ಡಾಕ್ಟರ್ ರಾಜೀವ್ ಅವರ ಆರೋಗ್ಯದಲ್ಲಿ ಚೇತರಿಕೆ

ಡಾಕ್ಟರ್ ರಾಜೀವ್ ಅವರ ಆರೋಗ್ಯಸ್ಥಿತಿ ಅದೇ ರೀತಿ ಮುಂದುವರೆದಿದ್ದು, ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಯ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ಚಿಕಿತ್ಸೆಯಲ್ಲಿ ಇರುತ್ತಾರೆ. ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರುಗಳು ತಿಳಿಸಿರುತ್ತಾರೆ. ಡಾಕ್ಟರ್ ರಾಜೀವ್ ಅವರು ಆರೋಗ್ಯದಲ್ಲಿ ಚೇತರಿಕೆ  ಕಂಡು ಆರೋಗ್ಯವಾಗಿ ಹಾಸನಕ್ಕೆ ಹಿಂದಿರುಗಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಆಯುಷ್ಯವನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ.

Post a Comment

Previous Post Next Post