ಬಳಿ ರೈತರ ಜಮೀನಿಗೆ ನೀರು ನುಗ್ಗಿ ನಷ್ಟವಾಗಿದ್ದು ರೈತರ ನೋವಿಗೆ ಸ್ಪಂದಿಸಬೇಕು : ಎಂ.ಎ. ಗೋಪಾಲಸ್ವಾಮಿ


ಜುಟ್ಟನಹಳ್ಳಿ-ಹಿರಿಸಾವೆ ಏತ ನೀರಾವರಿ ಕಾಮಗಾರಿಯಲ್ಲಿ ಬಸವನಹಳ್ಳಿ ಬಳಿ ರೈತರ ಜಮೀನಿಗೆ ನೀರು ನುಗ್ಗಿ ನಷ್ಟವಾಗಿದ್ದು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ರೈತರ ನೋವಿಗೆ ಸ್ಪಂದಿಸಬೇಕು ಎಂದು ಎಂಎಲ್.ಸಿ. ಎಂ.ಎ. ಗೋಪಾಲಸ್ವಾಮಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಹೇಳಿದ್ದಾರೆ.
ಶ್ರವಣಬೆಳಗೊಳ ಸಮೀಪದ ಬಸವನಹಳ್ಳಿ ಗ್ರಾಮದ ಬಳಿ ನಡೆಯುತ್ತಿರುವ ಏತನೀರಾವರಿ ಯೋಜನೆ ಕಾಮಗಾರಿ ವೀಕ್ಷಿಸಿ ಈ ಭಾಗದಲ್ಲಿನ ರೈತರ ಸಮಸ್ಯೆ ಆಲಿಸಿದ ಎಂ.ಎಲ್.ಸಿ ಗೋಪಾಲಸ್ವಾಮಿ ಅವರು ಚಲ್ಯ ಸುತ್ತಲ ಗ್ರಾಮದ ರೈತರ ಜಮೀನಿಗೆ ನೀರು ನುಗ್ಗಿ ಗೊಬ್ಬರ, ಮಣ್ಣು, ಬೆಳೆ ಹಾಳಾಗಿ ಕೊಚ್ಚಿ ಹೋಗಿದೆ. ಇದಕ್ಕೆ ಯಾರು ಹೊಣೆ? ಎಂದರು. ಏತನೀರಾವರಿ ಯೋಜನೆಗಳಿಗೆ ರೈತರು ಜಮೀನು ನೀಡಿದ್ದು, ಅವರಿಗೆ ಭೂ ಪರಿಹಾರ ನೀಡಬೇಕು. ಗುತ್ತಿಗೆದಾರರಿಗೆ ಹಣ ನೀಡುವಂತೆ ರೈತರಿಗೂ ಹಣ ನೀಡಿಕೆಯಾಗಬೇಕು. ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇನೆ. ನಮ್ಮ ನಾಯಕ ಸಿದ್ದರಾಮಯ್ಯನವರಿಗೆ ತಿಳಿಸುತ್ತೇನೆ. ಭೂಸ್ವಾಧೀನದ ಹಣ ನೀಡದಿದ್ದರೆ ಧರಣಿ ಮಾಡುವ ಎಚ್ಚರಿಕೆ ನೀಡಿದ್ದಾರೆ. ಜುಟ್ಟನಹಳ್ಳಿ ಏತನೀರಾವರಿ ಯೋಜನೆಗೆ ಹಲವು ತಾಂತ್ರಿಕ ಅಡ್ಡಿಗಳಿದೆ ಅವುಗಳನ್ನು ಪರಿಹರಿಸಬೇಕಾಗಿದೆ. ಈ ಯೋಜನೆಯಿಂದ 11 ಕೆರೆಗಳು, 7 ಕಟ್ಟೆಗಳಿಗೆ ನೀರು ಹರಿಸಲಾಗುತ್ತದೆ. 15 ದಿನಗಳಲ್ಲಿ ಮತಿಘಟ್ಟ ಕೆರೆಗೆ ನೀರು ಹರಿಯಲಿದೆ ಎಂಬ ವಿಶ್ವಾಸವನ್ನು ಗೋಪಾಸ್ವಾಮಿ ವ್ಯಕ್ತಪಡಿಸಿದರು. ತಾ//ಪಂ// ಅಧ್ಯಕ್ಷೆ ಶ್ಯಾಮಲಾ ಉದಯಕುಮಾರ್ ಈ ಸಂದರ್ಭದಲ್ಲಿದ್ದರು.

Post a Comment

Previous Post Next Post