ಹಾಸನ: ಅರಸೀಕೆರೆಯ ಜೇನುಕಲ್ ಸಿದ್ದೇಶ್ವರ ದೇವಸ್ಥಾನದ ಮಾದರಿ ಹಾಸನ ತಾಲೂಕಿನ ಸೀಗೆ ಗುಡ್ಡದ ಮಳೆಮಲ್ಲೇಶ್ವರ ಕ್ಷೇತ್ರವನ್ನು ಅಭಿವೃದ್ಧಿಪಡಿ ಸಲಾಗುವುದು ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.
ಹಾಸನ ತಾಲೂಕಿನ ಸಾಲಗಾಮೆ ಹೋಬಳಿ ವೀರಾಪುರದ ಗಡಿಯಿಂದ ಮಳೆಮಲೇಶ್ವರತಪ್ಪಲಿನ ವರೆಗೆ 3.50 ಕೋಟಿ ರೂ. ಅಂದಾಜಿನಲ್ಲಿ ಋಷ್ಯಶೃಂಗ ಪರ್ವತದ 7 ಕಿ.ಮೀ ರಸ್ತೆ ನಿರ್ಮಾಣ ಕಾಮಗಾರಿಗೆ ಸೀಗೆಗುಡ್ಡ ಮಠದ ಆವರಣದಲ್ಲಿ ಭಾನುವಾರ ಬೆಳಿಗ್ಗೆ ಭೂಮಿ ಪೂಜೆ ನೆರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ್ವಾಪರ ಯುಗದ ಹಿನ್ನೆಲೆ ಹೊಂದಿರುವ ಸೀಗೆನಾಡಿನ ಮಳೆಮಲ್ಲೇಶ್ವರ ಸನ್ನಿಧಿಗೆ ಉತ್ತಮ ರಸ್ತೆ ನಿರ್ಮಾಣ ಆಗಬೇಕು ಎಂಬುದು ಇಲ್ಲಿನ ಜನರ ದಶಕಗಳ ಬೇಡಿಕೆಯಾಗಿತ್ತು.ಯಡಿಯೂರಪ್ಪ ಸಹಕಾರದೊಂದಿಗೆ ಈ ಕಾಮಗಾರಿ ಭೂಮಿಪೂಜೆ ಮಾಡಲಾಗಿದೆ ಎಂದರು.
ಯಡಿಯೂರಪ್ಪ ಅವರು ಮುಖ್ಯ ಮಂತ್ರಿಯಾದ ಮೊದಲ ದಿನವೇ ಈ ಕಾಮಗಾರಿಗೆ 3.50 ರೂ.ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಕಳೆದ ಎರಡು ವರ್ಷಗಳಿಂದ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದು ಅಡಚಣೆ ಆಗಿತ್ತು. ದೆಹಲಿಗೆ ಭೇಟಿನೀಡಿ ಕೇಂದ್ರ ಸರ್ಕಾರದಿಂದ ಅನುಮತಿ ತೆಗೆದುಕೊಳ್ಳಬೇಕಾ ಗಿದ್ದರಿಂದ ಕಾರಣ ವಿಳಂಬವಾಗಿತ್ತು ಎಂದರು.ಸೀಗೆನಾಡು ವ್ಯಾಪ್ತಿಯ 11 ಗ್ರಾಪಂಗಳು, ಬೇಲೂರುಹಾಗೂ ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆಒಳಪಡುತ್ತದೆ. ಇದು ಒಂದು ಪವಿತ್ರವಾದ ಸ್ಥಳ. 40ವರ್ಷಗಳಿಂದ ದೇವರ ಸನ್ನಿಧಿಗೆ ರಸ್ತೆ ಆಗಬೇಕು ಎಂಬ ಕನಸು ಯಡಿಯೂರಪ್ಪ ಅವರಿಂದ ಸಾಕಾರ ವಾಗಿದೆ. ಹಾಗಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಸಾಲಗಾಮೆ ರಸ್ತೆಯಿಂದ ಸೀಗೆಗುಡ್ಡದ ವರೆಗೆ ಗುಂಡಿ ಮುಕ್ತ ರಸ್ತೆ ನಿರ್ಮಾಣ ಆಗಬೇಕು ಎಂಬ ಜನರ ಅಪೇಕ್ಷೆಯಿದೆ. ವೀರಾಪುರ ಗಡಿಯಿಂದ ಸೀಗೆಗುಡ್ಡದ ತಪ್ಪಲಿನ ವರೆಗೆ 3.50 ಕೋಟಿ ರೂ.ವೆಚ್ಚದಲ್ಲಿ ಮೊದಲು ಹಂತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮುಂದಿನದಿನಗಳಲ್ಲಿ ಉಳಿದ ರಸ್ತೆಯನ್ನು 3 ಕೋಟಿ ವೆಚ್ಚದ ರಸ್ತೆಯನ್ನು ನಿರ್ಮಾಣ ಮಾಡಲಾಗುವುದು. ಮುಂದಿನದಿನಗಳಲ್ಲಿ ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಕಾರ್ಯಪ್ರವೃತ್ತರಾಗಲಿದ್ದೇವೆ ಎಂದು ತಿಳಿಸಿದರು.
ಹುಡಾ ಅಧ್ಯಕ್ಷ ಲಲಾಟ್ ಮೂರ್ತಿ, ಸೀಗೆ ಗ್ರಾಪಂಅಧ್ಯಕ್ಷೆ ಗೀತಾ ಮಣಿ, ಉಪಾಧ್ಯಕ್ಷ ಮಲ್ಲೇಶ್‌ಗೌಡ, ಸದಸ್ಯ ಕೃಷ್ಣೇಗೌಡ, ಕುಮಾರ್, ರೇವಣ್ಣ ಇತರರಿದ್ದರು.