ಸಕಲೇಶಪುರ: ಹಸಿರು ಭೂಮಿ ಪ್ರತಿಷ್ಠಾನ ವತಿಯಿಂದ ತಾಲೂಕಿನ ಮಂಜರಾಬಾದ್ ದರ್ಗಾ ಸಮೀಪದ ಕೆರೆಯ ಹೂಳೆತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು
ಸುಮಾರು ಒಂದು ವರೆ ಎಕರೆ ವ್ಯಾಪ್ತಿಯ ಪುರಾತನ ಕೆರೆ ಕಾಡು ಗಿಡಗಳಿಂದ ಆವರಿಸಿಕೊಂಡು ಮುಚ್ಚಿಹೋಗಿದ್ದು, ಇಲ್ಲಿಯವರೆಗೆ ಕೆರೆ ಹೂಳೆತ್ತುವ ಕ್ರಿಯೆ ನಡೆಯದ ಕಾರಣ ಹಸಿರು ಭೂಮಿ ಪ್ರತಿಷ್ಠಾನ ಸಂಸ್ಥೆ ಇದನ್ನು ಗುರುತಿಸಿ ಕೆರೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.
ಕೆಲವು ತಿಂಗಳ ಹಿಂದೆ ಹಸಿರು ಭೂಮಿ ಪ್ರತಿಷ್ಠಾನ ಸಂಸ್ಥೆಯ ಪ್ರಮುಖರಾದ ಆರ್ ಪಿ ವೆಂಕಟೇಶಮೂರ್ತಿ ಈ ಕೆರೆಗೆ ಭೇಟಿ ನೀಡಿ ಪರಿಶೀಲಿಸಿ ಅನೆಮಹಲ್ ಗ್ರಾಮಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಹಾಗೂ ತಾಲೂಕಿನ ಪ್ರಮುಖ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕೆರೆಯ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದ್ದರು.
ತಾಲೂಕು ಪಂಚಾಯತಿಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಅವರು ಭೇಟಿ ನೀಡಿ ಕೆರೆಯನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಯೋಜನೆಯನ್ನು ರೂಪಿಸಿದ್ದಾರೆ.
ಹಸಿರು ಭೂಮಿ ಪ್ರತಿಷ್ಟಾನ ಸಂಸ್ಥೆಯ ರೂಪ ಹಾಸನ ರವರು ಸಹ ಈ ಐತಿಹಾಸಿಕ ಕೆರೆಯ ಗತಕಾಲದ ವೈಭವವನ್ನು ಮರುಕಳಿಸಲು ಉತ್ಸಾಹಕರಾಗಿದ್ದು ತಾಲೂಕು ಹಸಿರು ಭೂಮಿ ಪ್ರತಿಷ್ಠಾನ ಸಮಿತಿಯ ಸದಸ್ಯರುಗಳಿಗೆ ಸಲಹೆ ನೀಡಿತ್ತಿದ್ದು ಇಂದು ಕೆರೆಯ ಅಭಿವೃದ್ಧಿ ಸಂಬಂಧಿಸಿದಂತೆ ಹೂಳು ತೆಗೆಯುವ
ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತಾಲೂಕು ತಾಹಸಿಲ್ದಾರ್ ಮಂಜುನಾಥ್ ಅವರು ಭೇಟಿ ನೀಡಿ ಪರಿಶೀಲಿಸಿದರು
ಈ ಸಂದರ್ಭದಲ್ಲಿ ಆನೆಮಹಲ್ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಹಸೆನಾರ್ ಅನೆಮಹಲ್ ,ಹಸಿರು ಭೂಮಿ ಪ್ರತಿಷ್ಠಾನ ಸಮಿತಿಯ ಪ್ರಮುಖರಾದ ಶೋಭಾ ಕೆಂಪೇಗೌಡ ಮಲ್ನಾಡ್ ಮೆಹಬೂಬ್ ಮುಂತಾದವರು ಉಪಸ್ಥಿತರಿದ್ದರು.
Tags
ಸಕಲೇಶಪುರ