ಲಾಂಚ್‌ನಲ್ಲಿ ವಾಹನ ನಿಲ್ಲಿಸುವ ವಿಚಾರಕ್ಕೆ ಪ್ರವಾಸಿಗರು ಮತ್ತು ಸ್ಥಳೀಯರ ಜಟಾಪಟಿ

ಲಾಂಚ್‌ನಲ್ಲಿ ವಾಹನ ನಿಲ್ಲಿಸುವ ವಿಚಾರದಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರ ನಡುವೆ ಮಾತಿಗೆ ಮಾತು ಬೆಳೆದು , ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ . ಕಳಸವಳ್ಳಿ ದಡದಲ್ಲಿ ಬುಧವಾರ ಘಟನೆ ಸಂಭವಿಸಿದೆ . 

ಗದಗದಿಂದ ಸಿಗಂದೂರಿಗೆ ಬಂದಿದ್ದ ಪ್ರವಾಸಿಗರು , ತಮ್ಮ ವಾಹನವನ್ನು ಮೊದಲು ಲಾಂಚ್‌ಗೆ ಹತ್ತಿಸಬೇಕು ಎಂದು ಜಗಳ ತೆಗೆದಿದ್ದಾರೆ . ಈ ವೇಳೆ ಸ್ಥಳೀಯರು ಮತ್ತು ಪ್ರವಾಸಿಗರ ನಡುವೆ ಮಾತಿಗೆ ಮಾತು ಬೆಳೆದಿದೆ . ಕೊನೆಗೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ . ಲಾಂಚ್ ಸಿಬ್ಬಂದಿ ಮತ್ತು ಸ್ಥಳೀಯರೆ ಜಗಳ ಬಿಡಿಸಿದ್ದಾರೆ . ಕರೋನ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧವಿದೆ . ಆದರೂ ವಿವಿಧೆಡೆಯಿಂದ ಭಕ್ತರು ದೇಗುಲದ ಬಳಿಗೆ ಬಂದು ಹೋಗುತ್ತಿದ್ದಾರೆ .

Post a Comment

Previous Post Next Post