ಹಾಸನ ಜಿಲ್ಲೆಯಲ್ಲಿ ಗಾಬರಿಯಾಗೊ ಪ್ರಮಾಣದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ : ಡಿಸಿ ಆರ್ ಗಿರೀಶ್

ಹಾಸನ: ಹಾಸನ ಜಿಲ್ಲೆಯಲ್ಲಿ ಗಾಬರಿಯಾಗೊ ಪ್ರಮಾಣದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ
ಹಾಸನದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ ಡಿಸಿ ಆರ್ ಗಿರೀಶ್
ಜಿಲ್ಲೆಯಲ್ಲಿ ಒಟ್ಟು12 ಸಾವಿರ ಸೋಂಕಿತರು ಪತ್ತೆ, 247 ಜನ ಮೃತ

ಜನರು ಬಲು ಎಚ್ಚರಿಕೆಯಿಂದ ಇರಬೇಕು

ಜಿಲ್ಲೆಯ ಶೇ.70 ಸೋಂಕಿತರಿಗೆ ಯಾವುದೇ ರೋಗ ಲಕ್ಷಣ ಕಂಡು ಬರುತ್ತಿಲ್ಲ

ಆದರೂ ಜನರು ಪರೀಕ್ಷೆ ಮಾಡಿಸಿ ಕೊಳ್ಳದಿದ್ದರೆ ಅಪಾಯ ಹೆಚ್ಚಾಗಲಿದೆ

ಸಾರ್ವಜನಿಕರು ರೋಗದ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿಲ್ಲ

ಉದಾಸೀನ ತೋರದೆ ಜನರು ಎಚ್ಚರಿಕೆಯಿಂದ ಇರಬೇಕು

ಜನರು ಗಾಬರಿಪಡದೆ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಮಾಡಿಸಿಕೊಂಡು ಜಾಗ್ರತೆ ವಹಿಸಿ

ಡಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮನವಿ ಮಾಡಿದ ಡಿಸಿ ಆರ್ ಗಿರೀಶ್

ಜಿಲ್ಲೆಯ 26 ಸ್ಥಳಗಳನ್ನು ಕೊರೊನಾ ಹಾಟ್ ಸ್ಪಾಟ್ ಆಗಿ ಗುರುತಿಸಲಾಗಿದೆ

ಅಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ


ಜಿಲ್ಲೆಯಲ್ಲಿ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹೆಚ್ಚುತ್ತಿರುವುದರಿಂದ ಜಿಲ್ಲಾಡಳಿತ ಸಾರ್ವಜನಿಕರಿಗೆ ಈ ಕೆಳಕಂಡಂತೆ ಮನವಿ ಮಾಡಿದೆ
.

1. ಜಿಲ್ಲೆಯಲ್ಲಿ ಶೇ 70 ರಷ್ಟು ಸೋಂಕಿತ ಪ್ರಕರಣಗಳು ರೋಗ ಲಕ್ಷಣಗಳನ್ನು ಹೊಂದಿಲ್ಲದ ಪ್ರಕರಣಗಳಾಗಿವೆ, ಈ ಹಿನ್ನಲೆಯಲ್ಲಿ ಆರೋಗ್ಯ ಇಲಾಖಾ ಸಿಬ್ಬಂದಿ ರೋಗ ಲಕ್ಷಣಗಳನ್ನು ಹೊಂದಿಲ್ಲದೇ ಇರುವವರನ್ನು ಸಹ ತಪಾಸಣೆ ನಡೆಸುತ್ತಿದ್ದು ಅವರೊಂದಿಗೆ ಸಹಕರಿಸಲು ಕೋರಿದೆ.

2. ರೋಗ ಲಕ್ಷಣಗಳನ್ನು ಹೊಂದಿಲ್ಲದ ಸೋಂಕಿತರನ್ನು ಗುರುತಿಸಲು ವಿಳಂಭವಾದಲ್ಲಿ ಅವರಿಂದ ಇನ್ನಷ್ಟು ಜನರಿಗೆ ಸೋಂಕು ಹಬ್ಬುವ ಸಾಧ್ಯತೆ ಇದೆ.

3. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಸಾವು ಸಂಭವಿಸಿದ್ದು ಇದಕ್ಕೆ ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವುದು ಪ್ರಮುಖ ಕಾರಣವಾಗಿದೆ. 
ಬಹಳಷ್ಟು ಜನರು ರೋಗ ಲಕ್ಷಣಗಳನ್ನು ನಿರ್ಲಕ್ಷಿಸಿ ಕೊನೆಯ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭವಿಸುತ್ತಿದೆ. ಆದ್ದರಿಂದ ಯಾವುದೇ ರೋಗ ಲಕ್ಷಣಗಳನ್ನು ನಿರ್ಲಕ್ಷಿಸದೆ ಕೊರೋನಾ ಚಿಕಿತ್ಸೆ ಪಡೆಯಲು ಕೋರಿದೆ.

4. ವಯೋ ವೃದ್ದರು, ರಕ್ತದೊತ್ತಡ, ಮಧುಮೇಹ ಇತ್ಯಾದಿ ರೋಗ ಲಕ್ಷಣಗಳನ್ನು ಹೊಂದಿರುವವರು ಕೊರೋನಾಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದ್ದು ಇಂತಹವರು ರೋಗ ಲಕ್ಷಣ ಇಲ್ಲದಿದ್ದರು ಸಹ ಕೋವಿಡ್ ಪರೀಕ್ಷಿಸಿಕೊಳ್ಳುವುದು ಅಗತ್ಯ.

5. ಜಿಲ್ಲೆಯಲ್ಲಿ ಈಗಾಗಲೇ ಸುಮಾರು 26 ಸ್ಥಳಗಳಲ್ಲಿ ಕೊರೋನಾ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿದ್ದು, ಕೊರೋನಾ ಹಾಟ್ ಸ್ಪಾಟ್‍ಗಳಾಗಿ ಮಾರ್ಪಡಾಗಿದೆ. ಈ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಹೆಚ್ಚಿನ ತಪಾಸಣೆ ನಡೆಯುತ್ತಿದ್ದು ಪ್ರತಿಯೊಬ್ಬರು ತಪಾಸಣೆಗೆ ಒಳಪಡುವಂತೆ ಕೋರಿದೆ.

6. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದಕೊಳ್ಳುವುದು ಕಡ್ಡಾಯವಾಗಿದೆ ಇದನ್ನು ಉಲ್ಲಂಘಿಸುವವರ ವಿರುದ್ದ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಜಾಗ್ರತರಾಗಿ ಜಿಲ್ಲಾಡಳಿತದೊಂದಿಗೆ ಸಹಕರಿಸಲು ಮನವಿ.

Post a Comment

Previous Post Next Post