ಸಾರ್ವಜನಿಕರಿಗೆ ಕೋವಿಡ್-೧೯ ಕುರಿತು ಜಾಗೃತಿ

© ಹಾಸನ ಸೀಮೆ ನ್ಯೂಸ್


ಹಾಸನ ಏ.೨೯:- ಕೊರೋನÀ ಸೋಂಕಿನ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆ ವತಿಯಿಂದ ನಗರದ ವಿವಿಧ ಕಡೆಗಳಲ್ಲಿ ನಗರಸಭೆ, ಮಾರ್ಷಲ್ಸ್, ಬೀದಿ ನಾಟಕ ಕಲಾವಿದರು ಸೇರಿ ಸಾರ್ವಜನಿಕರಿಗೆ ಕೈಮುಗಿದು ಹಾಡನ್ನು ಹಾಡುವ ಮೂಲಕ ಜಾಗೃತಿ ಮೂಡಿಸಲಾಯಿತು.



ನಗರದ ಹೇಮಾವತಿ ಪ್ರತಿಮೆ ಮುಂಭಾಗ ಕಲಾವಿದರು ತಮ್ಮ ಹಾಡಿನ ಮೂಲಕ ಕೊರೋನಾದಿಂದ ದೂರ ಇರಲು ಅನುಸರಿಸಬೇಕಾದ ನಿಯಮಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಿದರು. ನಂತರ ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೊರೋನಾ ಓಡಿಸುವ ಬಗ್ಗೆ ಹಾಡನ್ನು ಹಾಡಿ ಇಲ್ಲಿನ ಸುತ್ತ ಮುತ್ತಲ ವ್ಯಾಪಾರಸ್ಥರಿಗೆ ಅರಿವು ಮೂಡಿಸಿದರು.



 ನಗರಸಭೆ ಆಯುಕ್ತರಾದ ಕೃಷ್ಣಮೂರ್ತಿ ಅವರು  ಮಾತನಾಡಿ ಅನಗತ್ಯವಾಗಿ ಮನೆಯಿಂದ ಹೊರಗೆ ಬಾರದೆ, ಕೆಲಸದ ನಿಮಿತ್ತ ಅವಶ್ಯಕತೆ ಇದ್ದಾಗ ಬರುವವರು ಮಾಸ್ಕ್ನ್ನು ಕಡ್ಡಾಯವಾಗಿ ಹಾಕಬೇಕು. ಜೊತೆಗೆ ಗುಂಪಾಗಿ ಸೇರದೆ ಸಾಮಾಜಿಕ ಅಂತರವನ್ನು ಕಾಪಾಡುವಂತೆ ತಿಳಿಸಿದರಲ್ಲದೆ ಪ್ರಾಣ ಅಮೂಲ್ಯವಾದ ಪ್ರಾಣವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಜಾಗೃತರಾಗಿ ಕೋವಿಡ್-೧೯ ತಡೆಗಟ್ಟಲು ಜಾರಿಯಲ್ಲಿರುವ ಮಾರ್ಗಸೂಚಿಗಳನ್ನು ಅನುಸರಿಸುವಂತೆ ತಿಳಿಸಿದರು.


ನಗರಸಭೆ ಆರೋಗ್ಯ ನಿರೀಕ್ಷಕರಾದ ಮಂಜುನಾಥ್, ಆನಂದ್, ಕಲಾವಿದ ಬಿ.ಟಿ. ಮಾನವ, ನಗರಸಭೆಯ ಪರಶುರಾಮು. ಬಿ.ಜಿ. ಮಂಜುಳ, ಹೆಚ್.ಎನ್. ಮಹಾದೇವ್, ನರಸಿಂಹ ಮೂರ್ತಿ, ಪ್ರೇಮ, ಪುಟ್ಟರಾಜು, ಕುಮಾರ್ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post