ಬಣಕಲ್‍ನಲ್ಲಿ ಫಲಾನುಭವಿಗಳಿಗೆ ಕೋಳಿಮರಿ ವಿತರಣೆ

ಕೊಟ್ಟಿಗೆಹಾರ:ಬಣಕಲ್‍ನಲ್ಲಿ ಜಿ.ಪಂ ವತಿಯಿಂದ 54  ಫಲಾನುಭವಿಗಳಿಗೆ ಕೋಳಿಮರಿಗಳನ್ನು ವಿತರಿಸಲಾಯಿತು.
ಜಿ.ಪಂ ಸದಸ್ಯ ಶಾಮಣ್ಣ ಮಾತನಾಡಿ ಬಣಕಲ್, ಮೂಡಿಗೆರೆ, ಜನ್ನಾಪುರ,  ಕಳಸ ಹೋಬಳಿಗಳಲ್ಲಿ 5 ವಾರದ ಕೋಳಿಮರಿಗಳನ್ನು ಜಿ.ಪಂ ಸದಸ್ಯರ ನೇತೃತ್ವದಲ್ಲಿ ವಿತರಿಸಲಾಗಿದೆ. ಕೋಳಿ ಸಾಕಾಣಿಕೆಯೂ ಲಾಭದಾಯಕವಾಗಿದ್ದು ಕೃಷಿಕರು ಕೃಷಿಯೊಂದಿಗೆ ಕೋಳಿಸಾಕಣೆಯನ್ನು ಮಾಡಿದರೆ ಉಪ ಆದಾಯ ದೊರಕುತ್ತದೆ ಎಂದರು.
ಈ ಸಂದರ್ಭದಲ್ಲಿ ಮೂಡಿಗೆರೆ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಮನು, ಪಶು ವೈದ್ಯರಾದ ರಮಿತ್, ಜಾನುವಾರು ಅಧಿಕಾರಿಗಳಾದ ಅಜೀಜ್, ಬಸವರಾಜ್ ಕೋಟಿ, ಫಲಾನುಭವಿಗಳಾದ ಕೃಷ್ಣ ಟೈಲರ್, ಜಾವಳಿ ಗ್ರಾ.ಪಂ ಸದಸ್ಯ ಮಂಜುನಾಥ್ ಇದ್ದರು.

Post a Comment

Previous Post Next Post