ಮೆ.ವಿ-ಗಾರ್ಡ್ ವತಿಯಿಂದ ಹಿಮ್ಸ ಗೆ ಕೊಡುಗೆ

ಹಾಸನ ಮೆ.ವಿ-ಗಾರ್ಡ್ ಇಂಡಸ್ಟ್ರೀಸ್ ಲಿಮಿಟೆಡ್, ಬೆಂಗಳೂರುರವರು ಕೊರೋನಾ ರೋಗಿಗಳ ಚಿಕಿತ್ಸೆಯ ಅನುಕೂಲಕ್ಕಾಗಿ 01-ವೆಂಟಿಲೇಟರ್, 125-ಪಿ.ಪಿ.ಇಕಿಟ್, 500-ಓ-95 ಮಾಸ್ಕ್  ಹಾಗೂ 20-ವೆಂಟಿಲೇಟರ್ ಮಾಸ್ಕ್‍ಗಳನ್ನು ಇಂದು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ  ದೇಣಿಗೆಯಾಗಿ ನೀಡಿದರು. 
ಈ ಸಂದರ್ಭದಲ್ಲಿ ಹಿಮ್ಸ್ ಸಂಸ್ಥೆಯ ನಿರ್ದೇಶಕರಾದ ಡಾ. ಬಿ.ಸಿ. ರವಿಕುಮಾರ್‍ರವರು  ಮಾತನಾಡುತ್ತಾ  ಮೆ.ವಿ-ಗಾರ್ಡ್ ಇಂಡಸ್ಟ್ರೀಸ್ ಲಿಮಿಟೆಡ್, ಬೆಂಗಳೂರುರವರು ಹಲವಾರು ವರ್ಷಗಳಿಂದ ಮಾರುಕಟ್ಟೆಯಲ್ಲಿ ತನ್ನದೇ ಆದ ಚಾಪನ್ನು ಹೊಂದಿ ಜನ ಸಮುದಾಯಕ್ಕೆ ಉತ್ತಮ ಸೇವೆಯನ್ನು ಒದಗಿಸುವುದರ ಜೊತೆಗೆ ಸಾಮಾಜಿಕ ಕೈಂಕರ್ಯ ನಡೆಸುತ್ತಿರುವುದು ಶ್ಲಾಘನೀಯ ಇವರು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಅತ್ಯಂತ ಅವಶ್ಯಕತೆ ಇರುವ ಹಾಗೂ ಬೆಲೆಬಾಳುವಂತಹ ಸಾಮಗ್ರಿಗಳನ್ನು ಸಂಸ್ಥೆಗೆ ದೇಣಿಗೆ ನೀಡುವ ಮೂಲಕ ಸಮಾಜದಲ್ಲಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
 ಸಮಾಜಮುಖಿ ಕಾರ್ಯಕ್ರಮಗಳನ್ನು ಇನ್ನಷ್ಟು ನೇರವೇರಿಸುವ  ಮೂಲಕ ಯಶೋಗಾಥೆ ಜನಮನದಲ್ಲಿ ಚಿರಸ್ಥಾಯಿಯಾಗಿ ನಿಲ್ಲುವಂತಾಗಲಿ ಎಂದು  ಹಾರೈಸಿ ಹಿಮ್ಸ್ ಸಂಸ್ಥೆಯ ಪರವಾಗಿ ಅಭಿನಂದನಾ ಪತ್ರವನ್ನು ನೀಡಿದರು. 
ಸದರಿ ಸಮಾರಂಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಕೃಷ್ಣಮೂರ್ತಿ. ವಿ.ಆರ್,  ಮೆ.ವಿ-ಗಾರ್ಡ್ ಬ್ಯ್ರಾಂಚ್ ಮ್ಯಾನೇಜರ್ ಹಷೇಂದ್ರ ಪ್ರಸಾದ್,  ಬೆಂಗಳೂರು, ಚಂದ್ರಶೇಖರ್ ವಿ. ಅಸಿಸ್ಟೆಂಟ್ ಮ್ಯಾನೇಜರ್, ಬೆಂಗಳೂರು,  ಡಾ.ಪ್ರಸನ್ನ ಕುಮಾರ್, ಡಾ.ಈಶ್ವರ್ ಪ್ರಸಾದ್, ಡಾ.ಪ್ರವೀಣ್, ಡಾ.ಸುಧನ್ವ ಹಾಗೂ  ವೈದ್ಯರುಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

Post a Comment

Previous Post Next Post