ಹಾಸನದಲ್ಲಿಂದು 476 ಕರೋನ ಪಾಸಿಟಿವ್ ಪತ್ತೆ ಜಿಲ್ಲೆಯಲ್ಲಿ ಒಟ್ಟು 16ಸಾವಿರಕ್ಕೆ ಏರಿಕೆ

 ಹಾಸನ: ಜಿಲ್ಲೆಯಲ್ಲಿ  ಕರೊನಾ ದಿನದಿಂದ ದಿನಕ್ಕೆ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಲೇ ಇದೆ. ಇಂದು ಒಂದೇ ದಿನ ಗರಿಷ್ಠ 476 ಜನರಲ್ಲಿ ಕೋವಿಡ್-19 ದೃಢಪಟ್ಟಿದ್ದು 11 ಜನ ಮೃತಪಟ್ಟಿದ್ದಾರೆ. 

ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 16348 ಕ್ಕೆ ಏರಿಕೆಯಾಗಿದ್ದು, 12775 ಜನ ಇಲ್ಲಿವರೆಗೆ ಡಿಸ್ಚಾರ್ಜ್ ಆಗಿದ್ದಾರೆ. 3251 ಸಕ್ರಿಯ ಪ್ರಕರಣಗಳಿದ್ದು, 51 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೊನಾದಿಂದ ಈ ತನಕ 322 ಜನ ಮೃತಪಟ್ಟಿದ್ದಾರೆ.

Post a Comment

Previous Post Next Post