ಬಿಗ್ ಬ್ರೇಕಿಂಗ್ ನ್ಯೂಸ್- ಪವರ್ ಟಿವಿ ರೆಹಮನ್ ಪೋಲಿಸ್ ವಶಕ್ಕೆ

ಸಿಎಂ ಯಡಿಯೂರಪ್ಪ ರವರ ಮಗ ವಿಜಯೇಂದ್ರನ ಭ್ರಷ್ಟಾಚಾರದ ಬಗ್ಗೆ ವರದಿ ಪ್ರಸಾರ ಮಾಡಿದ್ದಕ್ಕಾಗಿ ಪವರ್ ಟಿವಿ ಎಂಡಿ ಮನೆ ಮೇಲೆ ಬೆಳಿಗ್ಗೆನೇ ಪೋಲಿಸರು ದಾಳಿ ಮಾಡಿ ಮಾಡಿದ್ದಾರೆ.



ಇದುಮಾಧ್ಯಮ ಸ್ವಾತಂತ್ರ್ಯದ ಹತ್ತಿಕ್ಕುವ ಪ್ರಯತ್ನ ಎಂದು ಪವರ್ ಟಿವಿ ಹೇಳುತ್ತಿದೆ. ಹಾಗೇಯೆ ಪ್ರಿನ್ಸಿಪಲ್ ಎಡಿಟರ್ ರೆಹಮಾನ್ ರನ್ನು ವಶಕ್ಕೆ ತೆಗೆದುಕೊಂಡ ಹೋಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವರದಿ ನಿರೀಕ್ಷಿಸಲಾಗುತ್ತಿದೆ.

 

ಯಾವುದೇ ಸರ್ಚ್ ವಾರೆಂಟ್ ಇಲ್ಲದೇ ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಮನೆ ಮೇಲೆ ಎಂಟು ಜನ ಪೋಲಿಸ್ ತಂಡ ದಾಳಿ ಮಾಡಿದೆ ಎಂದು ಆರೋಪಿಸಲಾಗಿದೆ.ರಾಕೇಶ್ ಶೆಟ್ಟಿಯವರ ಪತ್ನಿಯ ಮೊಬೈಲ್ ಫೋನ್ ವಶಕ್ಕೆ ತೆಗೆದುಕೊಂಡಿದ್ದಾರಂತೆ. ಹಾಗೂ ಪೋಲಿಸರು ಗೃಹ ಇಲಾಖೆಗೆ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಪವರ್ ಟಿವಿ ವರದಿ ಮಾಡಿದೆ.

 

ಸರ್ಕಾರದ ನಡೆ ಖಂಡಿಸಿ ಪವರ್ ಟಿವಿ ಆಫೀಸಿನ ಮುಂದೆ ಭಗತ್ ಸೇನೆ ಪವರ್ ಟಿವಿಯನ್ನು ಬೆಂಬಲಿಸಿ ಪ್ರತಿಭಟನೆ ಮಾಡುತ್ತಿದೆ

Post a Comment

Previous Post Next Post