ಬೇಲೂರು ಜನಸಂಖ್ಯಾ ಸ್ಪೋಟದಿಂದ ದೇಶದ ಅಭಿವೃದ್ಧಿಗೆ ಮಾರಕವಾಗುತ್ತಿದ್ದು ವಿಶ್ವದಲ್ಲೇ ಭಾರತ ಎರಡನೇ ಸ್ಥಾನದಲ್ಲಿದೆ ಎಂದು ಶಾಸಕ ಕೆ ಎಸ್ ಲಿಂಗೇಶ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತಿ ಮುಂಭಾಗದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಜನಸಂಖ್ಯೆ ದಿನಾಚರಣೆಯ ಅಂಗವಾಗಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಕೆ ಎಸ್ ಲಿಂಗೇಶ್ ವಿಶ್ವದ ಜನಸಂಖ್ಯೆ ಶೇ ೧೭.೭೪ ರಷ್ಟಿದ್ದು ಭಾರತದಲ್ಲಿ ಇದ್ದು,ಇದೇ ರೀತಿ ಜನಸಂಖ್ಯೆ ಏರುತ್ತಾ ಹೋದರೆ ೨೦೫೦ ರಲ್ಲಿ ಭಾರತ ಚೀನವನ್ನು ಹಿಂದಿಕ್ಕಲಿದೆ ಆದ್ದರಿಂದ ಜನಸಂಖ್ಯೆ ನಿಯಂತ್ರಣಕ್ಕೆ ಕುಟುಂಬ ಕಲ್ಯಾಣ ಇಲಾಖೆಯ ಯೋಜನೆಗಳ ಸುರಕ್ಷಿತ ವಿಧಾನಗಳನ್ನು ಅನುಸರಿಸಿ ನಿಯಂತ್ರಿಸಲು ಮುಂದಾಗಬೇಕು.ಹಿಂದಿನ ಕಾಲದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸಂಪನ್ಮೂಲ ಇರುತ್ತಿತ್ತು. ಇಂದಿನ ದಿನಗಳಲ್ಲಿ ಸಂಪನ್ಮೂಲ ಕೊರತೆಯಿಂದಾಗಿ ದೇಶದ ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಉದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದ್ದು,ಸಾಮಾಜದ ಸ್ವಸ್ಥ್ಯ ಇಲ್ಲದಂತಾಗಿದೆ.ಎಂದು ತಿಳಿಸಿದರು.
ತಾಲೂಕು ಪಂಚಾಯತಿ ಅಧ್ಯಕ್ಷೆ ಇಂದಿರಾ ರವಿಕುಮಾರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ತಮ್ಮ ಮೌಡ್ಯದಿಂದಾಗಿ ಗಂಡು ಮಕ್ಕಳ ಬಗ್ಗೆ ವ್ಯಾಮೋಹ ಹುಟ್ಟಿ ಜನಸಂಖ್ಯೆಯ ಬಗ್ಗೆ ಅರಿವಿಲ್ಲದಂತೆ ನೆಡೆದುಕೊಳ್ಳುತ್ತಿದ್ದೇವೆ ಎಂದರು.
ತಾಲೂಕು ಆಡಳಿತ ವೈಧ್ಯಾಧಿಕಾರಿ ಡಾ,ವಿಜಯ್ ಮಾತನಾಡಿ ಪ್ರತಿವರ್ಷವು ಸಹ ಜನಸಂಖ್ಯೆ ದಿನಾಚರಣೆಯನ್ನು ಶಾಲಾಕಾಲೇಜುಗಳಲ್ಲಿ ಆಚರಿಸಲಾಗುತ್ತಿತ್ತು.ಆದರೆ ಇತ್ತೀಚಿನ ದಿನಗಳಲ್ಲಿ ಕೋವಿಡ್‌೧೯ ನಿಂದಾಗಿ ಸಾಂಕೇತಿಕವಾಗಿ ಪ್ರತೀ ಗ್ರಾಮಗಳಲ್ಲೂ ಸಹ ಸಂಚರಿಸಲು ಈ ಜಾಥಾ ರಥಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ, ನರಸೇಗೌಡ,ಆರೋಗ್ಯ ಇಲಾಖೆಯ ಸಹಾಯಕರಾದ ಚಂದ್ರಮ್ಮ,ಭಾರತಿ, ಕೃಷ್ಣಪ್ಪ, ದಯಾನಂದ್ ಹಾಜರಿದ್ದರು.
Tags
ಬೇಲೂರು