ಶೃಂಗೇರಿ: ಸಾಮಾಜಿಕ ಜಾಲತಾಣದಲ್ಲಿ ಮಲೆನಾಡಿನ ಪ್ರಸಿದ್ಧ ಸಾಹಿತಿ ತೇಜಸ್ವಿ ಅವರ ಕೃತಿಯ ಕುರಿತು ಅವಹೇಳನಕಾರಿ ಪೋಸ್ಟ್ ಮಾಡಿರುವ ರಾಘವೇಂದ್ರ ಮೆಣಸೆ ಸುಬ್ರಮಣ್ಯ ಅವರನ್ನು ಪೋಲಿಸ್ ಠಾಣೆಗೆ ಕರೆಸಿ ವಿಚಾರಣೆ ಮಾಡಬೇಕು ಎಂದು ಆಗ್ರಹಿಸಿ ತಾಲ್ಲೂಕು ಯುವ ಒಕ್ಕಲಿಗರ ವೇದಿಕೆ ಪದಾಧಿಕಾರಿಗಳು ಪೋಲಿಸರಿಗೆ ಮನವಿ ಮಾಡಿದರು.
ವೇದಿಕೆಯ ಅಧ್ಯಕ್ಷ ರಾಜೇಶ್ ದ್ಯಾವಂಟು ಮಾತನಾಡಿ ಮಲೆನಾಡಿನ ಅಪರೂಪದ ಸಾಹಿತಿ ತೇಜಸ್ವಿ ಕೃತಿಗಳನ್ನು ಮಾಂಸ ತಿನ್ನುವ ಜಾತಿಯ ಸಾಹಿತಿ ಎಂದು ಅವಹೇಳನಕಾರಿ ವಾಲ್ ಪೋಸ್ಟ್ ಬರೆದ ರಾಘವೇಂದ್ರ ಮೆಣಸೆ ಸುಬ್ರಮಣ್ಯ ಅವರನ್ನು ಕೂಡಲೇ ವಿಚಾರಣೆ ಮಾಡಬೇಕು ಎಂದ ಅವರು ತೇಜಸ್ವಿ ಅವರ ಅಪಾರ ಅಭಿಮಾನಿಗಳಿಗೆ ಹಾಗೂ ಸಮುದಾಯಕ್ಕೆ ಇಸರಿಂದ ತುಂಬಾ ನೋವು ಉಂಟಾಗಿದೆ. ಸಾಮಾಜಿಕ ಸ್ವಾಸ್ಥವನ್ನು ಹಾಳು ಮಾಡುವರ ವಿರುದ್ಧ ಪೋಲಿಸ್ ಇಲಾಖೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ.ಪ್ರವೀಣ್, ಸದಸ್ಯ ಕೆ.ಎಸ್.ರಮೇಶ್,ಯುವ ಒಕ್ಕಲಿಗರ ವೇದಿಕೆ ಮಾಜಿ ಅಧ್ಯಕ್ಷ ಸಂತೋಷ್ ಕಾಳ್ಯ, ಪದಾಧಿಕಾರಿಗಳಾದ ಅಂಗುರ್ಡಿ ದಿನೇಶ್, ಅವಿನಾಶ್ ಕುಂಚೇಬೈಲು ಇದ್ದರು.
Tags
ಚಿಕ್ಕಮಗಳೂರು