ಬೆಂಗಳೂರು-ಹಾಸನ ಹೆದ್ದಾರಿ ಟೋಲ್ ಹೆಚ್ಚಳ

ಹಾಸನ: ಬೆಂಗಳೂರು- ಹಾಸನ ನಡುವೆ ಸಂಚಾರ ನಡೆಸುವ ವಾಹನ ಸವಾರರ ಜೇಬಿಗೆ ಕತ್ತರಿ ಬೀಳಲಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಟೋಲ್ ಶುಲ್ಕ ಹೆಚ್ಚಳ ಮಾಡಲು ಅನುಮತಿ ನೀಡಿದೆ. 
ಸೆಪ್ಟೆಂಬರ್ 1ರಿಂದ ಹೊಸ ಶುಲ್ಕ ಜಾರಿಗೆ ಬರಲಿದೆ.
ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಹಾಸನ ನಡುವೆ ಸಂಪರ್ಕ ಕಲ್ಪಿಸುತ್ತದೆ. ಟೋಲ್ ಶುಲ್ಕ ಹೆಚ್ಚಳ ಮಾಡಲು ಎನ್ಎಚ್ಎಐ ಅನುಮತಿ ನೀಡಿದೆ. ಈ ಮಾರ್ಗದಲ್ಲಿ ಒಟ್ಟು ಮೂರು ಟೋಲ್ ಪ್ಲಾಜಾಗಳಿವೆ.
ಕಾರುಗಳಲ್ಲಿ ಎರಡೂ ಕಡೆ ಸಂಚಾರ ನಡೆಸುವವರು 5 ರೂ. ಶುಲ್ಕವನ್ನು ಹೆಚ್ಚು ಪಾವತಿ ಮಾಡಬೇಕು. ಮಾಸಿಕ ಪಾಸುಗಳ ದರಗಳನ್ನು 20 ರೂ. ಹೆಚ್ಚಳ ಮಾಡಲಾಗಿದೆ. ಸೆಪ್ಟೆಂಬರ್ 1ರಿಂದ ನೂತನ ದರಪಟ್ಟಿ ಜಾರಿಯಾಗಲಿದೆ.
ಎಲ್ಸಿವಿ ವಾಹನಗಳ ಮಾಸಿಕ ಪಾಸಿನ ದರವನ್ನು 40 ರೂ. ಏರಿಕೆ ಮಾಡಲಾಗಿದೆ. ಬಸ್, ಲಾರಿ 5 ರೂ. ಶುಲ್ಕವನ್ನು ಹೆಚ್ಚು ನೀಡಬೇಕಿದೆ. ಮಾಸಿಕ ಪಾಸುಗಳ ದರ 4725 ರಿಂದ 4800ಕ್ಕೆ ಏರಿಕೆಯಾಗಿದೆ.
ಕಾರುಗಳ ಏಕ ಮುಖ ಸಂಚಾರಕ್ಕೆ ಇದ್ದ ದರವನ್ನು ಹೆಚ್ಚಳ ಮಾಡಿಲ್ಲ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಕೆಲವು ವಾಹನಗಳ ಶುಲ್ಕವನ್ನು ಹೆಚ್ಚಳ ಮಾಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೋವಿಡ್ ಪರಿಸ್ಥಿತಿ ಕಾರಣದಿಂದಾಗಿ ಜನರ ಸಂಚಾರ ಕಡಿಮೆಯಾಗಿದೆ. ವಾರಂತ್ಯದಲ್ಲಿ ಸುಮಾರು 10 ಲಕ್ಷ ಟೋಲ್ ಸಂಗ್ರಹವಾಗುತ್ತಿತ್ತು. ಆದರೆ, ಈಗ ಅದರ ಅರ್ಧದಷ್ಟು ಸಹ ಸಂಗ್ರಹವಾಗಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Post a Comment

Previous Post Next Post