ಕಾಡು ಪ್ರಾಣಿಗಳ ಚರ್ಮ ಮತ್ತು ಕೊಂಬನ್ನ ಸಂಗ್ರಹಿಸಿಟ್ಟುಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ

ಭದ್ರಾವತಿ ಅರಣ್ಯ ಇಲಾಖೆ ಮತ್ತು ಪೊಲೀಸ್ ಅರಣ್ಯ ಸಂಚಾರಿ ದಳದ ಜಂಟಿ ಕಾರ್ಯಾಚರಣೆಯಿಂದಾಗಿ ಇಬ್ಬರು ಕಾಡುಪ್ರಾಣಿಗಳ ಭೇಟೆಗಾರರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಜಂಟಿ ಕಾರ್ಯಾಚರಣೆಯಲ್ಲಿ ಪ್ರೇಮನಾಥ್ ಮತ್ತು ಆತನ ಪುತ್ರ ಮಂಜುನಾಥ್ ಎಂಬುವವರನ್ನ ಬಂಧಿಸಲಾಗಿದೆ. ಜಿಂಕೆ ಕೊಂಬು,  ಚಿರತೆಯ ಚರ್ಮ ಹಾಗೂ ಕಾಡುಕೋಣದ ಕೊಂಬಗಳನ್ನ ಸಂಗ್ರಹಿಸಿದ್ದ ಇಬ್ಬರು ಖದೀಮರನ್ನ ಪಕ್ಕ ಮಾಹಿತಿಯ ಆಧಾರದ ಮೇರೆಗೆ ಬಂಧಿಸಲಾಗಿದೆ.  ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳು ಮಾತ್ರ ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳಿಬ್ಬರು ಭದ್ರವಾತಿ ತಾಲೂಕು ದೊಡ್ಡೇರಿ ಬಾಳೆಕಟ್ಟೆ ಗ್ರಾಮದ ನಿವಾಸಿಗಳೆಂದು ತಿಳಿದುಬಂದಿದೆ. ಈ ಹಿಂದೆ ಇದೇ ಗ್ರಾಮದ ನಿವಾಸಿಯಾದ ಜಾನು ಎಂಬಾತ ಕರಡಿದಾಳಿಗೆ ಒಳಗಾಗಿ ಅದೃಷ್ಟವಶಾತ್ ಜೀವಾಪಾಯದಿಂದ ಪಾರಾಗಿದ್ದರು. ಅದೇ ಗ್ರಾಮದ ನಿವಾಸಿಗಳಾದ ಪ್ರೇಮನಾಥ್ ಮತ್ತು ಆತನ ಪುತ್ರ ಮಂಜುನಾಥ್ ಕಾಡುಪ್ರಾಣಿಗಳ ಕೊಂಬು ಹಾಗೂ ಚರ್ಮವನ್ನ ಸಂಗ್ರಹಿಸಿಟ್ಟುಕೊಂಡ ಪರಿಣಾಮ ಅರಣ್ಯ ಇಲಾಖೆಯ ಅತಿಥಿಗಳಾಗಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಉಪಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ.ಗಮನಗಟ್ಟಿ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ.ಸುಬ್ರಹ್ಮಣ್ಯ, ವಲಯ ಅರಣ್ಯಾಧಿಕಾರಿ ಕೆ.ಎಸ್. ಮಂಜುನಾಥ್, ಪೊಲೀಸ್ ಅರಣ್ಯ ಸಂಚಾರಿದಳದ ಪಿಎಸ್ಐ ಭಾರತಿ, ಉಪವಲಯ ಅರಣ್ಯಾಧಿಕಾರಿಗಳಾದ ಅಣ್ಣ ನಾಯ್ಕ್ ದಿನೇಶ್ ಕುಮಾರ್ ಬಿ.ಆರ್. ನವೀನ್ ಹಾಗೂ ಹೆಡ್ ಕಾನ್ ಸ್ಟೇಬಲ್ ಗಳಾದ ರವಿಕುಮಾರ್, ದೇವಲಿಂಗಯ್ಯ, ಪ್ರಕಾಶ್, ರಾಘವೇಂದ್ರ, ಕೃಷ್ಣ, ರಮೇಶ್, ನೀಲಾವತಿ ಮತ್ತು ಅರಣ್ಯ ಸಿಬ್ಬಂದಿಗಳಾದ ದೇವರಾಜೇಗೌಡ, ಅರವಿಂದ್ ಪ್ರತಾಪ್, ಮಂಜುನಾಥ್ ರಾಜಪ್ಪ, ಭಾಸ್ಕರ್, ಶೇಖರ್, ಚೌಗುಲೆ, ರಘು, ಮೊದಲಾದವರು ಉಪಸ್ಥಿತರಿದ್ದರು.

Post a Comment

Previous Post Next Post