ಸುಳ್ಳು ಆರೋಪ ಮಾಡಿರುವ ಫ್ರಾನ್ಸಿಸ್ ವಿರುದ್ಧ ಡಿಸಿ ಕಛೇರಿ ಮುಂದೆ ಪ್ರತಿಭಟನೆ, ಬೆಂಬಲವಾಗಿ ನಿಂತ ಸಂಸದ ಪ್ರಜ್ವಲ್ ರೇವಣ್ಣ

ಹಾಸನ: ಜಿಲ್ಲೆಯಲ್ಲಿರುವ ಚರ್ಚ್‍ಗಳ ಅಭಿವೃದ್ಧಿಯ ಕಾಮಗಾರಿಗಳಿಗೆ ಹಣ ದುರ್ಬಳಕೆ ಮಾಡಿ ಕೊಂಡಿದ್ದಾರೆಂದು ಸುಳ್ಳು ಆರೋಪ ಮಾಡುತ್ತಿರುವ ಹಾಸನ ನಗರ ವಾಸಿ ಫ್ರಾನ್ಸಿಸ್ ಕ್ಷೇವಿಯರ್ ವಿರುದ್ಧ ಪ್ರತಿಭಟನೆಯನ್ನು ಕ್ರೈಸ್ತ ಮುಖಂಡರು, ಗುರುಗಳು ಡಿಸಿ ಕಛೇರಿ ಮುಂದೆ ನಡೆಸಿದರು. ಈ ವೇಳೆ ಸಂಸದರಾದ ಪ್ರಜ್ವಲ್ ರೇವಣ್ಣನವರು ಸೂಕ್ತ ತನಿಖೆಗೆ ಆಗ್ರಹಿಸಿ ಪ್ರತಿಭಟನೆಗಾರರಿಗೆ ಬೆಂಬಲ ಸೂಚಿಸಿದರು.



    ಕರ್ನಾಟಕ ಸರ್ಕಾರದಿಂದ ಕಳೆದ 5 ವರ್ಷಗಳಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯ ಮೂಲಕ ಚರ್ಚಗಳ ನವೀಕರಣ, ಸಮುದಾಯ ಭವನ ಕಟ್ಟಡ ನಿರ್ಮಾಣ, ಸ್ಮಶಾನ ಅಭಿವೃದ್ಧಿಗೆ ಇಡೀ ರಾಜ್ಯದ್ಯಾಂತ ಪ್ರಸ್ತಾವನೆಯನ್ನು ಮಂಜುರಾತಿ ಮಾಡಿ, ಎಲ್ಲಾ ಚರ್ಚ್‍ಗಳಿಗೆ ಅರ್ಧಭಾಗದ ಅನುದಾನವನ್ನು ಬಿಡುಗಡೆ ಮಾಡಿದ್ದು , ಕಾಮಗಾರಿಗಳ ಪ್ರಗತಿ ವರದಿಯನ್ನು ಪರಿಶೀಲನೆ ಮಾಡಿ , ಉಳಿದ ಹಣವನ್ನು ನಂತರ ಬಿಡುಗಡೆ ಮಾಡುವುದಾಗಿ ಆದೇಶವಿದೆ. ಆದರೇ ಫ್ರಾನ್ಸಿಸ್ ಎಂಬ ವ್ಯಕ್ತಿ ಕಾಮಗಾರಿಗಳಲ್ಲಿ ಹಣದ ದುರುಪಯೋಗ ಆಗಿದೆ ಎಂದು ಉಳಿದ ಅನುದಾನವನ್ನು ಬಿಡುಗಡೆ ಮಾಡದಂತೆ ಸುಳ್ಳು ಆರೋಪ ಮಾಡಿ ತಡೆಹಿಡಿದಿರುವುದಾಗಿ ದೂರಿದರು. ಇದರಿಂದ ಕಾಮಗಾರಿಗಳ ಕೆಲಸ ನಿಂತು ಹೋಗಿದ್ದು, ಈ ಮಧ್ಯೆ ಚರ್ಚ್ ಗುರುಗಳ ಬಳಿ ಕೆಲವು ವ್ಯಕ್ತಿಗಳನ್ನು ಕರೆದುಕೊಂಡು ಹೋಗಿ ಹಣದ ಬೇಡಿಕೆಯನ್ನು ಇಡಲಾಗಿದೆ. ಈ ಹಣವನ್ನು ಕೊಡದೆ ಇರುವ ಕಾರಣ, 7 ಚಚ್‍ಗಳ ಗುರುಗಳ ಮೇಲೆ ಭ್ರಷ್ಟಾಚಾರ ಹಾಗೂ ಹಣದ ದುರುಪಯೋಗ ಮಾಡಿದ್ದಾರೆ ಎಂಬುವುದಾಗಿ ಮಾನ್ಯ ಜಿಲಾಧಿಕಾರಿಯವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ರವರಿಗೆ ದೂರನ್ನು ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಉಪವಿಭಾಗಾಧಕಾರಿಗಳ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಿ, ತನಿಖೆ ಪ್ರಗತಿಯ ಹಂತದಲ್ಲಿರುತ್ತದೆ ಎಂದರು. ಸ್ವಯಂ ತನಿಖಾ ಅಧಿಕಾರಿಯಂತೆ ಚರ್ಚ್‍ಗಳಿಗೆ ಭೇಟಿ ನೀಡಿ, ಅದರ ಛಾಯ ಚಿತ್ರಗಳನ್ನು ತೆಗೆದು, ಗುರುಗಳನ್ನು, ಸಿಸ್ಟಗಳನ್ನು ಮತ್ತು ಮಹಿಳಾ ಸದ್ಯಸರನ್ನು ಬ್ಲಾಕ್ ಮೇಲ್ ಮಾಡುತ್ತಿರುವುದಾಗಿ ತಮ್ಮ ಅಳಲು ತೋಡಿಕೊಂಡರು.

      7 ಚರ್ಚ್‍ಗಳಿಗೆ ದೂರುದಾರ ಹೇಳಿರುವ ಪ್ರಕಾರ 15 ಕೋಟಿ ಎಂದು ಸುಳ್ಳು ಆರೋಪ ಮಾಡಿದ್ದಾರೆ. ವಾಸ್ತವಿಕವಾಗಿ ಮಂಜೂರಾಗಿರುವ ಹಣ 7 ಕೋಟಿ 20 ಲಕ್ಷ ರೂಗಳು. ಬಿಡುಗಡೆಯಾದ ಹಣ 6ಕೋಟಿ 11 ಲಕ್ಷ 50 ಸಾವಿರ ರೂಗಳು. ಇಡೀ ಜಿಲ್ಲೆಯ ಕೈಸ್ತ ಭಕ್ತಾದಿಗಳಿಗೆ ಮತ್ತು ಚರ್ಚ್ ಗುರುಗಳಿಗೆ, ಸಿಸ್ಟರಗಳಿಗೆ ಮತ್ತು ಮಹಿಳಾ ಸದ್ಯಸರು ಸುಮಾರು 6 ತಿಂಗಳಿನಿಂದ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು, ಹಾಗೂ ಕಾಮಗಾರಿಗಳಿಗೆ ಅಡಚಣೆಯನ್ನುಂಟು ಮಾಡುತ್ತಿರುವ ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿರುವ ಫ್ರಾನ್ಸಿಸ್ ಕ್ಷೇವಿಯರ್ ವಿರುದ್ದ ಮಗ್ರ ತನಿಖೆಯನ್ನು ನಡೆಸಿ ಕಾನೂನಾತ್ಮಕವಾಗಿ ಕ್ರಮ ಜರುಗಿಸ ಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

     ಸಂಸದ ಪ್ರಜ್ವಲ್ ರೇವಣ್ಣ: 

      ಸಂಸದರಾದ ಪ್ರಜ್ವಲ್ ರೇವಣ್ಣ ಮಾತನಾಡಿ, ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ಲೋಕೋಪಯೋಗಿ ಮಂತ್ರಿಯಾದ ವೇಳೆ ಎಲ್ಲಾ ಕ್ರೈಸ್ತ ಸಮಾಜಕ್ಕೆ ಸೇರಿ ಸುಮಾರು ಏಳುವರೆ ಕೋಟಿ ರೂಗಳ ವರೆಗೂ ಕೆಲಸ ನಡೆದಿದೆ. ಇನ್ನು ಒಂದುವರೆ ಕೋಟಿ ರೂಗಳ ಬಿಲ್ ಆಗಿರುವುದಿಲ್ಲ. ಹಾಸನ ನಗರ ವಾಸಿ ಫ್ರಾನ್ಸಿಸ್ ಕ್ಷೇವಿಯರ್ ಎನ್ನುವ ವ್ಯಕ್ತಿ ಸರಕಾರದಿಂದ ಬಂದಿರುವ ಹಣದಲ್ಲಿ ಬಹಳಷ್ಟು ಭ್ರಷ್ಟಚಾರ ನಡೆದಿದೆ ಎಂದು ಆರೋಪ ಮಾಡಿ ಪ್ರಕರಣ ಕೂಡ ದಾಖಲಿಸಿದ್ದಾರೆ ಎಂದರು. ನಂತರ ಹಣ ನನಗೆ ಹಣ ಕೊಟ್ಟರೇ ಕೇಸು ವಾಪಸ್ ತೆಗೆದುಕೊಳ್ಳುವುದಾಗಿ ಬೇಡಿಕೆ ಮುಂದಿಟ್ಟಿದ್ದಾನೆ. ಇಂತಹ ಒಬ್ಬ ಭ್ರಷ್ಟ ವ್ಯಕ್ತಿ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಹೋದರೇ ದೂರು ದಾಖಲಿಸುತ್ತಿಲ್ಲ ಎಂದು ದೂರಿದರು. ಜೆಡಿಎಸ್ ಅಧಿಕಾರವಧಿಯಲ್ಲಿ ಕ್ರೈಸ್ತರಿಗೆ ಅನುಧಾನ ಕೊಡಲಾಗಿತ್ತು. ಪ್ರಾನ್ಸಿಸ್ ಹೇಳಿರುವಾಗೆ 16 ಕೋಟಿ ಅನುದಾನ ನೀಡಿರುವುದಿಲ್ಲ. ಏಳುವರೆ ಕೋಟಿ ರೂಗಳ ಅನುಧಾನ ಕೊಡಲಾಗಿದೆ. ತಕ್ಷಣದಲ್ಲಿ ಈ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಹೇಳಲಾಗುವುದು ಎಂದು ಹೇಳಿದರು. 

      ಪ್ರತಿಭಟನೆಯಲ್ಲಿ ಶ್ರೇಷ್ಟ ಗುರುಗಳಾದ ರೊನಾಲ್ಡ್ ಕರ್ಡೋಸಾ, ಡೆವಿಡ್ ಪ್ರಕಾಶ್, ಜಿ.ಎಸ್. ಥಾಮಸ್, ಫಾದರ್ ಡೆವಿಡ್ ಅಂತೋನಪ್ಪ, ಫಾದರ್ ಮೋಸೆಸ್, ಮೇರಿ ಅಂತೋನಪ್ಪ, ಶಾಂತರಾಜು ಹಾಗೂ ಕ್ರೈಸ್ತ ಮುಖಂಡರುಗಳು, ಭಕ್ತಾಧಿಗಳು, ಗುರುಗಳು ಮತ್ತು ಕನ್ಯಾಸ್ತ್ರೀಯರು ಪಾಲ್ಗೊಂಡಿದ್ದರು.


Post a Comment

Previous Post Next Post