ಹಾಸನ: ಕೊರೋನಾ ಎಂಬ ಮಹಾಮಾರಿ ಆವರಿಸಿ ದಿನೆ ದಿನೆ ಪಾಸಿಟಿವ್ ಪ್ರಕರಣ ಹೆಚ್ಚು ಬರುತ್ತಿರುವುದರಿಂದ ಅವರನು ನೋಡಿಕೊಳ್ಳಲು ಆರೋಗ್ಯ ಸಿಬ್ಬಂದಿಗಳ ಅವಶ್ಯಕತೆ ಇದೆ. ಕೊರೋನಾ ವಾರಿಯರ್ಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹರಿಂದ ಅರ್ಜಿ ಹಾಕಿದವರಿಗೆ ಬುಧವಾರದಂದು ನೇರ ಸಂದರ್ಶನ ಮಾಡಲಾಯಿತು. ಉದ್ಯೋಗಾಂಕಕ್ಷಿಗಳು ಕೆಲಸಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದರು.
ಬುಧವಾರ ಮತ್ತು ಗುರುವಾರ ಎರಡು ದಿವಸಗಳ ಕಾಲ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಅರ್ಜಿ ಹಾಕಿರುವವರು ಮಾತ್ರ ಸಂದರ್ಶನಕ್ಕೆ ಅರ್ಹರಾಗಿದ್ದಾರೆ. ಬೆಳಿಗ್ಗೆ 10 ಗಂಟೆಯಿಂದಲೇ ಮಹಿಳೆಯರು ಸರದಿ ಸಾಲಿನಲ್ಲಿ ನಿಲ್ಲದೇ ಬಿಸಿಲು ಇದ್ದುದರಿಂದ ಒಟ್ಟೊಟ್ಟಿಗೆ ನಿಂತಿದ್ದರು. ಕೊರೋನಾ ರೋಗಿಗಳನ್ನು ನೋಡಿಕೊಳ್ಳಲೆಂದೆ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಆದರೇ ಸಂದರ್ಶನಕ್ಕೆ ಬಂದವರೇ ಸಾಮಾಜಿಕ ಅಂತರವಿಲ್ಲದೇ ಒಟ್ಟೊಟ್ಟಿಗೆ ನಿಂತಿದ್ದರು. ಇದನ್ನು ಗಮನಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಕಛೇರಿ ಸಿಬ್ಬಂದಿ ಓರ್ವ ಸಾಲಿನಲಗಲಿ ನಿಂತವರಿಗೆ ತಿಳಿ ಮಾತನೇಳಿ ಸಾಮಾಜಿಕ ಅಂತರ ಕಾಪಾಡಿದರು. ಸಂದರ್ಶನಕ್ಕೆ ಬಂದವರು ಸಂಜೆಯಾದರೂ ಸಾಲಿನಲ್ಲಿ ನಿಂತಿದ್ದರು. ಕೆಲವರು ಊಟಕ್ಕೂ ಹೋಗಲಾರದೇ ಉಪವಾಸ ನಿಂತಿದ್ದರು.
ಜಿಲ್ಲಾ ಆರೋಗ್ಯ ಇಲಾಖೆಯ ಪ್ರಭಾರಿ ಅಧಿಕಾರಿ ಕಾಂತರಾಜು ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಸರಕಾರದ ಆದೇಶದಂತೆ ಕೊವಿಡ್-19 ಕೆಲಸ ನಿರ್ವಹಿಸುವಾಗ ಹೆಚ್ಚು ಆರೋಗ್ಯ ಸಿಬ್ಬಂದಿಗಳ ಅವಶ್ಯಕತೆ ಇರುತ್ತದೆ. ಕಳೆದ ತಿಂಗಳು ಸಿಬ್ಬಂದಿಗಳ ನೇಮಕಾತಿಗಾಗಿ ಅರ್ಹರಿಂದ ಅರ್ಜಿಗಳನ್ನು ಕೇಳಿ ಕರೆಯಲಾಗಿತ್ತು. ಶುಶ್ರುತ ಅಧಿಕಾರಿಗಳು ಒಟ್ಟು 56 ಕೆಲಸ ಖಾಲಿ ಇದ್ದು, ಇದಕ್ಕೆ 200 ಜನ ಕೆಲಸ ಬಯಸಿ ಅರ್ಜಿ ಹಾಕಿದ್ದರು. ಪ್ರಯೋಗಶಾಲಾ ತಜ್ಞರು-9 ಖಾಲಿ ಇದ್ದು, ಅದಕ್ಕೆ-73 ಜನರು ಅರ್ಜಿ ಹಾಕಿದ್ದಾರೆ. ಪಾರ್ಮಸಿ ಅಧಿಕಾರಿಗಳು 107 ಖಾಲಿ ಇದ್ದು, ಆದರೇ 65 ಜನ ಮಾತ್ರ ಅರ್ಜಿ ಹಾಕಿದ್ದಾರೆ. ಈ ಕೆಲಸದ ಬಗ್ಗೆ ಮತ್ತೊಮ್ಮೆ ಪೇಪರ್ ನೋಟಿಪಿಕೇಶನ್ ಕೊಡಲಾಗಿ ಬುಧವಾರ ನೇರ ಸಂದರ್ಶನ ನಡೆಸಲಾಗುತ್ತಿದೆ ಎಂದರು. ಮೊದಲ ದಿವಸ ಶುಶ್ರುತ ಅಧಿಕಾರಿಗಳಿಗೆ ನೇರ ಸಂದರ್ಶನ ನಡೆಸಲಾಗುತ್ತಿದೆ. ನಾಳೆ ಪಾರ್ಮಸಿ ಅಧಿಕಾರಿಗಳು ಹಾಗೂ ಪ್ರಯೋಗಶಾಲಾ ತಂತ್ರಜ್ಞರಿಗೆ ನೇರ ಸಂದರ್ಶನ ಮಾಡಿ ನೇಮಿಸಿಕೊಳ್ಳಲಾಗುತ್ತಿರುವುದಾಗಿ ಹೇಳಿದರು.
Tags
ಹಾಸನ