ಮಾಲೇಕಲ್ಲು ತಿರುಪತಿಯಲ್ಲಿ ಎರಡು ವರ್ಷದ ಗಂಡು ಚಿರತೆ ಸೆರೆ

ಅರಸೀಕೆರೆ: ಮಾಲೇಕಲ್ಲು ತಿರುಪತಿ ರಸ್ತೆಯಲ್ಲಿ ಎರಡು ವರ್ಷದ ಗಂಡು ಚಿರತೆ ಒಂದು ಬೋನ್‍ಗೆ ಬಿದ್ದಿದೆ
ತಾಲ್ಲೂಕಿನ ಈ ಭಾಗದಲ್ಲಿ ಚಿರತೆ ಓಡಾಟವನ್ನು ಕಂಡ ಪ್ರತಕ್ಯಕ್ಷ ದರ್ಶಿ ಟಿ.ಎಸ್ ಗಿರೀಶ್ ಮತ್ತಿತರ ಗ್ರಾಮಸ್ಥರು ಅರಣ್ಯ ಇಲಾಖೆಗೆ ಚಿರತೆ ಹಿಡಿಯುವಂತೆ ಮನವಿ ಮಾಡಿದ್ದರು ಚಿರತೆ ಓಡಾಟದ ಸುಳಿವು ಇರುವ ಕಡೆಗಳಲ್ಲಿ ಅರಣ್ಯ ಇಲಾಖೆ ಇಡಲಾಗಿದ್ದ  ಬೋನ್‍ಗೆ ಎರಡು ವರ್ಷದ ಗಂಡು ಚಿರತೆಯೊಂದು ಬಿದ್ದಿದ್ದು ಸುತ್ತಮುತ್ತಲ ಗ್ರಾಮಸ್ಥರು ಹಾಗು ಆ ಭಾಗದಲ್ಲಿ ಓಡಾಡುವ ಹಾಗೂ ಜನರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಇದೇ ಭಾಗದಲ್ಲಿ ಇನ್ನು ಕೆಲ ಚಿರತೆಗಳ ಸಂಚಾರವಿದ್ದು ಅದನ್ನು ಸೆರೆಹಿಡಿಯುವ ಕೆಲಸ ಆಗಬೇಕಿದ್ದು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ವಲಯ ಅರಣ್ಯಾಧಿಕಾರಿ ದಯಾನಂದ್ ತಿಳಿಸಿದ್ದಾರೆ.

Post a Comment

Previous Post Next Post