ಹಾಸನ ಜಿಲ್ಲೆಯಲ್ಲಿ ಇಂದು ಸಹ ಕೋವಿದ್ 19 ಗೆ ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ಹಾಸನ ನಗರದ 57 ವರುಷದ ಪುರುಷ ಹಾಗೂ ಆಲೂರು ತಾಲ್ಲೂಕಿನ 45 ವರ್ಷದ ಮಹಿಳೆ ಸೋಂಕಿನಿಂದ ನಗರದ ಕೊವಿದ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಹಾಸನ ನಗರದ 57 ವರ್ಷದ ಪುರುಷ ಸೋಂಕಿತರು ಜು 5 ರಂದು ಕೊವಿದ್ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಾಣದ ಕಾರಣ ಜು 10 ರಂದು ಐ.ಸಿ.ಯು ನಲ್ಲಿ ಇರಿಸಿ ವೆಂಟಿಲೇಟರ್ ಸೌಲಭ್ಯ ಒದಗಿಸಲಾಗಿತ್ತು .
ಕಳೆದ ರಾತ್ರಿ 1.50 am ge ಅವರು ಹೃದಯ ಸ್ತಂಭನದಿಂದ ಕೊನೆ ಉಸಿರೆಳೆದಿದ್ದಾರೆ .
ಅದೇ ರೀತಿ ಜು 11ರಂದು ಸೋಂಕಿನಿಂದ ದ ಕೊವಿದ್ ಆಸ್ಪತ್ರೆಗೆ ದಾಖಲಾಗಿ ಐ.ಸಿ ಯು ನಲ್ಲಿ ಇರಿಸಲಾಗಿದ್ದ 45 ವರ್ಷದ ಮಹಿಳೆ ಕೂಡ ಇಂದು 11:45 am ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ ಕೃಷ್ಣಮೂರ್ತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಸತೀಶ್ ತಿಳಿಸಿದ್ದಾರೆ
Tags
ಹಾಸನ