ಹಾಸನ, :- ಜಿಲ್ಲೆಯ ಎಲ್ಲಾ ಮಕ್ಕಳಿಗೂ ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆ(ಪಿಸಿವಿ) ಹಾಕುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಮ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹಿಮ್ಸ್‍ನ ಸಭಾಂಗಣದಲ್ಲಿಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಸನ ವತಿಯಿಂದ ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆ(ಪಿಸಿವಿ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಳ್ಳಿಗಳಲ್ಲಿ ಹಾಗೂ ಆಸ್ಪತ್ರೆಗೆ ಬರುವಂತಹ ಮಕ್ಕಳಿಗೆ ಲಸಿಕೆ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ತಿಳಿಸಿದರು.
ಲಸಿಕೆ ಕಾರ್ಯಕ್ರಮದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವಂತಹ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಹಿಮ್ಸ್‍ನ ಅಧಿಕಾರಿಗಳಿಗೆ ಕವಿತ ರಾಜಾರಾಮ್ ಅಭಿನಂದನೆ ಸಲ್ಲಿಸಿದರು.
ಆರ್.ಸಿ.ಹೆಚ್ ಅಧಿಕಾರಿ ಡಾ|| ಕಾಂತರಾಜ್ ಅವರು ಮಾತನಾಡಿ ಸಫ್ಟಪಿಕಲ್ ನ್ಯೂಮೋನಿಯಾ ಎಂಬ ಬ್ಯಾಕ್ಟೀರಿಯಾದಿಂದ ಹರಡುವಂತಹ ರೋಗವಾಗಿದ್ದು, ದೇಶದಲ್ಲಿ ಒಟ್ಟು ಮೃತಪಡುವ 5 ವರ್ಷದೊಳಗಿನ ಮಕ್ಕಳಲ್ಲಿ ಶೇ.16 ರಷ್ಟು ನ್ಯೂಮೋನಿಯಾದಿಂದ ಮರಣ ಹೊಂದುತ್ತಿದ್ದಾರೆ ಎಂದರು.
ಈ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆ(ಪಿಸಿವಿ) ಲಸಿಕೆಯನ್ನು ಮುಂಜಾಗ್ರತಾ ಕ್ರಮವಾಗಿ ದೇಶದಾದ್ಯಂತ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
2017 ರಿಂದ ಉತ್ತರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶದಲ್ಲಿ ಈ ಲಸಿಕೆಯು ಆರಂಭವಾಗಿತ್ತು. ಇಂದು 146 ದೇಶಗಳಲ್ಲಿ ಈ ಲಸಿಕೆ ಚಾಲ್ತಿಯಲ್ಲಿದೆ. ಇದೇ ರೀತಿ ಕೋವಿಡ್ ಲಸಿಕೆಯಲ್ಲಿ ನಮ್ಮ ದೇಶ 107 ಕೋಟಿ ದಾಟಿದ್ದು ಈ ಉತ್ತಮ ಸಾಧನೆ ಮಾಡಲು ಸಹಕರಿಸಿದ ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸಿದರು.
ಪ್ರತಿ ವರ್ಷ 2.70 ಕೋಟಿ ಮಕ್ಕಳಿಗೆ, ಹಾಗೂ 2. 90 ಕೋಟಿ ಗರ್ಭಿಯಣಿಯರಿಗೆ ಲಸಿಕೆ ನೀಡಲಾಗುತ್ತಿದೆ. ಈ ಲಸಿಕೆಯನ್ನು ಸುರಕ್ಷಿತವಾಗಿ ಇಡಲು 108 ಕೋಲ್ಡ್ ಚೈನ್ ಪಾಯಿಂಟ್ಸ್, ಐ.ಎಲ್.ಆರ್, ಪೀಪ್ ರಿಸರ್ವ್, ವ್ಯಾಕ್ಸಿನ್ ಕ್ಯಾರಿಯರ್ಸ್, ಐಸ್ ಬ್ಯಾಗ್ ಇವುಗಳನ್ನು ಬಳಕೆ ಮಾಡಿ ಲಸಿಕೆಯನ್ನು ಸುರಕ್ಷಿತವಾಗಿ ಸಂಗ್ರಹಿಸಿ ನಂತರ ಮಕ್ಕಳಿಗೆ ನೀಡಲಾಗುತ್ತದೆ ಎಂದರು.
ಈ ಲಸಿಕೆಯನ್ನು ಮೊದಲನೇ ಡೋಸ್ 1 1/2 ತಿಂಗಳು, ಎರಡನೇ ಡೋಸ್ 3 1/2 ತಿಂಗಳು, 9 ತಿಂಗಳು ಮಕ್ಕಳಿಗೆ ನೀಡಲಾಗುತ್ತದೆ. ಇದರ ಡೋಸೆಜ್ ಪಾಯಿಂಟ್ 5 ಎಮ್.ಎಲ್ ಇದ್ದು, ಮಗುವಿನ ಬಲಗೈಗೆ ಕೊಡಲಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹಿಮ್ಸ್‍ನ ನಿರ್ದೇಶಕರಾದ ರವಿಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಹಿಮ್ಸ್‍ನ ಆಡಳಿತಾಧಿಕಾರಿ ಗಿರೀಶ್ ನಂದನ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ವಿಜಯ್, ಆಯುಷ್ ಇಲಾಖೆಯ ಅಧಿಕಾರಿ ವೀಣಾಲತಾ, ಕಮ್ಯುನಿಟಿ ಮೆಡಿಸಿನ್‍ನ ಡಾ|| ವೆಂಕಟೇಶ್ ಮತ್ತಿತರರು ಹಾಜರಿದ್ದರು.
*****************