ಮಲೆನಾಡು ವೀರಶೈವ ಸಮಾಜ ವೇದಿಕೆಯ ಪದಗ್ರಹಣ

  ಹಾಸನ;-  ಸುತ್ತೂರು ಮಠಕ್ಕೆ ಸುಮಾರು ಒಂದು ಸಾವಿರ ಇತಿಹಾಸವಿದ್ದು ಶ್ರೀ ಮಠವು ನಿರಂತರವಾಗಿ ಸಾಮಾಜಿಕ. ಧಾರ್ಮಿಕ ಶೈಕ್ಷಣಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಮಾಜಿ ಶಾಸಕ ಹಾಗೂ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಅರ್. ಗುರುದೇವ್ ತಿಳಿಸಿದರು.
ಸಕಲೇಶಪುರ ತಾಲ್ಲೂಕು ಬಾಗೆ ಗ್ರಾಮದಲ್ಲಿರುವ ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಯ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆ, ಮಲೆನಾಡು ವೀರಶೈವ ಸಮಾಜ, ವೇದಿಕೆಯಿಂದ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಸಕಲೇಶಪುರ ತಾಲ್ಲೂಕು ಶ.ಸಾ.ಪ. ಅಧ್ಯಕ್ಷರಾದ ಬಿ.ಡಿ. ಬಸವಣ್ಣ ಅವರಿಗೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ.ಎನ್. ಕುಮಾರಸ್ವಾಮಿ ಅಧಿಕಾರ ಪತ್ರ ನೀಡಿದ ಸಭೆಯಲ್ಲಿ  ಮಾತನಾಡಿದ ಅವರು ನಾವುಗಳು ಭೂಮಿಗೆ ಬಿತ್ತಿದ ಬೀಜಕ್ಕೆ ನೀರು ಹೇಗೆ ಅವಶ್ಯವೋ ಹಾಗೂ ಧರ್ಮಕ್ಕೆ ನೀತಿ ಅಷ್ಟೇ ಅವಶ್ಯಕತೆವೆಂಬುದರ ಹಾಗೆ ಈ ಹಿಂದಿನ ಎಷ್ಟೋ ಸಮಾಜದ ಸಂಘ ಸಂಸ್ಥೆಗಳು ನಶಿಸಿ ಹೋಗುವ ಪರಿಸ್ಥಿತಿ ಬಂದಿದೆ. ಸಂಘ ಸಂಸ್ಥೆಗಳು ನಡೆಸಲು ಅಷ್ಟು ಸುಲಭವಲ್ಲ ಅದ್ದರಿಂದ ಸಂಘಗಳು ನಡೆಸಲು ಇಂತಹ ಸಮಾಜ ಸೇವೆ ಮಾಡುವಂತಹ ವ್ಯಕ್ತಿಗಳು ಮಂದೆ ಬಂದು. ಸಮಾಜದ ಧರ್ಮ ಜಾಗ್ರತಿ ಕಡೆ ಹೆಚ್ಚಿನ ಸಹಕಾರ ನೀಡುವಂತೆ ನೂತನ ಅಧ್ಯಕ್ಷರು ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.
 
ಸಕಲೇಶಪುರ ತಹಸಿಲ್ದಾರ್ ಡಾ. ಮಂಜುನಾಥ ಮಾತನಾಡಿ ಸುತ್ತೂರು ಜಗದ್ದುರುಗಳ ಅತ್ಮವು ಶ್ರೀ ಜಗಜ್ಯೋತಿ ಬಸವಣ್ಣನವರ ತತ್ವಪಾಲನೆಯಲ್ಲಿ ತೊಡಗಿಸಿಕೊಂಡು ಕಾಯಕ ಮಾಡಿದ ಮಹಾಚೇತನರಾಗಿ, ಸಮಾಜದ ಜನರ ಕಾಯಕತ್ವ, ಶ್ರದ್ಧೆ, ಭಕ್ತಿ ಬರುವಂತೆ ಶ್ರೀಗಳು ಮಾಡಿದ್ಧಾರೆ. ವಚನಗಳಲ್ಲಿ ಇರುವ ಚಿಂತನೆ ಅಧ್ಬುತವಾದುದು. ಅವುಗಳನ್ನು ಜನಸಾಮಾನ್ಯರಿಗೆ ತಪುಪಿಸುವಂತಹ ಕೆಲಸ ಇಂದು ಆಗಬೇಕಿದೆ. ಇಂದು ಸಮಾಜದಲ್ಲಿ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಇದಕ್ಕೆ ಪರಸ್ಪರ ಸಾಮರಸ್ಯಸದ ಕೊರತೆ ಕಾರಣವಾಗಿದೆ. ಸ್ತ್ರೀ ಶೋಷಣೆ, ಪರಿಸರ ಶೋಷಣೆಗಳು ಅಧಿಕವಾಗಿದೆ. ಎಂದು ನುಡಿದ ಅವರು ನೊಂದವರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಆಗಬೇಕು. ವಚನಗಳನ್ನು ಅರ್ಥೈಸಿಕೊಂಡವರಿಗೆ ಉತ್ತಮ ಬದುಕಿಗೆ ಅದು ದಾರಿಯಾಗಬಲ್ಲದು ಎಂದು ನುಡಿದರು.

ಸಕಲೇಶಪುರ ತಾಲ್ಲೂಕು ಸರಣ ಸಾಹಿತ್ಯ ಪರಿಷತ್ತು ಬಿ.ಡಿ. ಬಸವಣ್ಣ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ  ಸಕಲೇಶಪುರ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದೀರಿ. ತಾಲ್ಲೂಕು ಪರಿಷತ್ತಿನ ಅಧ್ಯಕ್ಷ ಸ್ಥಾನದ ಒಪ್ಪಿಗೆ ಪತ್ರವನ್ನು ಪಡೆದುಕೊಂಡಿದ್ದೇನೆ. ಮತ್ತು ತಮ್ಮೆಲ್ಲರ ಸಲಹೆ ಸೂಚನೆ ಮೇರೆಗೆ ಶರಣರ ವೈಚಾರಿಕ ಚಿಂತನೆಗಳನ್ನು ಜನ ಮಾನಸಕ್ಕೆ ಮುಟ್ಟಿಸುವಲ್ಲಿ ತಾಲ್ಲೂಕಿನಲ್ಲಿ ಈಗಾಗಲೇ ಈ ಹಿಂದೆಯೂ ಸಹ ನಾವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಸಮಿತಿಯೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದು ಮುಂದೆಯೂ ಮಾಡುತ್ತೇವೆ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಮಾತನಾಡಿ ಸುತ್ತೂರು ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರಮಹಾಸ್ವಾಮೀಜಿÀಯವರು ಹಾಕಿಕೊಟ್ಟ ಶಿವ ಶರಣರ ವಿಚಾರ ಧಾರೆಗಳು ಹಾಗೂ ವಚನ ಸಾಹಿತ್ಯ ಪ್ರತಿ ಶಾಲಾ ಕಾಳೇಜುಗಳು ಹಾಗೂ ಮನೆ-ಮನೆಗೂ ಪ್ರತಿಮನಕ್ಕೂ ಮುಟ್ಟುವಂತೆ ಮಾಡಬೇಕು ಎಂದು ಮನವಿ ಮಾಡಿದರು.

 ಸಭೆಯಲ್ಲಿ ಮಲೇನಾಡು ವೀರಶೈವ ಸಮಾಜದ ಅಧ್ಯಕ್ಷ ದೇವರಾಜ್, ಗುರುದೇವ್ ಕಲ್ಯಾಣ ಮಂಟಪ ಸಮಿತಿ ಕಾರ್ಯದರ್ಶಿ ವಿದ್ಯಾಶಂಕರ್, ವೀರಶೈವ ಸಮಾಜದ ಅಧ್ಯಕ್ಷ  ಬಕಾರ್ಯದರ್ಶಿ ಧರ್ಮಪ್ಪ, ಸಕಲೇಶಪುರ ಮಹಾಸಭಾ ಅಧ್ಯಕ್ಷ ಯತೀಶ್, ಯುವ ವೇದಿಕೆ ಅಧ್ಯಕ್ಷ ನರೇಶ್, ನೌಕರರ ಸಂಘದ ಅಧ್ಯಕ್ಷ ಲಿಂಗದೇವರು, ಜೆಎಸ್.ಎಸ್. ಸಂಸ್ಥೆಯ ಸಂಯೋಜಕ ಮಂಜುನಾಥ್, ಪ್ರಾಂಶುಪಾಲ ಮಧುಕುಮಾರ್, ಲೋಹಿತ್, ತಾ.ಪಂ. ಸದಸ್ಯ ಯಡೇಹಳ್ಳಿ ಅರ್. ಮಂಜುನಾಥ್, ಕು. ಪೂಜಾ ಮುಂತಾದವರು ಭಾಗವಹಿಸಿದ್ದರು. ಮೀನಾಕ್ಷಿಖಾದರ್ ನಿರೂಪಿಸಿ, ಮಂಜುನಾಥ್ ವಂದಿಸಿದರು.
                       

Post a Comment

Previous Post Next Post