ಎಸಿಬಿ ಬಲೆಗೆ ಬಿದ್ದ ಗ್ರಾಪಂ ಲೆಕ್ಕಾಧಿಕಾರಿ

ಹಾಸನ: ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಲೆಕ್ಕಾಧಿಕಾರಿ ಎಸಿಬಿ ಬಲೆಗೆ ಬಿದ್ದಿರುವ ಘಟನೆ ತಾಲೂಕಿನ ನಿಟ್ಟೂರಿನಲ್ಲಿ ನಡೆದಿದೆ.
ನಿಟ್ಟೂರು ಗ್ರಾಮ ಪಂಚಾಯಿತಿ ಲೆಕ್ಕಾಧಿಕಾರಿ ಸೋಮಶೇಖರ್ ಸಿಕ್ಕಿಬಿದ್ದ ಗ್ರಾಮ ಲೆಕ್ಕಾಧಿಕಾರಿ. ಬೇಸಾಯದ ಉದ್ದೇಶಕ್ಕಾಗಿ ಟ್ರ್ಯಾಕ್ಟರ್ ಪಡೆಯಲು ಕೃಷಿಕ ಎಂದು ಸರ್ಟಿಫಿಕೇಟ್ ನೀಡಲು ರೈತನಿಂದ 8 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸೋಮಶೇಖರ್. 
ಇದಕ್ಕಾಗಿ ಇಪ್ಪತ್ತು ದಿನಗಳ ಹಿಂದೆಯೇ ಒಂದು ಸಾವಿರ ಅಡ್ವಾನ್ಸ್ ಹಣ ಸಹ ಪಡೆದಿದ್ದ. ಈ ಸಂಬಂಧ ಸಾಲಗಾಮೆ ಹೋಬಳಿ ಸಿಂಗಟಗೆರೆ ರೈತ ಮಹಂತೇಗೌಡ ಎಂಬುವರು ಎಸಿಬಿಗೆ ದೂರು ನೀಡಿದ್ದರು
ಸೋಮವಾರ ರೈತನಿಂದ 6,500 ರೂ. ಹಣ ಪಡೆಯುವಾಗ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಹಾಸನ ಎಸಿಬಿ ಇನ್ಸ್‍ಪೆಕ್ಟರ್‍ಗಳಾದ ಜಗದೀಶ್ ಮತ್ತು ಭರತ್ ಗೌಡ ಲಂಚಬಾಕ ಅಧಿಕಾರಿಯನ್ನು ಖೆಡ್ಡಾಕ್ಕೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮಶೇಖರ್ ವಿರುದ್ಧ ಪ್ರಕರಣ ದಾಖಲಾಗಿದೆ.

Post a Comment

Previous Post Next Post