಂತರ ಲಕ್ಷಾಂತರ ಹಣವನ್ನು ರೈತರ ಖಾತೆಗೆ ಹಾಕಿಸಿ ಡ್ರಾ ಮಾಡಿಕೊಂಡಿರುತ್ತಾರೆ.ಕಾಣದ ಕೈಗಳ ಸಹಾಕಾರದಿಂದ ನಕಲಿ ಕಿಸಾನ್ ಕಾರ್ಡ್ ಬಳಸಿ ಸರ್ಕಾರದಿಂದ ಬಂದಿರುವ ಅತಿವೃಷ್ಟಿ ಪಿಎಂ ಕಿಸಾನ್ ಹಣವನ್ನು ಡ್ರಾ ಮಾಡಿಕೊಂಡಿರುತ್ತಾರೆ,ರೈತರಿಗೆ ಅರೇಹಳ್ಳಿ ಪಿಎಸಿಸಿ ಬ್ಯಾಂಕಿನ ಖಾತೆಗಳಲ್ಲಿ ಒಂದು ಲೆಕ್ಕ, ಹಾಗೂ ಬೇಲೂರಿನ ಹೆಚ್ ಡಿಸಿಸಿ ಬ್ಯಾಂಕಿನ ಆನ್ ಲೈನ್ ಖಾತೆಗಳಲ್ಲಿ ಮತ್ತೊಂದು ಲೆಕ್ಕ ತೋರಿಸುತ್ತಾರೆ. ಕೆಲವು ರೈತರ ಖಾತೆಗಳಲ್ಲಿ ಎಲ್ಲಾ ಹಣ ಡ್ರಾ ಮಾಡಿಕೊಂಡಿರುತ್ತಾರೆ ಇದಕ್ಕೆ ಸಂಭಂದಪಟ್ಟಂತೆ ರೈತರು ಲೆಕ್ಕ ಕೇಳಲು ಹೋದರೆ ಕೊಡಲು ಬರುವುದಿಲ್ಲ ಎಂದು ಉಡಾಫೆ ತೋರುತ್ತಾರೆ . ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಡಿಆರ್ ಮತ್ತು ಎಆರ್ ಗೆ ದೂರು ನೀಡಿದ್ದು ಬ್ಯಾಂಕಿಗೆ ವಿವರವನ್ನು ಕೇಳಿ ನೋಟಿಸ್ ಜಾರಿ ಮಾಡಿರುತ್ತಾರೆ . ಸರ್ಕಾರವು ಕೂಡಲೇ ಎಚ್ಚೆತ್ತು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು .
ಈ ಸಂದರ್ಭದಲ್ಲಿ ಜಿಲ್ಲಾ ಷೇರುದಾರ ವಾಟೇಹಳ್ಳಿ ಚಂದ್ರಶೇಖರ್ , ಲಕ್ಕುಂದ ಗ್ರಾಪಂ ಸದಸ್ಯ ವಿಜಯ ರಾಜ್ , ಷೇರುದಾರ ಗುಂಡ ಅರಸ್, ಚಂದ್ರಶೇಖರ್ ಇದ್ದರು
ಈ ಸಂದರ್ಭದಲ್ಲಿ ಜಿಲ್ಲಾ ಷೇರುದಾರ ವಾಟೇಹಳ್ಳಿ ಚಂದ್ರಶೇಖರ್ , ಲಕ್ಕುಂದ ಗ್ರಾಪಂ ಸದಸ್ಯ ವಿಜಯ ರಾಜ್ , ಷೇರುದಾರ ಗುಂಡ ಅರಸ್, ಚಂದ್ರಶೇಖರ್ ಇದ್ದರು
Tags
ಬೇಲೂರು