ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಚಹಾ ಕೂಟ


ಕ್ವೀಟ್ ಇಂಡಿಯಾ ಚಳುವಳಿಯ ವಾರ್ಷಿಕೋತ್ಸವದ ಸಲುವಾಗಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಆಗಸ್ಟ್ 9 ರಂದು ರಾಷ್ಟ್ರಪತಿಯವರು ವಿಶೇಷ ಚಹಾಕೂಟ ನೀಡಲಿದ್ದಾರೆ. 
ಚಹಾ ಕೂಟಕ್ಕೆ ನಾಮನಿರ್ದೇಶನಗೊಳ್ಳುವ ಸ್ವಾತಂತ್ರ್ಯ ಹೋರಾಟಗಾರರು ಕಡ್ಡಾಯವಾಗಿ ಕೇಂದ್ರ ಸರ್ಕಾರದ ಸ್ವತಂತ್ರ್ಯ ಸೈನಿಕ್ ಸಮ್ಮಾನ್ ಪಿಂಚಣಿಯನ್ನು ಪಡೆಯುತ್ತಿರುವವರೇ ಆಗಿರಬೇಕು. ನಾಮನಿರ್ದೇಶನ ಮಾಡುವ ಮೊದಲು ಕೇಂದ್ರ ಪಿಂಚಣಿ ಪಡೆಯುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.  ಈ ಹಿಂದಿನ ಚಹಾಕೂಟದಲ್ಲಿ ಭಾಗವಹಿಸಿದ್ದ ಹೋರಾಟಗಾರರನ್ನೇ ನಿರ್ದೇಶನ ಮಾಡುವಂತಿಲ್ಲ. 2020ರ ಜೂನ್ 03 ರ ಪತ್ರದಲ್ಲಿನ ಮಾರ್ಗಸೂಚಿಗಳನ್ನು ಅನುಸರಿಸಿ ಎಲ್ಲಾ ಜಿಲ್ಲೆಗಳಿಂದ ಸೇರಿ ಒಟ್ಟು ಗರಿಷ್ಟ 10 ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಆರಿಸಿ ಮಾಹಿತಿ ನೀಡುವಂತೆ ಕೋರಲಾಗಿದೆ.
ಕೋವಿಡ್-19 ಕಾರಣಾರ್ಥವಾಗಿ ಹಿರಿಯ ನಾಗರೀಕರು ದೆಹಲಿಗೆ ಪ್ರಯಾಣ ಮಾಡುವುದು ಸೂಕ್ತವಲ್ಲದದ್ದರಿಂದ ಕರ್ನಾಟಕದಲ್ಲಿ ಗರಿಷ್ಠ 10 ಜನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಅವರ ಸೇವೆಯ ಆಧಾರದ ಮೇಲೆ ಗುರುತಿಸಿ ಆಯಾ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಗೌರವ ಸಮರ್ಪಿಸುವಂತೆ ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಶಿವಣ್ಣ ಅವರು ಕೋರಿದ್ದಾರೆ.

Post a Comment

Previous Post Next Post