ಕೊರೊನಾದಿಂದ ಸಂಕಷ್ಟದಲ್ಲಿರುವ ಕುಟುಂಬದವರಿಗೆ ಪಡಿತರ ಕಿಟ್

ಹಾರನಹಳ್ಳಿ: ಬೆಂಗಳೂರುನಗರ ಜಿಲ್ಲಾಪಂಚಾಯತಿ ಅಧ್ಯಕ್ಷರು ಬಿಜೆಪಿ ಮುಖಂಡರು ಆದ ಜಿ.ಮರಿಸ್ವಾಮಿಯವರು ಹಾರನಹಳ್ಳಿ  ಸೂತ್ತಮೂತ್ತಲ ಹಳ್ಳಿಯ ಗ್ರಾಮಸ್ಥರುಗಳಿಗೆ,  ಕೊರೊನಾ ದಿಂದ ಸಂಕಷ್ಟದಲ್ಲಿರು ಜನರಿಗೆ ಪಡಿತರ ಕಿಟ್ ನ್ನು ಹಾರನಹಳ್ಳಿಯಲ್ಲಿ ವಿತರಿಸಿ ಮಾತನಾಡಿ.ಕೊರೊನಾ ಮಹಾ ಮಾರಿ ರೋಗ ಸಮುದಾಯಕ್ಕೆ ಹರಡುತ್ತಿದ್ದೆ ಜನರು ಸರ್ಕಾರದ ನಿಯಮಗಳನ್ನು ಕಟ್ಟು ನಿಟ್ಟಿನಿಂದ ಪಾಲಿಸ ಬೇಕು ಆರೋಗ್ಯ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳು ಶ್ರಮ ವಹಿಸಿ ಕಾರ್ಯ ನಿರ್ವಹಿಸುತ್ತಿದ್ದೆ ಈ ನಿಟ್ಟಿನಲ್ಲಿ ಜನರ ಸಹಕಾರ ಅತಿ ಮುಖ್ಯ ಎಂದರು ಕಳೆದ ಚುನಾವಣೆ ಯಲ್ಲಿ ಅರಸೀಕೆರೆ ಕ್ಷೇತ್ರ ದಿಂದ ನನ್ನಗೆ 28 ಸಾವಿರ ಮತ ನೀಡಿ ಆಶೀರ್ವದಿಸಿದ್ದಿರಾ ನಿಮ್ಮ ಸಹಕಾರ ಅಭಿಮಾನ ಹೀಗೆ ಮುಂದುವರೆಯಲ್ಲಿ ಎಂದ ಅವರು ಹಾರನಹಳ್ಳಿ ಕೋಡಮ್ಮ ದೇವಿ ದೇವಾಲಯ ಪಕ್ಕ ಇರುವ   ಒಕ್ಕಲಿಗರ ರಾಮ ಮಂದಿರದ ಮುಂದು ವರೆದ ಕಾಮಗಾರಿಗೆ ಹಣ ಸಹಾಯ ಮಾಡಿಸುವುದಾಗಿ ಭರವಸೆ ನೀಡಿದ್ದರು. ಪುರಾಣ ಪ್ರಸಿದ್ಧ ಶ್ರೀ ಚನ್ನಕೇಶವ ದೇವಾಲಯ ಕ್ಕೆ ಬೇಟಿ ನೀಡಿ ದೇವಾಲಯ ವಾಸ್ತು ಶಿಲ್ಪಗಳ ಬಗ್ಗೆ ಮಾಹಿತಿ ಪಡೆದು ಕೊಂಡರು.
 ಬಿಜೆಪಿ ಗ್ರಾಮಾಂತರ ಮಂಡಲ ಮಾಜಿ ಅಧ್ಯಕ್ಷರು ಜಿವಿಟಿ ಬಸವರಾಜು ಮಾತನಾಡಿ.ನಗರದಲ್ಲಿ ಕೆಲಸ ಮಾಡುತ್ತಿದ್ದ ಕುಟುಂಬಗಳು ಕೊರೊನಾಗೆ ಹೆದರಿ ಹಳ್ಳಿ ಸೇರಿದ್ದಾರೆ ಜನರು ಕಷ್ಠದ ಪರಿಸ್ಥಿತಿ ಅರಿತು ರಾಜ್ಯ ,ಕೇಂದ್ರ ಸರ್ಕಾರಗಳು ರೈತರಿಗೆ ಸಹಾಯ ಮಾಡುತ್ತಿದೆ ಎಂದರು.  
ಬಿಜೆಪಿ ವತಿಯಿಂದ ಜಿ ಮರಿಸ್ವಾಮಿಯವರ ಸಹಕಾರ ದಿಂದ ತಾಲ್ಲೂಕಿನಲ್ಲಿ 30 ಸಾವಿರ ಆಹಾರ ಪದಾರ್ಥ ವಿರುವ ಕಿಟ್‍ಗಳನ್ನು  ನೀಡಿದ್ದು 4ನೇ ಹಂತವಾಗಿ ಹಾರನಹಳ್ಳಿ ಮಂಡಲ ಗ್ರಾಮಗಳಲ್ಲಿ ಸಂಕಷ್ಟದಲ್ಲಿರುವರಿಗೆ ಜನರಿಗೆ ಪಡಿತರ ಕಿಟ್ ನೀಡಲಾಗುತ್ತಿದ್ದೆ ಎಂದರು.
ಈ ಸಂಧರ್ಭದಲ್ಲಿ ಬಿಜೆಪಿ ಪಕ್ಷದ ಮಾಜಿ ಅಧ್ಯಕ್ಷರಾದ ಕಾಟಿಕೆರೆಪ್ರಸನ್ನಕುಮಾರ್,ಮನೋಜ್ ಕುಮಾರ್,ಕೆವಿಎನ್ ಶಿವು,ದಿವ್ಯಾನಂದ್,ಹಾರನಹಳ್ಳಿ ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದೇಶ್,ದಿವ್ಯಾನಂದ್,ಅರುಣ್ ಕುಮಾರ್, ಸಂತೋಷ್, ಇತರ ಬಿಜೆಪಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Post a Comment

Previous Post Next Post