ಉಳುಮೆ ಮಾಡುವ ವೇಳೆ ಟ್ರಾಕ್ಟರ್ ಮಗುಚಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ

ಹಾಸನ : ಗದ್ದೆ ಉಳುಮೆ ಮಾಡುವ ವೇಳೆ ಟ್ರಾಕ್ಟರ್ ಮಗುಚಿ ಬಿದ್ದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾಸನ ತಾಲೂಕಿನ ಕಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ . ಚಂದು ( 32 ) ಮೃತ ರೈತ . ಆ .19 ರ ಸಂಜೆ ಗದ್ದೆ ಉಳುಮೆ ಮಾಡುತ್ತಿದ್ದ ವೇಳೆ ಘಟನೆ ನಡೆದಿದ್ದು , ಟ್ರಾಕ್ಟರ್ ಬದುವಿನಂಚಿನಲ್ಲಿ ಮಗುಚಿ ಬಿದ್ದಿದೆ . ಈ ವೇಳೆ ಟ್ರಾಕ್ಟರ್ ಅಡಿಯಲ್ಲಿ ಸಿಲುಕಿದ ಯುವಕ ಕೆಸರು ಗದ್ದೆಯಲ್ಲಿಯೇ ಪ್ರಾಣ ಬಿಟ್ಟಿದ್ದಾನೆ . ಘಟನೆ ನಡೆದಾಗ ಸ್ಥಳದಲ್ಲಿ ಯಾರು ಇರಲಿಲ್ಲ ಎನ್ನಲಾಗಿದ್ದು , ಕೊಂಚ ಸಮಯದ ಗ್ರಾಮಸ್ಥರಿಗೆ ವಿಷಯ ತಿಳಿದಿದೆ . ಈ ಸಂಬಂಧ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Post a Comment

Previous Post Next Post