ಅರಕಲಗೂಡು:ಆಕಸ್ಮಿಕವಾಗಿ ವಿದ್ಯುತ್ ತಗುಲಿ 4 ವರ್ಷದ ಮಗು ಮೃತ ಪಟ್ಟಿರುವ ಘಟನೆ ಪಟ್ಟಣದಲ್ಲಿ ನೆಡೆದಿದೆ.ಸುಷ್ಮಿತಾ ಮತ್ತು ಪ್ರಕಾಶ್ ದಂಪತಿಗಳಿಗೆ ಧನುಷ್(೪) ಒಬ್ಬನೇ ಮಗನಾಗಿದ್ದು ಇಂದು ಸಂಜೆ ಸಮಯದಲ್ಲಿ ಅಟವಾಡಲು ಮಹಡಿಯ ಮೇಲೆ ಹೋದ ಸಂದರ್ಭದಲ್ಲಿ ಅಲ್ಲೆ ಬಿದ್ದಿದ್ದ ಕಬ್ಬಿಣದ ರಾಡ್ ತೆಗೆದು ಎಸೆಯಲು ಮಗುವಿಗೆ ಅಕಸ್ಮಿಕವಾಗಿ ವಿದ್ಯುತ್ ತಗುಲಿ ಮಗುವು ಸ್ಥಳದಲ್ಲೇ ಅಸುನಿಗಿದ್ದು,ಮಗುವನ್ನು ರಕ್ಷಿಸಲು ಬಂದ ಮನೆ ಮಾಲೀಕರಿಗೂ ವಿದ್ಯುತ್ ಶಾಕ್ ತಗುಲಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದುಕೊಂಡು ಹೋಗಿದ್ದಾರೆ.