ಬಹುತೇಕ ಐಪಿಎಲ್ ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಪ್ ಆರ್ಡರ್ ಸಮಸ್ಯೆ ಎದುರಿಸಿತ್ತು. ಎಬಿ ಡಿವಿಲಿಯರ್ಸ್ ಸ್ಫೋಟಕ ಇನ್ನಿಂಗ್ಸ್ ಹಾಗೂ ಕನ್ನಡಿಗ ದೇವದತ್ ಪಡಿಕ್ಕಲ್ ಹಾಫ್ ಸೆಂಚುರಿ ನೆರವಿನಿಂದ RCB 5 ವಿಕೆಟ್ ಕಳೆದುಕೊಂಡು 163 ರನ್ ಸಿಡಿಸಿದೆ.
IPL 2020: ಡೆಬ್ಯು ಪಂದ್ಯದಲ್ಲಿ ಕನ್ನಡಿಗ ದೇವದತ್ ದಾಖಲೆಯ ಹಾಫ್ ಸೆಂಚುರಿ!.
ಈ ಬಾರಿ ಭಿನ್ನ ತಂಡದೊಂದಿದೆ ಕಣಕ್ಕಿಳಿದಿರುವ RCB ಭರ್ಜರಿ ಆರಂಭ ಪಡೆದಿದೆ. ಈ ಮೂಲಕ ಟೂರ್ನಿಯುದ್ದಕ್ಕೂ ಸ್ಫೋಟಕ ಬ್ಯಾಟಿಂಗ್ ಸೂಚನೆ ನೀಡಿದೆ. ಆರಂಭಿಕ, ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ಆಯರೋನ್ ಫಿಂಚ್ ಆರಂಭಕ್ಕೆ ಸನ್‌ರೈಸರ್ಸ್ ಹೈದರಾಬಾದ್ ನಡುಗಿತು. ಪದಾರ್ಪಣಾ ಪಂದ್ಯದಲ್ಲಿ ಪಡಿಕ್ಕಲ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು.
42 ಎಸೆತದಲ್ಲಿ 8 ಬೌಂಡರಿ ನೆರವಿನಿಂದ 56 ರನ್ ಸಿಡಿಸಿದ ಪಡಿಕ್ಕಲ್ RCBಗೆ ಉತ್ತಮ ಆರಂಭ ಒದಗಿಸಿದರು.