ಹಾಟ್‌ ಬೆಡಗಿಯ ದೇಹಕ್ಕೆ ಮತ್ತೆ ಚುಚ್ಚಿಸಿಕೊಂಡ ಸಮಂತಾ

ಟಾಲಿವುಡ್‌ನ ಹಾಟ್ ಬೆಡಗಿ ಸಮಂತಾ ಆಗಾಗ ತಮ್ಮ ಫ್ಯಾಷನ್‌ ಸ್ಟೇಟ್‌ಮೆಂಟ್‌ನಿಂದಲೂ ಗಮನ ಸೆಳೆಯುತ್ತಿರುತ್ತಾರೆ. ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿರುವ ಸಮಂತಾರ ಅಭಿನಯಕ್ಕೆ ಪಾತ್ರವಲ್ಲ ಫ್ಯಾಷನ್‌ ಲುಕ್‌ಗೂ ಕರ್ನಾಟಕದಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ.
ಅಕ್ಕಿನೇನೆ ಕುಟುಂಬದ ಸೊಸೆಯಾಗಿರುವ ಸಮಂತಾ ಮದುವೆಗೆ ಮೊದಲು ಎಷ್ಟು ಬೋಲ್ಡ್, ಸ್ಟೈಲಿಷ್‌ ಲುಕ್‌ನಿಂದ ಕಾಣಿಸುತ್ತಿದ್ದರೋ, ಮದುವೆ ನಂತರ ಕೂಡ ಹಾಟ್ ಲುಕ್‌ನಿಂದ ಗಮನ ಸೆಳೆಯುತ್ತಾರೆ.

ಅವರ ಪ್ರತಿಯೊಂದು ಫ್ಯಾಷನ್ ಲುಕ್ ಫ್ಯಾಷನ್ ಜಗತ್ತಿನ ಗಮನ ಸೆಳೆಯುತ್ತಿರುವುದು ಸುಳ್ಳಲ್ಲ. ಇದೀಗ ಸಮಂತಾ ದೇಹಕ್ಕೆ ಚುಚ್ಚಿಕೊಳ್ಳುವ ಮೂಲಕ ಮತ್ತೊಂದು ಫ್ಯಾಷನ್ ಗೋಲ್ ನೀಡಿದ್ದಾರೆ. ದೇಹಕ್ಕೆ ಚುಚ್ಚಿಕೊಂಡಿದ್ದಾರೆ ಎಂದಾಗ ತುಂಬಾ ಊಹಿಸಿಕೊಳ್ಳಬೇಡಿ, ಅವರು ಚುಚ್ಚಿರುವುದು ಕಿವಿಗೆ. ಈಗಾಗಲೇ ಸಮಂತಾ ಕಿವಿಯಲ್ಲಿ ಈಗಾಗಲೇ ನಾಲ್ಕು ಓಲೆಗಳಿವೆ, ಇದೀಗ ಮತ್ತೊಂದು ಸೇರ್ಪಡೆಯಾಗಿದೆ.

ಈ ಹಿಂದೆ ಕಿವಿಗೆ ನಾಲ್ಕೈದು ರಂಧ್ರ ಮಾಡಿ ಕ ಓಲೆ ಧರಿಸುವ ಫ್ಯಾಷನ್ ಇತ್ತು. ಇದೀಗ ಕೆಲವು ವರ್ಷಗಳಿಂದ ಆ ಫ್ಯಾಷನ್ ಸ್ವಲ್ಪ ಕಡಿಮೆಯಾಗಿತ್ತು. ಇದೀಗ ಮತ್ತೆ ಆ ಫ್ಯಾನ್ ಬಂದಿದ್ದು ಸಮಂತಾ ಕೂಡ ಕಿವಿಯಲ್ಲಿ 5 ಕಿವಿಯೋಲೆ ಧರಿಸಿ ತಮ್ಮ ಕಿವಿಯ ಅಲಂಕಾರ ಹೆಚ್ಚಿಸಿಕೊಂಡಿದ್ದಾರೆ. ಈ :ಫ್ಯಾಷನ್ ನೋಡಿದ್ದೇ ತಡ ಸಮಂತಾರ ಮಹಿಳಾ ಅಭಿಮಾನಿಗಳು ಈ ಫ್ಯಾಷನ್ ಅನುಸರಿಸುವುದಂತು ದಿಟ. ಸಮಂತಾರ ಈ ಕಿವಿಯೋಲೆ ಫ್ಯಾಷನ್ ಸಕತ್ ಅಟ್ರಾಕ್ಟಿವ್ ಆಗಿದೆ ಅಲ್ವಾ?

Post a Comment

Previous Post Next Post