ಯೋದರಾಗಿ ಗಡಿ ಕಾದವರು, ಈಗ ಸಮಾಜ ಕಾಯುವ ಪೋಲಿಸ್.
ಸಕಲೇಶಪುರ: ಗಡಿಯ ಹೊರಗಿನ ಶತ್ರುಗಳ ವಿರುದ್ಧ 16 ವರ್ಷ
ಶ್ರಮಿಸಿದ ನಂತರ ದೇಶದ ಒಳಗಿನ ಸಮಾಜಘಾತುಕರನ್ನು ಸದೆ ಬಡೆಯುತ್ತಿರುವ ಡಿವೈಎಸ್ಪಿ ಗೋಪಿ ಜೀವನದ ಹಾದಿ ನಿಜಕ್ಕೂ ರೋಚಕ..
ಯೋಧನಾಗಿ ಸೇವೆ ಸಲ್ಲಿಸುವುದು ಎಂದರೆ ಸುಲಭವಾದ ಜೀವನವಲ್ಲ ದೇಹವನ್ನು ದಂಡಿಸಿ ಪ್ರಾಣ ಒತ್ತೆ ಇಡುವ ಗಂಡಾಂತರದ ಬದುಕು..
ನಿವೃತ್ತ ಯೋಧ ಹೆಚ್ಚಾಗಿ ವಿಶ್ರಾಂತಿ ಜೀವನ ಬಯಸುವ ಅಥವಾ ಅದಕ್ಕೆ ಸರಿಸಮಾನವಾದ ನೌಕರಿಯನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಆದರೆ ಬಿ ಆರ್ ಗೋಪಿ ರವರು ಯೋಧನಾಗಿ
ದುಡಿದ ನಂತರ ಮತ್ತೊಂದು ರಿಸ್ಕಿ ಜಾಬ್ ಆಯ್ಕೆಮಾಡಿಕೊಂಡರು.
'ಖಾಕಿಯ ಜೊತೆಯಲ್ಲೇ ಬದುಕುವ ತನ್ನ ಮನದಾಳದ ಕನಸನ್ನು ನನಸು ಮಾಡಿಕೊಳ್ಳುವ ಮತ್ತೊಂದು ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ.
ಕಳೆದ ಜನವರಿ 2020 ರ ಹೊಸ ವರ್ಷದ ಮೊದಲ ವಾರದಲ್ಲಿ ರಾಜ್ಯದ 22 ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಬಿ ಆರ್ ಗೋಪಿ ಸಕಲೇಶಪುರ ವಿಭಾಗದ 16ನೇ ಡಿವೈಎಸ್ಪಿ ಅಧಿಕಾರ ವಹಿಸಿಕೊಂಡರು.
ಜನವರಿ 6ರಂದು ಅಧಿಕಾರ ಸ್ವೀಕರಿಸಿದ ನಂತರ ಭರ್ಜರಿಯಾಗಿ ಕಳ್ಳರ ಬೇಟೆಯಾಡುವ ರಣ ಬೇಟೆಗಾರರಾಗಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಪೊಲೀಸ್ ವೃತ್ತಿಯನ್ನು ಪ್ರಾರಂಭಿಸಿದ ಬಿ ಆರ್ ಗೋಪಿ ರವರು ಜಿಲ್ಲಾ ಪೋಲಿಸ್ ಕಚೇರಿಯಲ್ಲಿ
ಪ್ರಫೆಷನರಿ ಡಿವೈಎಸ್ಪಿ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಸಕಲೇಶಪುರ ವಿಭಾಗದಲ್ಲಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಅನೇಕ ಕಳ್ಳತನ ಪ್ರಕರಣವನ್ನು ಭೇದಿಸುವ ಮುಖಾಂತರ ಜನರಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ.
ಆಲೂರು ಸಮೀಪದ ಕಳ್ಳತನ ಪ್ರಕರಣದಲ್ಲಿ ಸಂತೋಷ್ ಎಂಬ ಕಳ್ಳನನ್ನು ಹಿಡಿದು 350 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳುವ ಮೂಲಕ ಒಟ್ಟು ಈ ಕಳ್ಳನ ಮೂಲಕ ಐದು ಪ್ರಕರಣಗಳನ್ನು
ಪತ್ತೆಹಚ್ಚಿದರು.
ಸಕಲೇಶಪುರದ ಮೈಕ್ರೋ ಫೈನಾನ್ಸ್ ಕಚೇರಿಯಿಂದ 6 ಲಕ್ಷದ 60 ಸಾವಿರ ರೂ ಕಳ್ಳತನವಾದ ಪ್ರಕರಣವನ್ನು ಭೇದಿಸಿದರು.
ಮಾರ್ಚ್ 5 ರಂದು ಮತ್ತೊಂದು ಭರ್ಜರಿ ಬೇಟೆಯ
ಸುದ್ದಿಯನ್ನು ನೀಡಿದ ಗೋಪಿರವರು, ಕುಖ್ಯಾತ ಮೂವರು ಅಂತರರಾಜ್ಯ ಕಳ್ಳರನ್ನು ಬಂಧಿಸಿ 5 ಲಕ್ಷ ರೂ ಬೆಲೆಬಾಳುವ ಚಿನ್ನಾಭರಣವನ್ನು ವಶಪಡಿಸಿಕೊಂಡರು.
ಲಾಕ್ ಡೌನ್ ಸಂದರ್ಭದಲ್ಲಿ ತಾಲೂಕಿನ ಹಿರಿಯೂರು ಕೂಡಿಗೆಯ ಲಕ್ಷ್ಮಿ ವೈನ್ ಶಾಪ್ ಕಳ್ಳತನವನ್ನು ಪತ್ತೆಹಚ್ಚಿ ಮಾಲು ಸಮೇತ ಕಳ್ಳರನ್ನು
ಹಿಡಿದು ಜೈಲಿಗೆ ತಳ್ಳಿದರು.
ಜಾನೆಕೆರೆ ಮನೆ ಕಳ್ಳತನದ ಪ್ರಕರಣವನ್ನು ಬೇಧಿಸಿ
ಐದು ಲಕ್ಷ ರೂಪಾಯಿಯ ಚಿನ್ನಾಭರಣ ಹಾಗೂ 3 ವಾಹನಗಳನ್ನು ವಶಪಡಿಸಿಕೊಂಡರು.
ಹೀಗೆ ಡಿವೈಎಸ್ಪಿ ಬಿ ಆರ್ ಗೋಪಿ ರವರ ಕಾರ್ಯಾಚರಣೆ ಸಾಗುತ್ತಲೇ ಹೋಯಿತು. ಅನಧಿಕೃತ ಮರಳು ಸಾಗಾಟ ವನ್ನು ತಕ್ಕಮಟ್ಟಿಗೆ ತಡೆದರು. ಆಲೂರು ಸಮೀಪದಲ್ಲಿ ಶೇಕರಣೆಯಾಗಿದ್ದ ಅನಾದಿಕೃತ ಮರಳನ್ನು ವಶಪಡಿಸಿಕೊಂಡರು.
ಪ್ರತಿಯೊಂದು ಕ್ರೈಂ ಪ್ರಕರಣವನ್ನು ಗಂಬೀರವಾಗಿ ಪರಿಗಣಿಸು ಇವರು ಅಪರಾದಗಳನ್ನು ತಡೆಯವ ಬಗ್ಗೆ ಜನರಲ್ಲಿ ಜಾಗೃತಿ ಸಹ ಮೂಡಿಸುತ್ತಿದ್ದಾರೆ.
ಸಮಾಜಿಕ ಜಾಲ ತಾಣಗಳಲ್ಲಿ ಅಪರಾದ ತಡೆ ಗಟ್ಟುವ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಚಿಕ್ಕನಾಯಕನಹಳ್ಳಿಯ ಹಿರಿಯೂರಿನಲ್ಲಿ ನ ಸಾಮಾನ್ಯ ರೈತ ಹಿನ್ನೆಲೆಯ ಕುಟುಂಬದ
ಪೋಸ್ಟ್ ಮಾಸ್ಟರ್ ಅವರವರ ಮಗನಾದ ಬಿ ಆರ್ ಗೋಪಿ ಅವರು ಎಂ ಎ, ಬಿ ಎಡ್ ಪದವಿದಾರರು. ಕಂದಾಯ ಇಲಾಕೆಯ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಮೂಲಕ ಸರ್ಕಾರಿ ನೌಕರನಾಗಿ ಬೆಂಗಳೂರಿನಲ್ಲಿ ಸೇವೆಸಲ್ಲಿಸಿ ನಂತರ ಮಿಲಿಟರಿಯಲ್ಲಿ ದೇಶ ಕಾದು, ಈಗ ಪೊಲೀಸ್ ಅಧಿಕಾರಿಯಾಗಿದ್ದಾರೆ.
ಪೋಲಿಸ್ ಅಧಿಕಾರಿಯಾಗುವುದು ಇವರ ಕನಸಾಗಿತ್ತು,
ಯೋದನಾಗಿ ದೇಶಕ್ಕೆ ದುಡಿದಿದ್ದು ಇವರ ಕನಸಿನ ಮೂದಲ ಹೆಜ್ಜೆಯಾಗಿತ್ತು.
ಯೋಧನಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ನಡೆದ ಎರಡು ಘಟನೆಗಳು. ಮರೆಯಲಾರದ ನೆನಪುಗಳಾಗಿವೆ. 2005ರಲ್ಲಿ ಜಮ್ಮು ಮತ್ತು ಕಾಶ್ಮೀರದ ಕ್ಕೋಪಾಡ್ ಪ್ರದೇಶದಲ್ಲಿ ಕಾನೆಸ್ಟೇಬಲ್ ರ್ಯಾಂಕಿಂಗ್ ನಲ್ಲಿ ಲೀಡ್ ಮಾಡುತ್ತ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ. ಏಕಾಏಕಿ ಭಯೋತ್ಪಾದಕರು ಫೈರಿಂಗ್ ದಾಳಿ ನಡೆಸಿದ್ದರು. ಘಟನೆಯಲ್ಲಿ ಬಿ ಆರ್ ಗೋಪಿ ಹಾಗೂ ಇತರೆ ಯೋಧರು ಪ್ರಾಣಾಪಾಯದಿಂದ ಪಾರಾಗಿದ್ದರು.
ಈ ಘಟನೆ ನಡೆದ ಕೆಲವು ದಿನಗಳ ನಂತರ ಈ ಪ್ರದೇಶದ ಸಮೀಪ ಭಯೋತ್ಪಾದಕರ ದಾಳಿಗೆ, ಜೋತೆಯಲ್ಲಿದ್ದ ಯೋಧ ಹೊಟ್ಟೆಗೆ ಗುಂಡು ತಗಲಿ ಯೋದ ಹುತಾತ್ಮರ ನಾಗಿದ್ದ. ಯೋದನ ಪ್ರಾಣ ಕಪಾಡಲು ಹೆಲಿಕಾಪ್ಟರ್ ಬಳಸಿ ಸಮೀಪದ ಮಿಲಿಟರಿ ಆಸ್ಪತ್ರೆ ಗೆ ದಾಖಲಿಸಿದರು ಪ್ರಾಣ ಉಳಿಸಲು ಸಾದ್ಯವಾಗಲಿಲ್ಲ. ಇಂಥಹ ಭೀಕರ ಘಟನೆಗಳನ್ನು ಎದುರಿಸಿ ಬಂದಿರುವ ಬಿ ಆರ್ ಗೋಪಿರವರ ಸ್ನೇಹ ಮಯಿ ಮನಸ್ಸಿನಲ್ಲಿ, ಕಠಿಣ ಸಂದರ್ಭದಲ್ಲಿ ಗಟ್ಟಿ ನಿರ್ಧಾರ ಕೈಗೊಳ್ಳುವ ಹಾಗೂ ಗಂಡಾಂತರ ವನ್ನು ಎದರಿಸುವ ಛಲಗಾರಿಕೆಯು ಇದೆ.
*ಮಲ್ನಾಡ್ ಜನ ಸಭ್ಯರು:*
ಸಕಲೇಶಪುರದ ಜನ ಒಳ್ಳೆಯ ಮನಸ್ಸಿನವರು ಸಂಸ್ಕೃತರು. ಇದನ್ನು ಅಪರಾದಿ ಮನೋಭಾವದ ಜನರು ದುರ್ಭಳಕೆಮಾಡಿಕೊಳ್ಳುತ್ತಿದ್ದಾರೆ. ಇಲ್ಲಿಯ ಜನ ಜಾಗೃತಿ ಗೊಳ್ಳುವ ಮೂಲಕ ಅಪರಾಧ ತಡೆಗಟ್ಟಬಹುದು.
ಕೋರೂನ ಬಗ್ಗೆ ಒಂದಿಷ್ಟು..
ಸಕಲೇಶಪುರದಲ್ಲಿ ದಿನೆ ದಿನೇ ಕೊರೋನ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ತಡೆಗಟ್ಟಲು ಜನರು ವ್ಯವಸ್ಥೆ ಯೊಂದಿಗೆ ಸಹಕರಿಸ ಬೇಕು. ಅಗತ್ಯ ಬಿದ್ದರೆ ಮಾತ್ರ ಮನೆಯಿಂದ ಹೊರಬರಬೇಕು. ಅನಗತ್ಯ ತಿರುಗಾಟಕ್ಕೆ ಸ್ವಯಂ ಕಡಿವಾಣ ಹಾಕಬೇಕು. ರೋಗ ಲಜ್ಷೆ ಕಙಡುಬಂದರೆ. ವೈದ್ಯಕೀಯ ಸೇವೆ ಪಡೆದುಕೊಳ್ಳಬೇಕು. ಸೊಂಕು ಹರಡುವುದನ್ನು ತಡೆಯಲು ಗರಿಷ್ಠ ಪ್ರಯತ್ನವನ್ನು ಮಾಡಬೇಕು.
ಪತ್ತೆ ಹಚ್ಚಿದ ಪ್ರಕರಣಗಳ ವಿವರಗಳು:
ಆಲೂರು ಮನೆಕಳ್ಳತನದ ಆರೋಪಿಯ ಬಂಧನ:
ಪೋಲಿಸ್
ಇಲಾಖಾ ಜೀಪನ್ನು ನೋಡಿ ಸ್ಕೂಟಿಯನ್ನು ಜೋರಾಗಿ ಓಡಿಸಿಕೊಂಡು ಹೋಗುತ್ತಿದ ವ್ಯಕ್ತಿಯನ್ನು ಹಿಂಬಾಲಿಸಿ ಪರಿಶೀಲಿಸಿದಾಗ, ಸ್ಕೂಟಿಯ ಡಿಕ್ಕಿಯಲ್ಲಿ ಆಭರಣಗಳಿದ್ದು, ಆತನು ಈಗ್ಗೆ 2-3 ದಿನಗಳ ಹಿಂದೆ ಸಕಲೇಶಪುರ ತಾಲ್ಲೂಕಿನ ಹಳ್ಳಿಗಳಲ್ಲಿ ಮನೆ ಕಳ್ಳತನ ಮಾಡಿದ್ದು,ಆಭರಣಗಳನ್ನು ಮಾರಾಟ ಮಾಡಲು ಹೋಗುತ್ತಿರುವುದು ತಿಳಿದು ಬಂದ ಮೇರೆಗೆ ಅಸಾಮಿ ಸಂತೋಷ ವಶಕ್ಕೆ ಪಡೆಯಲಾಯಿತು.
ಅಂತರರಾಜ್ಯ ಮನೆಗಳ್ಳರ ಬಂಧನ:
ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿ 33 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಯಿತು.
ಪ್ರಕರಣ ಸಂಬಂಧ ಮೂವರು ಆರೂಪಿಗಳಾದ ಮೈಸೂರು ಜಿಲ್ಲೆಯ ಸರಗೂರು ಗ್ರಾಮದ ಪ್ರಮುಖ ಆರೋಪಿ ಫಯಾಜ್ ಅಹಮದ್, ಮೈಸೂರಿನ ಸಯ್ಯದ್ ನಾಸಿರ್, ಕೇಶವ ಬಾಬು ಗಾಯಕ್ವಾಡ್ ಎಂಬುವರನ್ನು ಬಂಧಿಸಲಾಯಿತು.
ಸಕಲೇಶಪುರ ತಾಲ್ಲೂಕು ಹಾನುಬಾಳು ಗ್ರಾಮದ ಹರಿಪ್ರಸಾದ್ ಅವರ ಮನೆಗಳ್ಳತನವಾಗಿತ್ತು.
ಆರೋಪಿಗಳು ಹಾಸನ ಸೇರಿದಂತೆ ಜಿಲ್ಲೆಯ ಸಕಲೇಶಪುರ ಬೇಲೂರು ಆಲೂರು ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿದ್ದು ಮಂಡ್ಯ ಕೊಡುಗು ಚಾಮರಾಜನಗರ ಮೈಸೂರು ಜಿಲ್ಲೆಗಳಲ್ಲಿ ಮನೆ ಕಳ್ಳತನ ದಲ್ಲಿ ಭಾಗಿಯಾಗಿದ್ದರು.
ಆರೋಪಿಗಳಿಂದ ಸುಮಾರು 24 ಲಕ್ಷ ಬೆಲೆಬಾಳುವ ೮೨೫ ಗ್ರಾಂ ಚಿನ್ನಾಭರಣ ಹಾಗೂ 7,80,000 ಬೆಲೆಬಾಳುವ 17 ಕೆಜಿ ಬೆಳ್ಳಿ, 30,000 ಬೆಲೆಯ ಲ್ಯಾಪ್ಟಾಪ್, 12000 ಬೆಲೆಯ ವಾಚ್ ,ಸೇರಿದಂತೆ 32,97,000 ಬೆಲೆಯ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಯಿತು.
ಋಷಿ ವೈನ್ಸ್ ಶಾಪ್ ಕಳ್ಳತನ ಪ್ರಕರಣ:
ಸಕಲೇಶಪುರ ತಾಲ್ಲೂಕಿನ ಹಿರಿಯೂರು ಕೂಡಿಗೆಯಲ್ಲಿ ಋಷಿ ವೈನ್ಸ್ ಶಾಪ್ ನಲ್ಲಿ ಲಕ್ಷಾಂತರ ರೂಪಾಯಿಗಳ ಮದ್ಯವನ್ನು ಕಳ್ಳತನ ಮಾಡಲಾಗಿತ್ತು. ಹಾಗು ಹಾಸನ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಮದ್ಯದಂಗಡಿಗಳ
ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು,
ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಇದಕ್ಕೆ ಇತಿಶ್ರೀ ಹಾಡಬೇಕು ಎಂದು ಪಣತೊಟ್ಟ ಸಕಲೇಶಪುರ ಉಪವಿಭಾಗದ ಡಿ ವೈ ಎಸ್ ಪಿ ಬಿ.ಆರ್ ಗೋಪಿ ಹಾಗೂ ಅಧಿಕಾರಿಗಳು ಕಾರ್ಯಚರಣೆಗಿಳಿದು ಆಲೂರು ತಾಲ್ಲೂಕಿನ ಹುಣಸೆ ಗ್ರಾಮದ ಮೋಹನ್ ಬಿನ್ ಶಿವಣ್ಣ,ಚಂದ್ರು ಬಿನ್
ಚಿಕ್ಕೇಗೌಡ, ಇವರುಗಳನ್ನು ಬಂಧಿಸಿದರು.
ಲಾಕ್‌ಡೌನ್ ವೇಳೆಯಲ್ಲಿ ಮದ್ಯ
ವನ್ನು ಕಳ್ಳತನ ಮಾಡಿ ಲಾಕ್‌ಡೌನ್ ನಂತರ ಹೆಚ್ಚಿನ ಹಣಕ್ಕೆ ಮಾರಾಟ ಮಾಡಬಹುದೆಂದು ಕಳ್ಳರ ಯೋಜನೆಯಾಗಿತ್ತು.
ಸುಮಾರು 6.5 ಲಕ್ಷ ರೂಪಾಯಿಯಷ್ಟು ವಿವಿಧ ಕಂಪನಿಗಳ ಮದ್ಯ, ಕೃತ್ಯಕ್ಕೆ ಬಳಸಿದ ಮಾರುತಿ 800 ಕಾರು ವಶಪಡಿಸಿಕೊಳ್ಳಲಾಯಿತು.
ಮೂರು ಮನೆ ಕಳ್ಳತನದ ಪ್ರಕರಣ:
ಮನೆಯ ಬೀಗ ಮುರಿದು ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡುತ್ತಿದ್ದ
ಸಚ್ಚಿನ್, ನವೀನ್,ಸುನಿಲ್,ಹರೀಶ್ ಬಂಧಿಸಿದರು.
ಸುಮಾರು 350 ಲಕ್ಷ ಮೌಲ್ಯದ ಚಿನ್ನಾಭರಣಗಳು. ಬೆಳ್ಳಿ ವಸ್ತುಗಳು, ಮೊಬೈಲ್, ಹಾಗೂ ಕೃತ್ಯಕ್ಕೆ ಉಪಯೋಗಿಸಿದ 2 ಲಕ್ಷ ಬೆಲೆಬಾಳುವ, ಒಂದು ಹೀರೋ ಛಾಪನ್ ಬೈಕು. ಒಂದು ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕು, ಒಂದು ಪಲ್ಸರ್ ಬೈಕ್ ನ್ನು ಅಮಾನತ್ ಪಡಿಸಿಕೊಂಡಿದ್ದಾರೆ. ಹಾಸನ ಜಿಲ್ಲೆಯ 2 ಪ್ರಕರಣಗಳು, ಹಾಗೂ ತುಮಕೂರು ಜಿಲ್ಲೆಯ 01 ಪರರನ್ನು ಪತ್ತೆಯಾಗಿದೆ ಆರೋಪಿತರು ಗಳಿಂದ ಒಟ್ಟು 5 ಲಕ್ಷ ರೂ ರೂ ಬೆಲೆ ಪಾಳುವ ಚಿನ್ನಾಭರಣಗಳು. ಬೆಳ್ಳಿ ವಸ್ತುಗಳನ್ನು ಹೇಗೆ 3 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು.
ಗಾಂಜಾ ಮಾರಾಟ ನಾಲ್ವರ ಬಂಧನ
ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಯುವಕರನ್ನು ಡಿವೈಎಸ್‌ಪಿ ಗೋಪಿ ನೇತೃತ್ವದಲ್ಲಿ ಗಾಂಜಾ ಸಮೇತ ಬಂಧಿಸಿದರು.
ಬೇಲೂರು ತಾಲ್ಲೂಕು ಅರೇಹಳ್ಳಿ ನಿವಾಸಿಗಳಾದ ಲೈಕಾನ್, ಸುಜಿತ್, ಪಟ್ಟಣದ ಸಂದೇಶ, ಹಲಸುಲಿಗೆ ಗ್ರಾಮದ ಪುನಿತ್ ಆರೋಪಿಗಳು.
ಹೇಮಾವತಿ ಸೇತುವೆ ಬಳಿ ಖಾಸಗಿ ಕಲ್ಯಾಣ ಮಂಟಪ ಬಳಿ ಲೈಕಾನ್ ಹಾಗೂ ಸುಜಿತ್ 112 ಗ್ರಾಂ ಗಾಂಜಾವನ್ನು ಸಣ್ಣ ಸಣ್ಣ ಪ್ಯಾಕ್‌ಗಳಲ್ಲಿ ತಂಬಿ ಪಟ್ಟಣದ ಸಂದೇಶ, ಹಲಸುಲಿಗೆ ಗ್ರಾಮದ ಪುನಿತ್‌ಗೆ ಅವರಿಗೆ ಮಾರಾಟ ಮಾಡುತ್ತಿದ್ದರು.
ಸಕಲೇಶಪುರದ ಮೈಕ್ರೋ ಫೈನಾನ್ಸ್ ಕಚೇರಿಯಿಂದ 6 ಲಕ್ಷದ 60 ಸಾವಿರ ರೂ ಕಳ್ಳತನವಾದ ಪ್ರಕರಣ ಸಾರ್ವಜನಿಕ ರಲ್ಲಿ ಕುತೂಹಲ ಮೂಡಿಸಿತ್ತು. ಮೈಕ್ರೋ ಸಂಘಗಳಿಂದ ಹಣ ಶೇಕರಿಸಿದ ಮ್ಯಾನೆಜ್‌ಮೆಂಟ್ ಪ್ರಮುಕ ಬ್ಯಾಂಕ್ ರಜೆ ಇದ್ದ ಕಾರಣ ಕಚೇರಿಯಲ್ಲಿ ಬೀರುವನಲ್ಲಿ ಇಟ್ಟು ಮನೆಗೆ ತೆರಳಿದ್ದ.ಮರುದಿನ ಕಚೇರಿಗೆ ಬಂದಾಗ ಹಣ ಕಳ್ಳತನ ವಾಗಿತ್ತು. ಈ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಮೈಕ್ರೋ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿ ಮೇಲೆ ಅನುಮಾನ ಬಂದು ವಿಚಾರಣೆ ಒಳಪಡಿಸಿದಾಗ ಸತ್ಯ ಹೊರ ಬಂದಿತ್ತು. ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಗಳನ್ನು ಬಂದಿಸಿ ನಗದು ವಶವಪಡಿಸಿಕೊಳ್ಳಲಾಯಿತು.
ಇವು ಪ್ರಮುಖ ಪ್ರಕರಣಗಳಾಗಿದ್ದು ಬಹಳಷ್ಟು ಪ್ರಕರಣಗಳನ್ನು ಬೇದಿಸಿದ್ದಾರೆ.
ಕೃಪೆ: ಭೀಮ ವಿಜಯ
Tags
ಸಕಲೇಶಪುರ