ಐಪಿಎಲ್ ನ ಮೂರನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್ ಸಿ ಬಿ 10ರನ್ ಗಳ ಅಂತರದಿಂದ ಜಯ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಸವಾಲಿಗೆ ಇಳಿದ ಆರ್ ಸಿ ಬಿ 5 ವಿಕೆಟ್ ನಷ್ಟಕ್ಕೆ 164 ರ ಗುರಿ ಬಿಟ್ಟು ಕೊಟ್ಟಿತ್ತು. ಆರ್ ಸಿ ಬಿ ನೀಡಿದ 164 ರನ್ ಗಳ ಗುರಿಯನ್ನು ಆತ್ಮವಿಶ್ವಾಸದಿಂದಲೇ ಬೆನ್ನಟ್ಟಲಾರಂಭಿಸಿದ ಸನ್ ರೈಸರ್ಸ್ ಹೈದರಾಬಾದ್ 153 ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲನ್ನನುಭವಿಸಿತು.
ಸನ್ ರೈಸರ್ಸ್ ಹೈದರಾಬಾದ್ ಪರ ಚಾಹಲ್ 4 ಓವರ್ ನಲ್ಲಿ 18 ರನ್ ನೀಡಿ 3 ವಿಕೆಟ್ ಪಡೆದು ಗೆಲುವಿನನಲ್ಲಿ ಪ್ರಮುಖ ಪಾತ್ರ ವಹಿಸಿದರು. ನವದೀಪ್ ಸೈನಿ ಹಾಗೂ ಶಿವಂ ದುಬೆ ತಲಾ 2 ವಿಕೆಟ್ ಪಡೆದು ಚಾಹಲ್ ಅವರಿಗೆ ಸಾಥ್ ನೀಡಿದರು.