- 44 ವರ್ಷಗಳ ಹಿಂದೆ ಈ ಸಂಘವನ್ನು ಸ್ಥಾಪಿಸಲಾಯಿತು.
- ಹಾಸನ ತಾಲೋಕಿನ ಉಗನೆ ಹಾಗೂ ಬೈಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 29 ಗ್ರಾಮಗಳ 2,300 ಕಿಸಾನ್ ಕುಟುಂಬಸ್ಥರು ಸಂಘದ ಸದಸ್ಯರಾಗಿದ್ದಾರೆ.
- ಸಂಘದಲ್ಲೇ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ಬೆಳೆಗಳಿಗೆ ಕ್ರಿಮಿನಾಶಕಗಳ ವಿತರಣೆಗೆ ಪ್ರತ್ಯೇಕ ಗೋಡೋನ್ ವ್ಯವಸ್ಥೆ ಕೂಡ ಮಾಡಲಾಗಿದೆ.
- ರೈತರಿಂದ ನೇರವಾಗಿ ಜೋಳ ಖರೀದಿ ಮಾಡಿ ರೈತರ ಖಾತೆಗೆ ಹಣ ವರ್ಗಾವಣೆ ಮಾಡುವ ವ್ಯವಸ್ಥೆ ರೂಪಿಸಲಾಗಿದೆ.
- ರೈತರು ಬೆಳೆದ ಬೆಳೆ ದಾಸ್ತಾನಿಗೆ ಉಗ್ರಾಣದ ವ್ಯವಸ್ಥೆ ಕೂಡ ಮಾಡಲಾಗುತ್ತಿದ್ದು ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ.
- ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಕೃಷಿ ಪರಿಕರಗಳನ್ನೂ ಸಹ ನೀಡಲು ವ್ಯವಸ್ಥೆ ಮಾಡಲಾಗಿದೆ.
- ಸಧ್ಯ ಸಂಘವು ವಾರ್ಷಿಕ 50 ಕೋಟಿ ರೂ ವ್ಯವಹಾರ ನೆಡೆಸುತ್ತಿದ್ದು ಜಿಲ್ಲೆ ಹಾಗೂ ರಾಜ್ಯಕ್ಕೆ ಮಾದರಿ ಸಹಕಾರಿ ಸಂಘವಾಗಿ ಕರ್ತವ್ಯ ನಿರ್ವಹಿಸುತ್ತಿದೆ.
Tags
ಹಾಸನ