ಕಿಲ್ಲರ್ ಕೊರೋನಾಗೆ ಆಲೂರು ತಾಲೂಕಿನಲ್ಲಿ ಮೊದಲ ಬಲಿ

ಆಲೂರು : ತಾಲೂಕಿನ ಟಿ.ಗುಡ್ಡೇನಹಳ್ಳಿ ಗ್ರಾಮದ 32 ವರ್ಷದ ವ್ಯಕ್ತಿಯೊಬ್ಬರು ಕೋವಿಡ್ ಸೋಂಕಿನಿಂದ ಇಂದು ಮೃತಪಟ್ಟಿರುತ್ತಾರೆ. ಇವರು ಜೂನ್ 24ರಂದು ಬೆಂಗಳೂರಿನಿಂದ ಸ್ವ ಗ್ರಾಮಕ್ಕೆ ಬಂದು ನಂತರ ಹಾಸನದ ಹಿಮ್ಸ್ ಕೋವಿಡ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತಿದ್ದರು.ಇವರಿಗೆ SARI..ಅಂದರೆ ತೀವ್ರ ಉಸಿರಾಟದ ತೊಂದರೆಯ ಲಕ್ಷಣಗಳು ಇದ್ದವು ಎನ್ನಲಾಗಿತ್ತು ಆದರೆ ಇಂದು ಮುಂಜಾನೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.


ಮೃತರ ಅಂತ್ಯ ಕ್ರಿಯೆಯನ್ನು ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಹಾಸನದಲ್ಲಿ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

Post a Comment

Previous Post Next Post