ಹಾಸನ: ಕೊರೋನ ಸೋಂಕಿನಿಂದ ಮೃತಪಟ್ಟವರ
ಕಂಡರೆ ಆಪ್ತ ರಕ್ತ ಸಂಬಂದಿಕರೆ ಹತ್ತಿರಕ್ಕೆ ಬಾರದ ಸಂದರ್ಭದಲ್ಲಿ ಹಾಸನದ ಪಿ ಎಫ್ ಐ ಕಾರ್ಯಕರ್ತರು ಸ್ವಯಂ ಪ್ರೇರಿತವಾಗಿ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಗೌರವ ಪೂರ್ವಕವಾಗಿ ಶವ ಧಫನ್ ಮಾಡುತ್ತಾರೆ.
ಅಂತ್ಯಕ್ರಿಯೆ ನೆರವೇರಿಸುವ
ಪಿಎಫ್ಐ ಯುವಕರ ತಂಡ ಜಿಲ್ಲಾಡಳಿತ ನೀಡುವ ಪಿಪಿಇ ಕಿಟ್ ಧರಿಸಿ ವಿಧಿವಿಧಾನ ಪ್ರಕಾರ ಅಂತಿಮ ಕಾರ್ಯ ಗೌರವ ಪೂರ್ವಕವಾಗಿ ಪೂರ್ಣಗೊಳಿಸುತ್ತಿದೆ.
ಶವಗಳ ಅಂತ್ಯಸಂಸ್ಕಾರ ನೆರವೇರಿಸಿದೆ
ಸೋಂಕಿನಿಂದ ಮೃತಪಟ್ಟಾಗ ಆರೋಗ್ಯ ಅಧಿಕಾರಿಗಳು ಫೋನ್ ಮೂಲಕ ಮಾಹಿತಿ ನೀಡುತ್ತಾರೆ. ವಾಹನದೊಂದಿಗೆ ಆಸ್ಪತ್ರೆಗೆ ತೆರಳುವ ಕಾರ್ಯಕರ್ತರು ಸರಕಾರಿ ಸಿಬ್ಬಂದಿ ಕುಟುಂಬ ಸದಸ್ಯರಲ್ಲಿ ಚರ್ಚಿಸಿ ಶವವನ್ನು ತೆಗೆದುಕೊಂಡು ಹೋಗುತ್ತಾರೆ.
ಕೋರಾನ ಸೋಂಕಿನಿಂದ ಸಾವಿಗೀಡಾಗುವ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು ಅಂತ್ಯಕ್ರಿಯೆ ಪ್ರಕ್ರಿಯೆಗೆ ಇನ್ನಷ್ಟು ಸದಸ್ಯರನ್ನು ಸೇರಿಸಿಕೊಂಡು ಹೆಚ್ಚುವರಿಯಾಗಿ ತಲಾ ಆರು ಜನರನ್ನು ಒಳಗೊಂಡ ನಾಲ್ಕು ತಂಡ ರಚಿಸಲು ಪಿಎಸ್ಐ ಮುಖಂಡರು ನಿರ್ದರಿಸಿದ್ದಾರೆ.
ಮೃತ ವ್ಯಕ್ತಿಯನ್ನು ಗೌರವದಿಂದ ಬಿಳ್ಕೊಡಬೇಕೆಂಬ ಉದ್ದೇಶದಿಂದ ಅಂತ್ಯಸಂಸ್ಕಾರ ಕಾರ್ಯದಲ್ಲಿ ತೊಡಗಿದ್ದೇವೆ. ಜಿಲ್ಲಾಡಳಿತ ಸಹಕಾರದೊಂದಿಗೆ ಹಾಸನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂದರು.
ಸರಕಾರದ ಶಿಷ್ಟಾಚಾರ ಪ್ರಕಾರ ತರಬೇತಿ ನೀಡಲಾಗಿದ್ದು. ಪಿಪಿಇ ಕಿಟ್ಗಳನ್ನು ಜಿಲ್ಲಾಡಳಿತ ನೀಡುತ್ತಿದ್ದೆ. ನಗರಸಭೆ ಮೂಲಕ ಜೆಸಿಬಿಯಲ್ಲಿ ಗುಂಡಿತಗೆಯಲಾಗುತ್ತದೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ ಮಾರ್ಗ ದರ್ಶನದಲ್ಲಿ ಸಕಲಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.
ಮಲ್ನಾಡ್ ಮೆಹಬೂಬ್
Tags
ಹಾಸನ