ಬೇಲೂರು ವಿಧಾನಸಭಾ ಕ್ಷೇತ್ರದ ಬಿಕ್ಕೋಡು ಹೋಬಳಿ ಕೋಗಿಲೆಮನೆ ಗ್ರಾಮಪಂಚಾಯಿತಿಯ ಚಿಕ್ಕೋಲೆ ಗ್ರಾಮದಲ್ಲಿ ವಿದ್ಯುತ್ ತಂತಿ ತುಳಿದು ಗ್ರಾಮದ ಚಂದ್ರೇಗೌಡರವರು ದೈವಾದೀನರಾಗಿದ್ದರು, ಈ ಕಾರಣ ಮೃತರ ಮನೆಗೆ ಹಾಸನ ಬಿಜೆಪಿ ಜಿಲ್ಲಾಧ್ಯಕ್ಷರಾದ ಹೆಚ್.ಕೆ.ಸುರೇಶ್(ಹುಲ್ಲಳ್ಳಿ ಸುರೇಶ್) ರವರು ಬೇಟಿನೀಡಿ ಮೃತರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿ ಸಾಂತ್ವಾನ ಹೇಳಿ ಧೈರ್ಯ ತುಂಬಿದರು. ನಂತರ ವಿದ್ಯುತ್ ಇಲಾಖೆಗೆ ಸಂಬಂಧಪಟ್ಟವರಿಗೆ ಕರೆಮಾಡಿ ಪರಿಹಾರ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಾರೋಹಳ್ಳಿ ಸೋಮಶೇಖರ್, ಪದ್ಮೇಗೌಡ, ಬಸವರಾಜು, ರಘು, ಶಿವಣ್ಣ, ಮಧು, ಪ್ರಣೀತ್, ಗೌರಮ್ಮ, ಮಧುರ , ಮನೋಜ್, ಕುಮಾರ್ ಹಾಗೂ ಗ್ರಾಮಸ್ಥರು, ಇನ್ನೀತರರು ಭಾಗಿಯಾಗಿದ್ದರು.
Tags
ಬೇಲೂರು