16 ವಾಸದ ಮನೆಗಳ ಗೋಡೆ ಕುಸಿತ


 ಕೊಣನೂರು: ಹೆಚ್ಚಿನ ಮಳೆ ಮತ್ತು ಗಾಳಿಯಿಂದಾಗಿ 16 ಮನೆಗಲ ಗೋಡೆಗಳು ಕುಸಿದಿವೆ.
ಹೋಬಳಿಯ ತರಿಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರಿಗಳಲೆ, ಸುಳುಗೋಡು ಸೋಮವಾರ ಮತ್ತು ಹೊನಗಾನಹಳ್ಳಿ ಗ್ರಾಮಗಳಲ್ಲಿ 16 ಮನೆಗಳ ಗೋಡೆಗಳು ಕುಸಿದಿವೆ.
ಕೊಡಗಿನ ಭಾಗಕ್ಕೆ ಹೊಂದಿಕೊಂಡತಿರುವ ಗ್ರಾಮಗಳಾದ ತರಿಗಳಲೆಯಲ್ಲಿ ರಾಜೇಗೌಡ, ತಮ್ಮಣ್ಣೇಗೌಡ, ರಾಜೇಗೌಡ,ಈರಮ್ಮ, ಕಮಲಮ್ಮ, ತಿಮ್ಮೇಗೌಡ, ವೆಂಕಟೇಗೌಡ, ರಾಜಮ್ಮ, ಮಲ್ಲಶೆಟ್ಟಿ, ಜಯಮ್ಮ, ಸಣ್ಣಮ್ಮ, ದೇವಿರಮ್ಮ ರ ವಾಸದ ಮನೆಗಳ, 
ಸುಳುಗೋಡುಸೋಮವಾರ ಗ್ರಾಮದ ತೀರ್ಥಕುಮಾರ ಮತ್ತು ಗೋಪಾಲಕೃಷ್ಣ ಹಾಗೂ ಹೊನಗಾನಹಳ್ಳಿಯ ಲಕ್ಷಮ್ಮ, ಮಲ್ಲಿಗೆಮ್ಮ ರಿಗೆ ಸೇರಿದ ಮನೆಗಳ ಗೋಡೆಗಳು ಕುಸಿದಿವೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಸುರಿದ ಅಧಿಕ ಮಳೆಯಿಂದಾಗಿ ಬೆಳೆಗಳು ಹಾಳಾಗುವ ಜೊತೆಗೆ ವಾಸವಿರುವ ಮನೆಗಳ ಗೋಡೆಗಳು ಕುಸಿದಿದ್ದು ಜನರನ್ನು ಸಂಕಷ್ಟಕ್ಕೆ ತಳ್ಳಿವೆ.
ಸ್ಥಳಕ್ಕೆ ಗ್ರಾ.ಪ ಅಭಿವೃದ್ಧಿ ಅಧಿಕಾರಿ ರಾಜಶೇಖರ್, ಕಾರ್ಯದರ್ಶಿ ಅಣ್ಣಯ್ಯ ಮತ್ತರು ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದಾರೆ.

Post a Comment

Previous Post Next Post