ಹಾಸನ: ಮಾಸ್ಕ್ ಹಾಕದೇ, ಸ್ವಚ್ಚತೆ ಹಾಗೂ ಸಾಮಾಜಿಕ ಅಂತರ ಕಾಪಾಡದೇ ವ್ಯಾಪಾರ ಮಾಡಲಾಗುತ್ತಿದ್ದ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ನಗರಸಭೆ ಆಯುಕ್ತರು ಮತ್ತು ಸಿಬ್ಬಂದಿಗಳು ರಸ್ತೆ ಬದಿ ವ್ಯಾಪಾರ ಮಾಡುವ ಹೂವಿನ ವ್ಯಾಪಾರಿಗಳ ಗೂಡಂಗಡಿಯನ್ನು ತೆರವು ಮಾಡಲು ಮುಂದಾದಗ ಇವರ ನಡುವೇ ಮಾತಿನ ಚಕಾಮುಖಿ ನಡೆದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ನಗರದ ಮಹಾವೀರ ವೃತ್ತ ಹಾಗೂ ಕಟ್ಟಿನಕೆರೆ ಮಾರುಕಟ್ಟೆ ಮುಖ್ಯಧ್ವಾರದಲ್ಲಿ ಸಾಮಾಜಿಕ ಅಂತರವಿಲ್ಲದೇ ಅಕ್ಕ-ಪಕ್ಕದಲ್ಲಿ ಪೆಟ್ಟಿಗೆ, ಟೈರುಗಳ ಮೇಲೆ ಇಟ್ಟುಕೊಂಡು ವ್ಯಾಪಾರ ಮಾಡಲಾಗುತಿತ್ತು. ವ್ಯಾಪಾರ ಮಾಡುವವರು ಕೆಲವರು ಮಾತ್ರ ಮಾಸ್ಕ್ ಹಾಕುತ್ತಿದ್ದರು. ಕಸವನ್ನು ಎಲ್ಲೆಂದರಲ್ಲಿ ರಸ್ತೆ ಮೇಲೆ ಹಾಕುತ್ತಿದ್ದ ಬಗ್ಗೆ ಅಧಿಕಾರಿಗಳಿಗೆ ದೂರುಗಳು ಬಂದು ಹಿನ್ನಲೆಯಲ್ಲಿ ನಗರಸಭೆ ಆಯುಕ್ತರು ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ನಗರಸಭೆ ವಾಹನದೊಂದಿಗೆ ತೆರವು ಕಾರ್ಯಚರಣೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಹೂವಿನ ವ್ಯಾಪಾರಿಗಳು ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶವ್ಯಕ್ತಪಡಿಸಿದರು. ಕೆಲ ಸಮಯ ಕೂಗಾಟ ಜೋರಾಗಿಯೇ ನಡೆಯಿತು. ಸ್ಥಳಕ್ಕಾಗಮಿಸಿದ ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು ಹಾಗೂ ನಗರಸಭೆ ಆಯುಕ್ತರ ಮಧ್ಯೆ ಚರ್ಚೆ ನಡೆಯಿತು. ಮುಂದೆ ಸ್ವಚ್ಛತೆ, ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸಿ ವ್ಯಾಪಾರ ಮಾಡುವ ಬಗ್ಗೆ ಭರವಸೆ ನೀಡಿದ ಮೇಲೆ ಆಯುಕ್ತರು ಸುಮ್ಮನಾದರು. ಇದಾದ ಬಳಿಕ ಜವಬ್ಧಾರಿ ಹೊತ್ತುಕೊಂಡ ರೈತ ಸಂಘದ ಅಧ್ಯಕ್ಷ ಬಾಬು ಮೇಲು ಕೂಡ ಹೂವಿನ ವ್ಯಾಪಾರಸ್ತರು ಆಕ್ರೋಶವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಳ್ಳಲಾಯಿತು.
ವರ್ತಕರು ಮಾಧ್ಯಮದೊಂದಿಗೆ ಮಾತನಾಡಿ, ನಗರಸಭೆ ಆಯುಕ್ತರು ವ್ಯಾಪಾರ ಮಾಡುವ ಸ್ಥಳಕ್ಕೆ ಬಂದು ನಿಮಗೆ ಈ ಹಸಿರು ಶಾಲು ಯಾರು ಹಾಕಿಸಿದವರು, ಕೂಲಿ ಮಾಡಿಕೊಂಡು ಇರುವವರಿಗೆ ಏಕೆ ಬೇಕು? ಎಂದಿದ್ದಾರೆ. ಸಿಬ್ಬಂದಿಗಳನ್ನು ಬಿಟ್ಟು ನಮ್ಮ ಮೇಲೆ ಹೊಡೆಸಿದ್ದಾರೆ ನಗರಸಭೆ ಸಿಬ್ಬಂದಿಯವರು 30 ಸಾವಿರ ರೂಗಳ ಹೂವನ್ನು ವಾಹನದಲ್ಲಿ ಕೊಂಡೂಯ್ದಿದ್ದಾರೆ. ನಾವು ಹೇಗೆ ಜೀವನ ಮಾಡುವುದು ಎಂದು ದೂರಿದರು.
ರೈತರ ಸಂಘದ ಜಿಲ್ಲಾಧ್ಯಕ್ಷ ಬಾಬು ಮಾತನಾಡಿ, ಬಡವರು ಇಲ್ಲಿ ಹೂವಿನ ಮತ್ತು ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸ್ವಚ್ಛತೆ ಇರಲು ಎಂದು ನಗರಸಭೆ ಕಮಿಷನರ್ ಕೇಳಿದ್ದು, ಈ ವೇಳೆ ವ್ಯಾಪಾರಸ್ತರ ನಡುವೇ ಮಾತಿನ ಚಕಾಮುಖಿ ನಡೆದಿದೆ ಎಂದರು. ವ್ಯಾಪಾರ ಮಾಡಲು ಬರುವ ಸಾರ್ವಜನಿಕರು ಆಗಲಿ, ವ್ಯಾಪಾರಸ್ತರಾಗಲಿ ಸ್ವಚ್ಛತೆ ಕಾಪಾಡಿ, ಮಾಸ್ಕ್ ಧರಿಸಿ ಸಾಮಾಜಿಕ ಅಂತರದಲ್ಲಿ ಇರಬೇಕು. ಮುಂದೆ ಇರುವಂತೆ ನೋಡಿಕೊಳ್ಳಲಾಗುವುದು. ನಗರಸಭೆಯವರು 30 ಸಾವಿರಕ್ಕೂ ಹೆಚ್ಚಿನ ಹೂವನ್ನು ಕೊಂಡೂಯ್ದಿದ್ದು, ವಾಪಸ್ ಕೊಡುವಂತೆ ಮನವಿ ಮಾಡಲಾಯಿತು. ಇಂದಿನಿಂದ ಸ್ವಚ್ಛತೆಯನ್ನು ನಮ್ಮ ರೈತ ಸಂಘದಿಂದ ಮಾಡಲಾಗುವುದು ಎಂದು ಭರವಸೆ ಮಾತನ್ನು ಹೇಳಿದರು.
ನಗರಸಭೆ ಆಯುಕ್ತರಾದ ಕೃಷ್ಣಮೂರ್ತಿ ಮಾತನಾಡಿ, ಸರಕಾರದ ಆದೇಶದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಯವರ ಆದೇಶದಂತೆ ಪ್ರತಿಯೊಬ್ಬ ನಾಗರೀಕನು ಕೂಡ ಸಾಮಾಜಿಕ ಅಂತರ, ಮಾಸ್ಕ್ ಹಾಕುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ನಗರ ಸಾರಿಗೆ ಹಿಂಬಾಗ ಮಹಾವೀರ ವೃತ್ತದ ಬಳಿ ಸಾಮಾಜಿಕ ಅಂತರ ಕಾಪಾಡದೇ, ಮಾಸ್ಕ್ ಹಾಕದೇ ಹೂವಿನ ವ್ಯಾಪಾರ ಮಾಡಲಾಗುತ್ತಿದ್ದವರಿಗೆ ಅರಿವು ಮೂಡಿಸಲು ಬಂದಾಗ ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಜೊತೆ ವ್ಯಾಪಾರಸ್ತರು ಮನಸ್ಸಾ ಇಚ್ಚೆ ಮಾತನಾಡಿ, ಕೆಲ ಸಮಯ ಮಾತಿನ ಘರ್ಷಣೆಯಾಗಿದೆ ಎಂದರು. ಈ ವೇಳೆ ಅವರಿಗೆಲ್ಲಾ ಎಚ್ಚರಿಕೆ ಕೊಡಲಾಗಿದೆ. ಮುಂದೆ ನಗರಸಭೆ ವ್ಯಾಪ್ತಿಯಲ್ಲಿ ಸಾಮಾಜಿಕ ಅಂತರ ಕಾಪಾಡದೇ, ಮಾಸ್ಕ್ ಹಾಕದೇ ವ್ಯಾಪಾರ ಮಾಡಲು ಮುಂದಾದರೇ ಅಂತವರ ಮೇಲೆ ಶಿಸ್ತು ಕ್ರಮಕೈಗೊಳ್ಳಲಾಗುವುದು. ಕಾನೂನು ಪಾಲಿಸಿದೆ ಹೀಗೆ ಮುಂದುವರೆದರೇ ಸಾರ್ವಜನಿಕ ಪರವಾಗಿ ನಿಂತು ಅಂತಹ ವ್ಯಾಪಾರಸ್ತರ ಮೇಲೆ ಮೊಕ್ಕದಮ್ಮೆ ದಾಖಲಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು
Tags
ಹಾಸನ