ಅರಕಲಗೂಡು : ಮುಂಡುಗೋಡು ಗ್ರಾಮದ ಕಾಲೋನಿಗೆ ವಾರದಲ್ಲಿ ಒಂದು ದಿನ ಮಾತ್ರ ಕುಡಿಯುವ ನೀರಿನ ಸರಬರಾಜು ಉಳಿದ ಎಳು ದಿನಗಳಲ್ಲಿ ನಿಂತ ಕೆರೆ ನೀರೆ ಆಸರೆ.
ಅರಕಲಗೂಡು ತಾಲ್ಲೂಕು ಕತ್ತಿಮಲ್ಲೇನಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಮುಂಡುಗೋಡು ಗ್ರಾಮದ ಕಾಲೋನಿಗೆ ವಾರದಲ್ಲಿ ಒಂದು ದಿನ ಮಾತ್ರ ಕುಡಿಯುವ ನೀರು ನೀಡಲಾಗುತ್ತದೆ ಇನ್ನೂ ಉಳಿದ ದಿನಗಳಲ್ಲಿ ಕೆರೆ ನೀರೆ ಕಾಲೋನಿ ಜನಕ್ಕೆ ಆಸರೆಯಾಗಿದೆ ದಿನನಿತ್ಯ ಬಳಕೆಗೆ ನಿಂತ ಕೆರೆ ನೀರು ಉಪಯೋಗಿಸುತ್ತಿರುವುದರಿಂದ ಸಾಂಕ್ರಾಮಿಕ ರೋಗದ ಭಯ ಗ್ರಾಮದ ಜನತೆಯಲ್ಲಿ ಆವರಿಸಿಕೊಂಡಿದೆ ಇಂತಹ ಪರಿಸ್ಥಿತಿಯನ್ನು ಪಂಚಾಯತಿ ಪಿ ಡಿ ಓ ಗಮನಕ್ಕೆ ಮನವಿ ಮೂಲಕ ತಿಳಿಸಿ ಗ್ರಾಮಕ್ಕೆ ವಾರದಲ್ಲಿ ಎರಡರಿಂದ ಮೂರು ದಿನಕ್ಕೋಮ್ಮೆ ಯಾದರೂ ಕುಡಿಯುವ ನೀರು ಸರಬರಾಜು ಮಾಡಿ ಎಂದು ಕೇಳಿಕೊಂಡರು ಉಡಾಫೇ ಉತ್ತರ ನೀಡುತ್ತಾರೆ ಎನುವುದು ಗ್ರಾಮಸ್ಥರ ವಾದವಾಗಿದೆ.ಹಲವು ವರ್ಷಗಳಿಂದ ಈ ಸಮಸ್ಯೆ ಜೀವಾಂತವಾಗಿ ಇದ್ದರೂ ಸಹ ಗ್ರಾಮಪಂಚಾಯತಿ ಅಧಿಕಾರಿಗಳು ಸಮಸ್ಯೆ ಬಗ್ಗೆ ಹರಿಸುವ ಮನಸ್ಸು ಮಾತ್ರ ಮಾಡಿಲ್ಲ !!
ದೇಶದ ಬಹು ದೊಡ್ಡ ಯೋಜನೆಯಾದ ಉದ್ಯೋಗ ಖಾತ್ರಿ ಅಡ್ಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವುದು ಕೆರೆಕಟ್ಟೆಗಳ ಹುಳು ಎತ್ತುವುದು ಇನ್ನ್ ಇತರೆ ಕಾಮಗಾರಿ ಕೈಗೊಂಡು ಗ್ರಾಮ ಶ್ರೇಯೋಅಭಿವೃದಿಗೆ ಶ್ರಮಿಸಬೇಕಾದ ಗ್ರಾಮಪಂಚಾಯತಿ ಇಲಾಖೆ ಅಧಿಕಾರಿ ಕಣ್ಣು ಮುಚ್ಚಿ ಕುಳಿತಿರುವುದು ವಿಷಧಾನೀಯ .
ಗ್ರಾಮದ ಕೆಲವು ಮುಖಂಡರ ಪ್ರಯತ್ನದಿಂದ ಕಳೆದ ಆರು ತಿಂಗಳ ಹಿಂದೆ
ಹೊಸದಾಗಿ ಬೋರ್ ವೆಲ್ ಕೊರಿಸಿದರೂ ಅದಕ್ಕೆ ಮೋಟರ್ ಅಳವಡಿಸಿ ಪೈಪ್ ಲೈನ್ ಮಾಡಿಸಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅರಿಸಬಹುದು ಆದರೆ ಅಧಿಕಾರಿ ವಿಳಂಬ ನೀತಿ ಅನುಸರಿಸುತ್ತಿದ್ದು ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.
Tags
ಅರಕಲಗೂಡು