ಹಾಸನ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ಸಮುದಾಯದಲ್ಲಿ ಹೆಚ್ಚು ಹರಡುತ್ತಿದ್ದು, ತಾ//ನಲ್ಲಿ ಸೋಂಕಿಗೆ ಕಡಿವಾಣ ಹಾಕಲು ಶಾಸಕ ಸಿ.ಎನ್. ಬಾಲಕೃಷ್ಣ ಅವರು ಬೆಲಸಿಂದ ಶ್ರೀವನದಲ್ಲಿ ಅಧಿಕಾರಿಗಳ ವಿಶೇಷ ಸಭೆ ನಡೆಸಿದ್ದಾರೆ.
ತಾ//ನಲ್ಲಿ ಈಗಾಗಲೇ ಸಮುದಾಯಕ್ಕೆ ಹರಡುತ್ತಿರುವ ಸೋಂಕನ್ನು ತಡೆಯಲು ಆರೋಗ್ಯ ಇಲಾಖೆ ತಜ್ಞ ವೈದ್ಯರು, ಪೋಲೀಸ್, ಕಂದಾಯ, ಹಾಗೂ ತಾ//ಪಂ// ಅಧಿಕಾರಿಗಳ ಸಂಗಡ 1 ತಾಸು ಚರ್ಚೆ ನಡೆಸಿ ಸೋಂಕು ತಡೆಯಲು ಕ್ರಮಕೈಗೊಳ್ಳಲು ಸೂಚಿಸಿದ್ದಾರೆ.
ಚನ್ನರಾಯಪಟ್ಟಣ ತಾ//ನಲ್ಲಿ ವೈರಸ್ ಸೋಂಕು 235 ಮಂದಿಗೆ ಹರಡಿದ್ದು 201 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಈ ಪೈಕಿ ಎ ಸಿಂಟೆಮ್ಸ್ ಇರುವ ವ್ಯಕ್ತಗಳ ಬಗ್ಗೆ ಹೆಚ್ಚು ಜಾಗೃತಿ ವಹಿಸಿ ಅವರಿಗಾಗಿ ವಿಶೇಷ ಚಿಕಿತ್ಸಾ ವ್ಯವಸ್ಥೆ ಮಾಡಲು ಶಾಸಕರು ಸೂಚಿಸಿದರು. ಜಿಲ್ಲಾಡಳಿತದಿಂದ ಈ ವ್ಯಕ್ತಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸೆಗೆ ಸೂಚಿಸಲಾಗಿತ್ತು. ಆದರೆ ಶಾಸಕರು ಈ ರೀತಿ ಮಾಡುವುದರಿಂದ ಸರ್ಕಾರಿ ಆಸ್ಪತ್ರೆಗೆ ಬರುವ 700-800 ಮಂದಿ ರೋಗಿಗಳಿಗೆ ತೊಂದರೆ ಹಾಗೂ ಹರಡುವ ಸಾಧ್ಯತೆ ಇದೆ. ಶವ ಪರೀಕ್ಷೆ-ಡಯಾಲಿಸಿಸ್-ತುರ್ತು ಚಿಕಿತ್ಸೆ , ಹೆರಿಗೆಗೆ ಅಡ್ಡಿಯಾಗುತ್ತದೆ. ಈ ಬಗ್ಗೆ ಜಾಗೃತಿ ಬೇಕು ಎಂದರು. ಈಲ್ಲಾ ಆರೋಗ್ಯ ಅಧಿಕಾರಿಯೊಂದಿಗೆ ಚರ್ಚಿಸಿ ಪ್ರತ್ಯೇಕ ಐಸುಲೇಷನ್ ಮಾಡಲು ಕ್ರಮಕೈಗೊಳ್ಳಲಾಗುವುದು. ತಾ//ನಲ್ಲಿ ಸ್ವಯಂ ಪ್ರೇರಿತರಾಗಿ ಲಾಕ್‍ಡೌನ್ ಮಾಡಲಾಗಿದೆ.
ಸಭೆಯಲ್ಲಿ ತಹಸಿಲ್ದಾರ್ ಜೆ.ಬಿ. ಮಾರುತಿ, ಸಿ.ಪಿ.ಐ. ಕುಮಾರ್, ಎಸ್.ಐ.ಕಿರಣ್‍ಕುಮಾರ್, ಪ್ರಭಾರಿ ಇ.ಒ. ಆನಂದ್, ತಾ// ವೈದ್ಯಾಧಿಕಾರಿ ಡಾ// ಕಿಶೋರ್‍ಕುಮಾರ್, ಡಾ// ಮಹೇಶ್, ಡಾ// ಗಣೇಶ್, ಡಾ// ಚಿದಾನಂದ್, ಡಾ// ಹೊಯ್ಸಳ, ಸ//ನೌ//ಸ//ಅ// ಸಿ.ಜೆ. ಮಂಜುನಾಥ್ ಮುಂತಾದವರಿದ್ದರು.
Tags
ಚನ್ನರಾಯಪಟ್ಟಣ