ಹಾಸನ ಜು 5: ಜಿಲ್ಲೆಯಲ್ಲಿ ಮತ್ತೊಂದು ಕೊವಿದ್ ಸಾವು ಸಂಭವಿಸಿದೆ. ಅರಸೀಕೆರೆಯ 77 ವರ್ಷದ ವೃದ್ದರೊಬ್ಬರು ಕಳೆದ ರಾತ್ರಿ 11:45 pmge ಕೊನೆ ಉಸಿರೆಳೆದಿದ್ದಾರೆ.
ನಿಮೊನಿಯಾ, ಹಾಗೂ ರಕ್ತದ ಒತ್ತಡ ಮತ್ತಿತರ ಸಮಸ್ಯೆ ಗಳಿಂದ ಬಳಲುತ್ತಿದ್ದ ಸೊಂಕಿತರನ್ನು ಹಾಸನದ ಕೋವಿದ್ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ ಕೃಷ್ಣಮೂರ್ತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಸತೀಶ್ ತಿಳಿಸಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ
Tags
ಹಾಸನ