ಸಕಲೇಶಪುರ : ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಫಲಿತಾಂಶಗಳನ್ನು ಬದಲಾಯಿಸು ವಷ್ಟು ಪ್ರಭಲರಾಗಿ ಕಾರ್ಯನಿರ್ವಹಿಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಶ್ಪ ಅಮರನಾಥ ಹೇಳಿದರು.
ಪಟ್ಟಣದ ನಂಜಮ್ಮ ಮಹಿಳಾ ಸಮಾಜ ದಲ್ಲಿ ನಡೆದ ಪಕ್ಷದ ಮಹಿಳಾ ಘಟಕ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು. ಮಹಿಳಾ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.
ಪಕ್ಷ ಸಂಘಟನೆ ಯನ್ನು ಚುನಾವಣೆ ಸಂದರ್ಭದಲ್ಲಿ ಮಾತ್ರ ಮಾಡದೆ ಪೂರ್ವಬಾವಿಯಾಗಿ ಮಾಡಲು ರಾಜ್ಯದ ಪ್ರವಾಸ ಮಾಡಲಾಗುತ್ತಿದೆ ಎಂದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ತಾರ ಚಂದನ್, ಕಾರ್ಯಕ್ರಮ ದಲ್ಲಿ ಮಾತನಾಡಿ, ಪಕ್ಷ ಮಹಿಳೆಯರಿಗೆ ಸೂಕ್ತ ಸ್ಥಾನಮಾನವನ್ನು ನೀಡಿದರೆ ಪಕ್ಷ ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದರು
ಮಹಿಳಾ ಕಾರ್ಯಕರ್ತರು ಸಭೆ ಸಮಾರಂಭಗಳಲ್ಲಿ ಕುರ್ಚಿಯಲ್ಲಿ ಕೂರಲು ಮಾತ್ರ ಮೀಸಲಾಗಿರದೆ ಪಕ್ಷ ಸಂಘಟನೆ ಗೆ ಅವಕಾಶ ಹಾಗೂ ಅಧಿಕಾರನೀಡ ಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗಾಯತ್ರಿ ತಾಲ್ಲೂಕು ಅಧ್ಯಕ್ಷ ಗಾಯತ್ರಿ ಕಿರಣ್, ತಾಲ್ಲೂಕು ಅಧ್ಯಕ್ಷ ಬಾಸ್ಕರ್, ಪ್ರಧಾನ ಕಾರ್ಯದರ್ಶಿ ಸಲೀಂ ಕೊಲ್ಲಹಳ್ಳಿ, ಮುಖಂಡ ಸಿದ್ದಯ್ಯ, ಹುಡ ಮಾಜಿ ಅದ್ಯಕ್ಷ ಕೃಷ್ಣ ಕುಮಾರ್, ವೀಕ್ಷಕ ಮಂಜುನಾಥ್, ಯಡೆಹಳ್ಳಿ ಮಂಜುನಾಥ್, ಡಿ ಸಿ ಸಣ್ಣಸ್ವಾಮಿ, ಕೌಡಳ್ಳಿ ಲೋಹಿತ್, ಉದಯ್, ಕೌಸಲ್ಯ ಲಕ್ಷ್ಮಣ್ ಗೌಡ, ಪುರಸಭೆ ಸದಸ್ಯೆ ಅನ್ನಪೂರ್ಣೇಶ್ವರಿ, ಸರೋಜ ಬಾಳ್ಳು ಪೇಟೆ ಮುಂತಾದವರು ಇದ್ದರು.
Tags
ಸಕಲೇಶಪುರ
