ಅಂದಿನ ನೂರಾರು ಯೋಜನೆಗಳು ಭಾರತದಲ್ಲಿ ಚಿರವಾಗಿದೆ: ಕೃಷ್ಣೇಗೌಡ

ಹಾಸನ: ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯನವರ ಕಾಲಾವಧಿಯಲ್ಲಿ ಜಾರಿಗೆ ಬಂದ ನೂರಾರು ಯೋಜನೆಗಳು ಭಾರತದಲ್ಲಿ ಚಿರವಾಗಿದೆ ಎಂದು ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಇಂಜಿನಿಯರ್ ಈ. ಕೃಷ್ಣೇಗೌಡ ಮತ್ತು ಕಾರ್ಯಪಾಲಕ ಇಂಜಿನಿಯರ್ ತಿಮ್ಮೇಗೌಡ ತಿಳಿಸಿದರು.
       ಕೊರೋನಾ ಇರುವುದರಿಂದ ಮೆನ್ನೆಚ್ಚರಿಕ ಕ್ರಮವಾಗಿ ನಗರದ ಎಂ.ಜಿ. ರಸ್ತೆ ಬಳಿ ಇರುವ ಇಂಜಿನಿಯರ್ ಭವನದಲ್ಲಿ ಮಂಗಳವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯ 160ನೇ ದಿನಾಚರಣೆಯಲ್ಲಿ ಮೊದಲು ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್.ಎಂ. ವಿಶ್ವೇಶ್ವರಯ್ಯರವರು ಶ್ರೇಷ್ಟ ತಂತ್ರಜ್ಞರಾಗಿದ್ದು, ಅಂದು ಕೆ.ಆರ್.ಎಸ್. ನಿರ್ಮಿಸುವುದರ ಮೂಲಕ ಇಂದು ಕುಡಿಯುವ ನೀರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಹಾಗೂ ದೊಡ್ಡ ದೊಡ್ಡ ಅಣೆಕಟ್ಟಿಗೆ ಭದ್ರ ಬುನಾಧಿ ಹಾಕಿದವರು. ಸರ್.ಎಂ. ವಿಶ್ವೇಶ್ವರಯ್ಯ ಅವರ ಅಭಿವೃದ್ಧಿ ಕೆಲಸಗಳು ಒಂದು ಮೈಲುಗಲ್ಲು. ಕೇವಲ ತಾಂತ್ರಿಕ ಕ್ಷೇತ್ರವಲ್ಲದೆ ಸಾಮಾಜಿಕ, ಶೈಕ್ಷಣಿಕ, ಕೃಷಿ, ನೀರಾವರಿ ಕ್ಷೇತ್ರದಲ್ಲೂ ಮಹತ್ವದ ಪರಿಣಾಮಕಾರಿ ಕೆಲಸ ಮಾಡಿದ್ದಾರೆ. ಇವರ ನೂರಾರು ಯೋಜನೆಗಳು ಭಾರತದಲ್ಲಿ ಚಿರವಾಗಿದೆ ಎಂದರು. ಕಾವೇರಿ ಅಣೆಕಟ್ಟು ನಿರ್ಮಾಣಕ್ಕೆ ಇವರೆ ಕಾರಣಕರ್ತರು. ಅನೇಕ ದೊಡ್ಡ ದೊಡ್ಡ ಕಟ್ಟಡಗಳು ಇವರ ಇವರು ನೀಡಿದ ಬಳುವಳಿಯಾಗಿದೆ. ಸರ್.ಎಂ. ವಿಶ್ವೇಶ್ವರಯ್ಯನವರು ನಮಗೆಲ್ಲಾ ದಾರಿ ದೀಪವಾಗಿದ್ದು, ಇವರ ಕೊಡುಗೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ನೀಡಿದ್ದು, ಅವರು ಒಂದು ರೀತಿ ಮೇರು ಪರ್ವತ ಇದ್ದಾಗೆ. ವಿಶ್ವೇಶ್ವರಯ್ಯ ಅವರು ತಮ್ಮ ವೃತ್ತಿ-ನಿವೃತ್ತಿ ಜೀವನದಲ್ಲಿ ಪ್ರಥಮ ಪ್ರಾಶಸ್ತ್ಯ ಕೊಟ್ಟಿದ್ದು, ನೀರಾವರಿ ಯೋಜನೆಗಳ ಸ್ಥಾಪನೆಗಾಗಿ ಎಂದ ಅವರು ಸರ್.ಎಂ. ವಿಶ್ವೇಶ್ವರಯ್ಯ ಅವರ ಆದರ್ಶವನ್ನು ನಾವುಗಳು ಜೀವನದಲ್ಲಿ ಸಲ್ಪವಾದರೂ ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ವಾತವರಣ ನಿರ್ಮಾಣ ಮಾಡಲು ಇದೆ ವೇಳೆ ಕರೆ ನೀಡಿದರು. 
      ಈಸಂದರ್ಭದಲ್ಲಿ ನಿವೃತ್ತ ಅಧಿಕಾರಿ ಚಿಕ್ಕೇಗೌಡ, ಮಂಜುನಾಥ್, ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್, ರುಕ್ಮಾಂದ, ಹೇಮಂತ್ ಇತರರು ಪಾಲ್ಗೊಂಡಿದ್ದರು.

Post a Comment

Previous Post Next Post