ಶಿವಮೊಗ್ಗದ ಗೆಜ್ಜೇನಹಳ್ಳಿ ಕ್ರಶರ್ ನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಇಬ್ಬರು ಕೆಲಸಗಾರರು ಸಾವನ್ನಪ್ಪಿದ್ದಾರೆ.
ಕ್ರಶರ್ ಬಳಿ ಕೆಲಸ ಮಾಡುತ್ತಿದ್ದ ವೇಳೆ ಶೀಟ್ ಹಾಗೂ ಕಲ್ಲುಗಳು ಅಸ್ಸಾಂ ಮೂಲದ ದ್ವಿಖೊಲೊಂಗ್ ೨೪ ವರ್ಷ, ಪ್ಲೆಮಿಂಟೋನ್ ಎಂಬ ಯುವಕ ಸಾವನ್ನಪ್ಪಿದ್ದಾರೆ.
ಜೆಲ್ಲಿ ಕಲ್ಲುಗಳನ್ನ ತುಂಬಿಕೊಂಡ ಟ್ರ್ಯಾಕ್ಟರ್ ಅಲ್ಲಿ ಕಟ್ಟಲಾಗಿದ್ದ ಶೀಟ್ ಗೆ ತಾಗಿದ ಪರಿಣಾಮ ಶೀಟ್ ಮತ್ತು ಕಲ್ಲುಗಳು ಈ ಇಬ್ಬರು ಯುವಕರ ಮೇಲೆ ಬಿದ್ದಿದೆ. ದ್ವಿಖಲೊಂಗ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಘಟನೆ ನಿನ್ನೆ ನಡೆದಿದೆ. ಆಸ್ಪತ್ರೆಗೆ ದಾಖಲಾಗಿದ್ದ ಫ್ಲೆಮಿಂಟೋನ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾನೆ.
ಈ ಘಟನೆ ಲಕ್ಷ್ಮೀ ವೆಂಕಟೇಶ್ವರ ಕ್ರಶರ್ ನಲ್ಲಿ ನಡೆದಿದೆ. ಮಾಲೀಕ ಶಿವಕುಮಾರ್ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Tags
ಶಿವಮೊಗ್ಗ