72 ಜನ ಕೊರೋನಾ ವಾರಿಯರ್ಸ್‍ಗಳಿಗೆಶಾಸಕ ಪ್ರೀತಮ್ ಜೆ. ಗೌಡರಿಂದ ಸನ್ಮಾನ

ಹಾಸನ: ದೇಶದ ಪ್ರಧಾನಿ ನರೇಂದ್ರ ಮೋದಿಯವರ 70ನೇ ವರ್ಷದ ಜನ್ಮ ದಿನದ ಅಂಗವಾಗಿ ನಗರದ ಮೆಡಿಕಲ್ ಕಾಲೇಜು ಆವರಣದಲ್ಲಿ ಹಾಸನ ನಗರ ಬಿಜೆಪಿ ಮಂಡಲದವತಿಯಿಂದ ಕೊರೋನಾ ಸೋಂಕಿನ ವಿರುದ್ಧ ಹೋರಾಟ ಮಾಡುತ್ತಿರುವ ಹಾಸನ ಸರಕಾರಿ ಆಸ್ಪತ್ರೆಯ 72 ಜನ ಕೊರೋನಾ ವಾರಿಯರ್ಸ್‍ಗಳಿಗೆ ಕ್ಷೇತ್ರದ ಶಾಸಕರಾದ ಪ್ರೀತಮ್ ಜೆ. ಗೌಡರವರು ಸನ್ಮಾನಿಸಿ ಗೌರವಿಸಿದರು. 
       ಮೊದಲು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕೊರೋನಾ ಮಹಾಮಾರಿ ಆವರಿಸಿದ ಮೇಲೆ ಮನುಷ್ಯನು ತನ್ನ ಆರೋಗ್ಯದ ಕಾಪಾಡಿಕೊಳ್ಳುವುದರ ಜೊತೆಗೆ ಪಕ್ಕದ ಮನೆಯವರು, ಸಮಾಜದ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದಾರೆ. ಮೊದಲು ದೇವರಲ್ಲಿ ಪ್ರಾರ್ಥನೆ ಮಾಡಬೇಕಾದರೇ ನನಗೆ ಮತ್ತು ಕುಟುಂಬಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸಲಾಗುತಿತ್ತು. ಆದರೇ ಇಂದಿನ ಪರಿಸ್ಥಿತಿಯಲ್ಲಿ ಹಾಸನದಿಂದಲೇ ಹಾಗೂ ಕರ್ನಾಟಕ ಮತ್ತು ದೇಶದಿಂದಲೇ ಕೊರೋನಾ ಹೋಗಬೇಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡುವ ಸಂದರ್ಭ ನಮ್ಮಲ್ಲಿ ಬರುತ್ತಿದೆ ಎಂದರು. ಎಲ್ಲಾರು ಸ್ವಾರ್ಥದಿಂದ ಬದುಕಿದ್ದ ವೇಳೆ ಕೊರೋನಾದಿಂದ ಪಾಠ ಕಲಿತು ಉತ್ತಮ ಭಾವನೆ ವ್ಯಕ್ತವಾಗುತ್ತಿದೆ. ಕೊರೋನಾ ಬಂದವರಿಗೆ ಚಿಕಿತ್ಸೆ ಕೊಡುವಲ್ಲಿ ಕೊರೋನಾ ವಾರಿಯರ್ಸ್ ರವರ ಸೇವೆ ಶ್ಲಾಘನೀಯವಾಗಿದ್ದು, ಅವರನ್ನು ನಾವು ನೆನಪಿಸಿಕೊಂಡು ಸನ್ಮಾನ ಮಾಡುತ್ತಿರುವುದಾಗಿ ಹೇಳಿದರು. 
        ಮೆಡಿಕಲ್ ಕಾಲೇಜಿನ ನಿರ್ದೇಶಕರಾದ ಬಿ.ಸಿ. ರವಿಕುಮಾರ್ ಮಾತನಾಡಿ, ಸಾಂಕೇತಿಕವಾಇಗ 72 ಜನ ಕೊರೋನಾ ವಾರಿಯರ್ಸ್‍ರವರನ್ನು ಆಯ್ಕೆ ಮಾಡಿ ಸನ್ಮಾನಿಸಲಾಗುತ್ತಿದ್ದು, ಉಳಿದವರು ಶ್ರದ್ಧೆಯಿಂದ ಕೆಲಸ ಮಾಡುತ್ತಿಲ್ಲವೇ ಎಂಬ ಭಾವನೆ ಬರುವುದು ಬೇಡ. ಇಡೀ ಶತಮಾನದಲ್ಲಿ ಕಾಣದಂತಹ ಕೊರೋನಾ ಎಂಬ ಮಹಾಮಾರಿ ಆವರಿಸಿ ಸಂಕಷ್ಟ ಎದುರಿಸಲಾಗುತ್ತಿದೆ ಎಂದರು. ಕೊರೋನಾ ಎಂಬ ಸವಾಲನ್ನು ನಾವು ಎದುರಿಸಲಾಗುತ್ತಿದೆ ಎಂದು ಹೇಳಿದರು.
       ಜಿಲ್ಲಾ ಸರಕಾರಿ ಆಸ್ಪತ್ರೆಯ ಸರ್ಜನ್ ಕೃಷ್ಣಮೂರ್ತಿ ಮಾತನಾಡಿ, ಕೊರೋನಾ ವಿರುದ್ಧ ಸಿಬ್ಬಂದಿಗಳು ಉತ್ತಮ ಕೆಲಸ ಮಾಡುತ್ತಿದ್ದು, ಇನ್ನು ಸಾಕಷ್ಟು ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
       ಕಾರ್ಯಕ್ರಮದಲ್ಲಿ ಮೆಡಿಕಲ್ ಕಾಲೇಜಿನ ಈಶ್ವರ್ ಪ್ರಸಾದ್, ಪ್ರಸನ್ನಕುಮಾರ್, ದೀಪಿಕಾ, ಕೃಷ್ಣರಾಜೇಂದ್ರ, ಸುರೇಶ್, ನಗರ ಬಿಜೆಪಿ ಮಂಡಲ ಅಧ್ಯಕ್ಷ ವೇಣುಗೋಪಾಲ್, ಪ್ರೀತಿವರ್ದನ್, ಕುಮಾರ್, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ರತ್ನಮಾಲಾ ಪ್ರಕಾಶ್, ನಗರ ಉಪಾಧ್ಯಕ್ಷರಾದ ವೇಧಾವತಿ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಅನೀತಾ, ವಿಜಯಲಕ್ಷ್ಮಿ, ಲಾವಣ್ಯ, ನಗರ ಜಿಲ್ಲಾ ಕಾರ್ಯದರ್ಶಿ ತುಳಸಿ, ಕುಮಾರ್, ಚಂದ್ರು, ಮುಖಂಡರಾದ ವಾಸಣ್ಣ ಇತರರು ಉಪಸ್ಥಿತರಿದ್ದರು.

Post a Comment

Previous Post Next Post