ಹಾಸನ: ಕರ್ನಾಟಕ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲೂ ಸರ್.ಎಂ. ವಿಶ್ವೇಶ್ವರಯ್ಯನವರ ಕೊಡುಗೆ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.
ನಗರದ ಲೋಕೋಪಯೋಗಿ ಇಲಾಖೆ ಆವರಣದಲ್ಲಿ ಸರ್.ಎಂ. ವಿಶ್ವೇಶ್ವರಯ್ಯನವರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ನಂತರ ಉದ್ದೇಶಿಸಿ ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೇ ಕರ್ನಾಟಕ ರಾಜ್ಯ ಎಂದರೆ ಒಂದು ಮುಂದುವರೆದ ರಾಜ್ಯ ಎಂಬ ಭಾವನೆ ಬಂದಿದೆ. ಬೇರೆ ಬೇರೆ ಕಾರಣಗಳಿಂದ ಕರ್ನಾಟಕ ಮುಂದೆ ಇದ್ದು, ಆಗೇ ವಿಶ್ವೇಶ್ವರಯ್ಯನವರ ಕೊಡುಗೆ ಕೂಡ ಅಷ್ಟೆ ಪ್ರಮುಖವಾಗಿದೆ. ಬಡತನದ ಕುಟುಂಬಹೊಂದರಲ್ಲಿ ಹುಟ್ಟಿ ಶಿಕ್ಷಣ ಪಡೆದು ಇಂಜಿನಿಯರಾಗಿ ಪದವಿ ಪಡೆದು ಅತ್ಯಂತ ಉತ್ತಮ ಕೆಲಸ ಮಾಡಿ ಯಶಸ್ವಿಯಾಗಿದ್ದಾರೆ ಎಂದರು. ನಂತರದಲ್ಲಿ ಭಾರತರತ್ನಕ್ಕೆ ಭಾಜನರಾಗಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿದೆ. ಪೂನ ಮತ್ತು ಬಾಂಬೆ ಸರಕಾರದಲ್ಲೂ ಕೆಲಸ ಮಾಡುತ್ತಿದ್ದರು. ಉದಾಹರಣೆಯಾಗಿ ನಾನು ಬಾಂಬೆಗೆ ಹೋದಾಗ 50 ಅಂತಸ್ಥಿತಿನ ಎರಡು ಟವರ್ ಇದ್ದು, ಅದಕ್ಕೆ ವಿಶ್ವೇಶ್ವರಯ್ಯನವರ ಹೆಸರನ್ನು ಇಡಲಾಗಿದೆ. ಇವೆಲ್ಲಾ ಅಭಿವೃದ್ಧಿ ಕೆಲಸಗಳಿಗಾಗಿಯೇ ಬೇರೆ ರಾಜ್ಯದವರು ಕರ್ನಾಟಕವನ್ನು ಗೌರವಿಸುತ್ತಿದ್ದಾರೆ. ಕರ್ನಾಟಕದಲ್ಲಿ ಕಾವೇರಿ ನೀರಾವರಿ ನಿಗಮ, ಹೇಮಾವತಿ ಯೋಜನೆ ಸೇರಿದಂತೆ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳನ್ನು ಹಲವಾರು ದಶಕಗಳ ಇರುತ್ತದೆ. ಸರ್.ಎಂ. ವಿಶ್ವೇಶ್ವರಯ್ಯನವರು ಇಂತಹ ಕೆಲಸಗಳಿಗೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರೆ ಮಾತ್ರ ಕೆಲಸ ಪೂರ್ಣಗೊಳ್ಳುವುದು, ಇದರಿಂದ ನೂರಾರು ವರ್ಷಗಳ ಕಾಲ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ ಎಂದು ಹಳೆ ನೆನಪನ್ನು ನೆನಪಿಸಿಕೊಂಡರು. ನಾನೋಬ್ಬ ಇಂಜಿನಿಯರ್ ಆಗಿ ವಿಶ್ವೇಶ್ವರಯ್ಯನವರನ್ನು ಈ ವೇಳೆ ನೆನಪಿಸಿಕೊಳ್ಳುವುದು ನಮ್ಮ ಆಧ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಇಂಜಿನಿಯರ್ ಈ. ಕೃಷ್ಣೇಗೌಡ ಮಾತನಾಡುತ್ತಾ, ಸರ್.ಎಂ. ವಿಶ್ವೇಶ್ವರಯ್ಯನವರು ಅಂದು ನೀರಾವರಿ ನಿಗಮ, ಕೈಗಾರಿಕೆಕರಣ, ಹೆಣ್ಣು ಮಕ್ಕಳಿಗೆ ಶಿಕ್ಷಣ ಎಲ್ಲಾದಕ್ಕೂ ಒತ್ತು ನೀಡಿದ್ದರು. ಅಂದಿನ ಹತ್ತಾರು ಅಭಿವೃದ್ಧಿ ಕೆಲಸಗಳು ನಮಗೆ ಇಂದು ಮಾಧರಿಯಾಗಿದ್ದಾರೆ ಎಂದರು. ಅವರ ಪ್ರೇರಣೆ ಕೆಲಸಗಳಿಗೆ ಇಂದು ನಾವು ಹೊತ್ತುಕೊಟ್ಟು ಸಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾರ್ಯಪಾಲಕ ಇಂಜಿನಿಯರ್ ತಿಮ್ಮೇಗೌಡ, ನಿವೃತ್ತ ಅಧಿಕಾರಿ ಚಿಕ್ಕೇಗೌಡ, ಮಂಜುನಾಥ್, ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್, ರುಕ್ಮಾಂದ, ಹೇಮಂತ್ ಇತರರು ಪಾಲ್ಗೊಂಡಿದ್ದರು.
Tags
ಹಾಸನ