ಹಾಸನದಲ್ಲಿಂದು ಕರೋನ ಪಾಸಿಟಿವ್ 300 ಕ್ಕೂ ಹೆಚ್ಚು ಪತ್ತೆ

ಹಾಸನ: ಜಿಲ್ಲೆಯಲ್ಲಿ ಗುರುವಾರ ಕರೊನಾ ತ್ರಿಶತಕ ಬಾರಿಸಿದ್ದು ದಿನದಿಂದ ದಿನಕ್ಕೆ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಲೇ ಇದೆ. ಒಂದೇ ದಿನ ಗರಿಷ್ಠ 325 ಜನರಲ್ಲಿ ಕೋವಿಡ್-19 ದೃಢಪಟ್ಟಿದ್ದು ಮೂವರು ಮೃತಪಟ್ಟಿದ್ದಾರೆ. 
ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6856ಕ್ಕೆ ಏರಿಕೆಯಾಗಿದ್ದು, 4615 ಜನ ಇಲ್ಲಿವರೆಗೆ ಡಿಸ್ಚಾರ್ಜ್ ಆಗಿದ್ದಾರೆ. 2066 ಸಕ್ರಿಯ ಪ್ರಕರಣಗಳಿದ್ದು, 60 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೊನಾದಿಂದ ಈ ತನಕ 175 ಜನ ಮೃತಪಟ್ಟಿದ್ದಾರೆ.

Post a Comment

Previous Post Next Post