ಸಕಲೇಶಪುರ : ಕ್ರೆಡಿಟ್ ಆಕ್ಸಿಸ್ ಗ್ರಾಮಿಣ್ ಲಿಮಿಟೆಡ್ ಸಂಸ್ಥೆ ಯಿಂದ ಪೌರಕಾರ್ಮಿಕರಿಗೆ ಅಹಾರದ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆಯ ಮುಖ್ಯಾಧಿಕಾರಿ ಸ್ಟೀವನ್ ಪ್ರಕಾಶ್
ಪೌರಕಾರ್ಮಿಕರಿಗೆ ಅಹಾರದ ಕಿಟ್ ನೀಡುವ ಮೂಲಕ ಅವರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲಾಗುತ್ತಿದೆ ಎಂದರು.
ಮಹಿಳೆಯರಿಗೆ ಸಾಲ ನೀಡುವ ಸೇವೆಗೆ ಮಾತ್ರ ಸೀಮಿತವಾಗದೆ ಈ ಸಂಸ್ಥೆ ಕೋರೋನ ಮಹಾಮಾರಿಯನ್ನು ತಡೆಯಲು ದಿನನಿತ್ಯ ಶ್ರಮಿಸುತ್ತಿರುವ ವೃತ್ತಿಗಳನ್ನು ಗುರುತಿಸಿ ಅವರಿಗೆ ಮಾಸ್ಕ್ ಸ್ಯಾನಿಟರಿ ಇತರೆ ಅಗತ್ಯ ವಸ್ತುಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು .
ತಾಲೂಕು ವೈದ್ಯಾಧಿಕಾರಿ ಮಹೇಶ್ ಮಾತನಾಡಿ ಜನರಿಗೆ ಜಾಗೃತಿಯ ಅಗತ್ಯವಿದೆ ಈ ರೋಗದಿಂದ ಭಯ ಪಡುವುದನ್ನು ಬಿಟ್ಟು ಈ ರೋಗ ಹರಡದಂತೆ
ಕಟ್ಟುನಿಟ್ಟಿನ ಕಾರ್ಯಚಟುವಟಿಕೆ ನಡೆಸಬೇಕಾಗಿದೆ ಸರಕಾರ ಹಾಗೂ ವೈದ್ಯಕೀಯ ಇಲಾಖೆ ನೀಡುವ ಮಾಹಿತಿಯನ್ನು ಸರ್ವಜನಿಕರು ತಪ್ಪದೇ ಪಾಲಿಸಬೇಕು ಎಂದರು
ಸಂಸ್ಥೆಯ ವ್ಯವಸ್ಥಾಪಕರಾದ ನಾಗಣ್ಣ ಮತ್ತು ಗೋಪಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು
Tags
ಸಕಲೇಶಪುರ