ಚೀನಾ ಗಡಿಯಲ್ಲಿ ಹಾಸನದ ವೀರ ಯೋಧ ಮಲ್ಲೇಶ್ ವಿಧಿವಶ

ಅರಕಲಗೂಡು ತಾಲೂಕಿನ ಅತ್ನಿ ಗ್ರಾಮದ ವೀರಯೋಧ ಮಲ್ಲೇಶ್ ಇಂದು ಅರುಣಾಚಾಲ  ಬೆಟಲಿಯನ್ ಹವಾಲ್ದಾರ್  ಆಗಿ ಕಾರ್ಯನಿರ್ವಾಹಿಸುತಿದ್ದು ಇಂದು ಕರ್ತವ್ಯ ನಿರ್ವಹಣೆ ಮಾಡುತಿದ್ದಾಗ  ವೀರ ಮರಣ ಹೊಂದಿದ್ದಾರೆ ಅವರ ಆತ್ಮಕೆ ಶಾಂತಿ ಸಿಗಲಿ.
ಮಲ್ಲೇಶ್ ಮೃತ ಬಗ್ಗೆ ಸೈನ್ಯದವರಿಂದ ಕುಟುಂಬದವರಿಗೆ ಮಾಹಿತಿ ಬಂದಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಅವರು ಕೆಲ ವರ್ಷಗಳಿಂದ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. ಇಡೀ ಗ್ರಾಮ ಮೌನದಲ್ಲಿ ಮುಳುಗಿದೆ. ಪಾರ್ಥಿವ ಶರೀರರವನ್ನು ಭಾನುವಾರ ಗ್ರಾಮಕ್ಕೆ ತರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯೋಧನ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ.

Arakalagud Breaking News

ಚೀನಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅತ್ನಿ ಗ್ರಾಮದ ಮಲ್ಲೇಶ್ ವಿಧಿವಶ .
ಅರಕಲಗೂಡ: ತಾಲ್ಲೂಕಿನ  ಅತ್ನಿ ಗ್ರಾಮದ  ಮಲ್ಲೇಶ್ ಯು.ಎಂ ಎಂಬುವವರು ಅರುಣಾಚಲಪ್ರದೇಶದ ಬಾರ್ಡರ್ ನ ಚೀನಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು  ಇಂದು ಸಂಜೆ  ವಿಧಿವಶರಾದ್ದದರೆ.
    
ಅವರು ಅತ್ನಿ ಗ್ರಾಮದ ದಿ| ಮಲ್ಲೇಗೌಡ ಪುಟ್ಟಮ್ಮ ದಂಪತಿಯ 5 ಮಕ್ಕಳ ಪೈಕಿ ಕೊನೆಯ ಮಗನಾಗಿದ್ದು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ.


17 ವರ್ಷಗಳಿಂದ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದ ಮಲ್ಲೇಶ್ ಹೆಚ್ಚುವರಿ ಕರ್ತವ್ಯಕ್ಕೆ ಮರಳಿದ್ದರು.


ವಿಷಯ ತಿಳಿಯುತ್ತಿದ್ದಂತೆಯೇ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. ಇಡೀ ಗ್ರಾಮ ಮೌನದಲ್ಲಿ ಮುಳುಗಿದೆ. ಪಾರ್ಥಿವ ಶರೀರರವನ್ನು ಭಾನುವಾರ ಗ್ರಾಮಕ್ಕೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ.

ಮಲ್ಲೇಶ್ ರವರ ಆತ್ಮಕ್ಕೆ ಶಾಂತಿ ಸಿಗಲಿ.

Post a Comment

Previous Post Next Post