ಮಹಿಳೆಯರಿಗಾಗಿ ಹೊಲಿಗೆ ತರಬೇತಿ: ಅರ್ಜಿ ಆಹ್ವಾನ

ಕೆನರಾ ಬ್ಯಾಂಕ್ ಸ್ವ ಉದ್ಯೋಗ ಸಂಸ್ಥೆಯಲ್ಲಿ  ಆಗಸ್ಟ್ 03 ರಿಂದ 30 ದಿನಗಳು ಉಚಿತವಾಗಿ ಮಹಿಳೆಯರಿಗೆ ಹೊಲಿಗೆ ಕೌಶಲ್ಯ ತರಬೇತಿಯು ಆರಂಭವಾಗಲಿದೆ. ಆಸಕ್ತಿಯುಳ್ಳವರಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯನ್ನು ಅನುಭವಿ ಹಾಗೂ ನುರಿತ ತರಬೇತುದಾರರು ನೀಡುತ್ತಾರೆ. ತರಬೇತಿ ಸಂದರ್ಭದಲ್ಲಿ ಉದ್ಯಮಶೀಲತೆ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿಯನ್ನು ಸಹ ನೀಡಲಾಗುತ್ತದೆ. 

ತರಬೇತಿ ಪಡೆಯಲು ಆಸಕ್ತಿಯಿರುವಂತಹ ಯುವತಿಯರು ಸಂಸ್ಥೆಗೆ ಅರ್ಜಿ ಸಲ್ಲಿಸಬಹುದು. ತರಬೇತಿ ಪಡೆಯಲು ಇಚ್ಛಿಸುವ ಯುವತಿಯರಿಗೆ ಪ್ರತ್ಯೇಕವಾದ ವಸತಿ ಸೌಲಭ್ಯ ಇರುತ್ತದೆ. ತರಬೇತಿಯ ಮುಕ್ತಾಯದ ನಂತರ ಕೇಂದ್ರ ಸರ್ಕಾರದಿಂದ ಅನುಮೋದಿತ ಪ್ರಮಾಣ ಪತ್ರ ನೀಡಲಾಗುವುದು.

ವಯಸ್ಸು   18 ರಿಂದ 45 ವರ್ಷದ ಯುವತಿಯರಿಗೆ ಮಾತ್ರ, 35 ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶ. ಸಾಲ ಸೌಲಭ್ಯಗಳ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುವುದು. ಯಾವುದೇ ಬ್ಯಾಂಕಿನ ಪಾಸ್‍ಬುಕ್, ಆಧಾರ್ ಕಾರ್ಡ್, ಬಿ.ಪಿ.ಎಲ್. ಕಾರ್ಡ್‍ಗಳ ನಕಲು ಪ್ರತಿಗಳು, ಮತ್ತು 4 ಪಾಸ್ ಪೆÇೀರ್ಟ್ ಸೈಜ್ ಫೋಟೋಗಳನ್ನು ಸಲ್ಲಿಸತಕ್ಕದ್ದು.

ಅರ್ಜಿಯನ್ನು ಸಲ್ಲಿಸುವವರು ಕೆನರಾ ಬ್ಯಾಂಕ್ ಸ್ವ ಉದ್ಯೋಗ ಸಂಸ್ಥೆಯಿಂದ ಅರ್ಜಿ  ಪಡೆದು   ನೇರವಾಗಿ ಸಂಸ್ಥೆಗೆ ಸಲ್ಲಿಸಬಹುದು ಹಾಗೂ ಃiಣ.ಜo/ಛಿbಡಿseಣihಚಿssಚಿಟಿ  ವೆಬ್ ಸೈಟ್ ಮೂಲಕ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08172-297013, 7353654000, 7338358600, 8147903497, 8722483393 ಗೆ ಕರೆ ಮಾಡಬಹುದು ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ. 

Post a Comment

Previous Post Next Post