ಮೈಚಳಿ ಬಿಡಿಸಿದ್ದ ಶಾಸಕ ಎಟಿಆರ್ ಇಂದು ಕೂಡ ತಹಸೀಲ್ದಾರ್ ಜೊತೆ ದಿಢೀರ್ ಭೇಟಿ

ಅರಕಲಗೂಡು ಉಪ ನೋಂದಣಾಧಿಕಾರಿ ಕಚೇರಿಗೆ ನೆನ್ನೆಯಷ್ಟೆ ಭೇಟಿ ನೀಡಿ ಅನಧಿಕೃತ ನೌಕರರನ್ನು ಹೊರಗಟ್ಟಿ ಆದೇಶ ಪತ್ರ ಕೇಳಿ ದ್ವಿತೀಯ ದರ್ಜೆ ಸಹಾಯಕರಿಹೆ ಮೈಚಳಿ ಬಿಡಿಸಿದ್ದ ಶಾಸಕ ಎಟಿಆರ್ ಇಂದು ಕೂಡ ತಹಸೀಲ್ದಾರ್ ಜೊತೆ ದಿಢೀರ್ ಭೇಟಿ ನೀಡಿ ಕಚೇರಿಯ ಕಾರ್ಯವೈಖರಿ ವೀಕ್ಷಿಸಿದರು.
ಕಚೇರಿಯಲ್ಲಿದ್ದ ದ್ವಿತೀಯ ದರ್ಜೆ ಸಹಾಯಕ ಗೋಪಾಲ್ ಅವರ ಕಾರ್ಯವೈಖರಿ ಪರಿಶೀಲಿಸಿ ಕೆಂಡಮಂಡಲವಾದ ಶಾಸಕ, ಇದೇನು ಕಚೇರಿನಾ ಎಂದು ತರಾಟೆ ತೆಗೆದುಕೊಂಡರು, ಐಡಿ ಕಾರ್ಡ್ ನೊಂದಿಗೆ ಕಚೇರಿಯಲ್ಲಿ ಶಿಸ್ತಿನಿಂದ ಕರ್ತವ್ಯ ನಿರ್ವಹಿಸಲು ತಾಕೀತು.

ಆದೇಶ ಪತ್ರವಿಲ್ಲದೆ ನೌಕರರನ್ನು ಬೇಕಾಬಿಟ್ಟಿಯಾಗಿ ನೇಮಕ ಮಾಡಿಕೊಂಡು ದುಡಿಸಿಕೊಳ್ಳಲಾಗುತ್ತದೆ, ಇದು ಇಲ್ಲಿನವರ ತಪ್ಪಲ್ಲ, ಮೇಲಿನವರಿಗೆ ಮಾಮೂಲಿ‌ ಎಷ್ಟು ಹೋಗುತ್ತದೆ ಎಂದು‌ ದ್ವಿತೀಯ ದರ್ಜೆ ಸಹಾಯಕ ಗೋಪಾಲ್ ಅವರನ್ನು‌ ಏರುಧ್ವನಿಯಲ್ಲಿ ಬೆಂಡೆತ್ತಿದ ಶಾಸಕ?

ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಉಪ ನೋಂದಣಾಧಿಕಾರಿಯನ್ನು ಇಲ್ಲಿಂದ ವರ್ಗಾವಣೆ ಮಾಡಿದ್ದೆ ಮೊದಲ ತಪ್ಪು ದು ಗರಂ‌ ಆದ‌ ಶಾಸಕ. ಅಧಿಕೃತವಾಗಿ ನೌಕರರಿಗೆ ಮರು ಆದೇಶವಿಲ್ಲದೆ ನೇಮಕ ಮಾಡಿಕೊಳ್ಳದಿರಲು ತಾಕೀತು ಮಾಡಿದ‌ ಶಾಸಕ ಎಟಿಆರ್.

Post a Comment

Previous Post Next Post